ADVERTISEMENT

‘ಕೆಂಗಲ್ ರಾಜಕಾರಣಕ್ಕೆ ಸಾಟಿ ಇಲ್ಲ’

‘ಆಧುನಿಕ ಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ’ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 8:53 IST
Last Updated 11 ಫೆಬ್ರುವರಿ 2017, 8:53 IST
ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರು ಎಚ್.ಎಂ.ನಾಗರಾಜು ಅವರ ‘ಆಧುನಿಕ ಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಜಯಪ್ಪ ಹೊನ್ನಾಳಿ, ವೈ.ಡಿ.ರಾಜಣ್ಣ, ಪದ್ಮಾಶೇಖರ್, ಸಿ.ನಾಗಣ್ಣ, ಎಚ್.ಎಂ.ನಾಗರಾಜು, ಮಡ್ಡಿಕೇರಿ ಗೋಪಾಲ್, ರಾಜಶೇಖರ ಕದಂಬ ಇದ್ದಾರೆ

ಮೈಸೂರು: ಕೆಂಗಲ್ ಹನುಮಂತಯ್ಯ ಅವರ ರಾಜಕಾರಣವನ್ನು ಇಂದಿನ ರಾಜಕಾರಣಕ್ಕೆ ಯಾವುದೇ ಬಗೆಯಲ್ಲೂ ಹೋಲಿಸಲಾಗದು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಕಸಾಪ ಸಭಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಎಚ್.ಎಂ.ನಾಗರಾಜು ಅವರ ‘ಆಧುನಿಕ ಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ನಾಗರಾಜು ಅವರ ಕೃತಿಯು ಒಪ್ಪವಾಗಿ, ಚೊಕ್ಕವಾಗಿ ರಚಿತವಾಗಿದೆ. ಹನುಮಂತಯ್ಯ ಅವರ ಗ್ರಾಮೀಣ ಬದುಕಿನ ಸಂಗತಿಗಳನ್ನು ಲೇಖಕರು ಸುಂದರವಾಗಿ ರಚಿಸಿದ್ದಾರೆ ಎಂದು ಶ್ಲಾಘಿಸಿದರು.

ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತ ನಾಡಿ, ಪ್ರಸ್ತುತ ಕುಲಗೆಟ್ಟು ಹೋಗಿರುವ ರಾಜಕಾರಣಕ್ಕೆ ಇಂತಹದ್ದೊಂದು ಕೃತಿಯ ಅನಿವಾರ್ಯತೆ ನಿರ್ಮಾಣ ವಾಗಿತ್ತು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಹಾಗೂ ಶಂಕರೇಗೌಡ ಅವರ ಆದರ್ಶಗಳು ಇಂದಿನವರಿಗೆ ಮಾತ್ರವಲ್ಲ ಮುಂದಿನ ಪೀಳಿಗೆಯ ವರಿಗೂ ಅಗತ್ಯ ಇದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ. ರಾಜಣ್ಣ, ಲೇಖಕ ಸಿ.ನಾಗಣ್ಣ, ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಲೇಖಕ ಎಚ್.ಎಂ.ನಾಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.