ADVERTISEMENT

ಕಾಯಕ ಶ್ರದ್ಧೆಯ ಹರಿಕಾರ ಬಸವಣ್ಣ

ಬಸವ ಜಯಂತಿ: ಸಾಂಸ್ಕೃತಿಕ ಕಾರ್ಯಕ್ರಮ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಮೇ 2017, 6:12 IST
Last Updated 1 ಮೇ 2017, 6:12 IST

ಮೈಸೂರು:  ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ಸಾಮಾಜಿಕ ಬದುಕಿನ ಕಣ್ಣುಗಳು ಎಂದು ಶಾಸಕಿ ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್‌) ಹೇಳಿದರು.

ಬಸವ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಸಂಘಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ನಗರ ದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದರು.

‘ಸ್ತ್ರೀಶಕ್ತಿಗೆ 12ನೇ ಶತಮಾನ ಕ್ರಾಂತಿಯೇ ಮೂಲ. ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಬಸವಣ್ಣನವರು ಶ್ರಮಿಸಿದರು. ಇಷ್ಟಲಿಂಗ ಕಲ್ಪನೆಯನ್ನು ನೀಡಿದರು. ವೃತ್ತಿ ಮತ್ತು ಜಾತಿಯಲ್ಲಿನ ಮೇಲುಕೀಳುಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು’ ಎಂದರು.

‘ಬಸವಣ್ಣನವರು ಸಮಾಜ ಸುಧಾರ ಣೆಗೆ ಜೀವನವನ್ನೇ ಮುಡಿಪಾಗಿಟ್ಟ ಮಾನವತಾವಾದಿ. ಕಾಯಕ ಎಂದರೆ ದೇಹ ದಂಡಿಸಿ ಕೆಲಸ ಮಾಡುವುದು ಎಂಬುದನ್ನು ಸಾರಿದರು’ ಎಂದರು.

ಕರ್ನಾಟಕ ರಾಜ್ಯ ಡಾ.ಗಂಗೂ ಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸರ್ವಮಂಗಳಾ ಶಂಕರ್‌ ಮಾತನಾಡಿ, ‘ವಚನ ಕೈಂಕರ್ಯವು ಸಂಗೀತ ಲೋಕವನ್ನು ಅದ್ಭುತವಾಗಿ ಬೆಳೆಸಿದೆ. ಶೈಕ್ಷಣಿಕ, ಸಾಂಸ್ಕೃತಿಕ ಲೋಕ ವನ್ನು ಶ್ರೀಮಂತಗೊಳಿಸಿದೆ’ ಎಂದರು.

‘ಸಾಂಸ್ಕೃತಿಕ, ಕಲಾ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುವಂತೆ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಕಲೆ ಅಭ್ಯಾಸವು ಏಕಾಗ್ರತೆಯನ್ನು ಮೈಗೂಡಿ ಸುತ್ತದೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಇದು ಸಹಕಾರಿ’ ಎಂದರು.

ಬಾಲನಟಿ ಸಿರಿ ವಾನಳ್ಳಿ, ‘ಸಿನಿಮಾ ಮೂಲಕ ಅಕ್ಷರಸ್ಥರಿಂದ ಅನಕ್ಷರಸ್ಥವರೆಗೆ ಎಲ್ಲರನ್ನೂ ತಲುಪಬಹು ದಾಗಿದೆ. ಸಿನಿಮಾದಲ್ಲಿ ಮನರಂಜನೆ ಜತೆಗೆ ಸಮಾಜದ ಒಳಿತು ಇರುತ್ತದೆ. ಜನತೆ ಸಿನಿಮಾದಲ್ಲಿನ ಒಳ್ಳೆಯ ಅಂಶಗಳನ್ನು ಗುರುತಿಸಿ ಕಲಾವಿದರನ್ನು ಪ್ರೋತ್ಸಾಹಿ ಸಬೇಕು’ ಎಂದರು.

ನಟ ಸುನೀಲ್‌ (ಡಾರ್ಲಿಂಗ್ ಕೃಷ್ಣ), ಶಿಸ್ತು ಮತ್ತು ಪರಿಶ್ರಮ ಇದ್ದರೆ ಯಾವ ಸಾಧನೆಯೂ ಅಸಾಧ್ಯ ವಲ್ಲ ಎಂದರು.  ಬಸವ ಬಳಗಗಳ ಮಹಿಳೆಯರು, ಮಕ್ಕಳಿಂದ ಕರಗ, ವೀರಗಾಸೆ, ನೃತ್ಯರೂಪಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಿದವು. ಮಾತೆ ಬಸವಾಂಜಲಿದೇವಿ, ನಟಿ ಐಶ್ವರ್ಯಾ ಪ್ರಸಾದ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಜಯಾಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.