ADVERTISEMENT

ಕ್ರೀಡಾಕ್ಷೇತ್ರ; ಸಾಧಕರಿಗೆ ನಗದು ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 6:05 IST
Last Updated 13 ಏಪ್ರಿಲ್ 2017, 6:05 IST

ಮೈಸೂರು: ಅಖಿಲ ಭಾರತ ಅಂತರ ವಿ.ವಿ, ದಕ್ಷಿಣ ವಲಯ, ಅಂತರ ಕಾಲೇಜು ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಅವರು ಈ ಅಥ್ಲೀಟ್‌ಗಳಿಗೆ ನಗದು ಬಹುಮಾನ ನೀಡಿದರು.

‘ಕ್ರೀಡೆಯ ಜೊತೆಗೆ ಓದಿಗೂ ಪ್ರಾಮುಖ್ಯ ನೀಡಬೇಕು. ಇದು ಸ್ಪರ್ಧಾತ್ಮಕ ಯುಗ. ಯಾವುದೇ ಹುದ್ದೆ ಪಡೆಯಲು ವಿದ್ಯಾಭ್ಯಾಸ ಅಗತ್ಯ’ ಎಂದು ಅವರು ಸಲಹೆ ನೀಡಿದರು.ಅಂತರ ಕಾಲೇಜು ಕ್ರೀಡಾಸ್ಪರ್ಧೆ ಗಳಲ್ಲಿ ಗೆದ್ದವರು, ದಾಖಲೆ ಮಾಡಿದ ವರಿಗೆ, ಅಂತರ ಕಾಲೇಜು ಅಂತರ ವಲಯ ಕ್ರೀಡಾಕೂಟಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಯಿತು.

ಸಿಂಡಿಕೇಟ್‌ ಸದಸ್ಯ ಎಂ.ಎಸ್‌.ಎಂ. ಕುಮಾರ್‌, ಪ್ರೊ.ಎಸ್‌.ರವಿ, ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಪುಲಿಕೇಶಿ ವೈ.ಶೆಟ್ಟಪ್ಪ ನವರ್‌, ಕೃಷ್ಣಕುಮಾರ್‌ ಇದ್ದರು.ವಿಜೇತರ ಪಟ್ಟಿ ಇಂತಿದೆ: ಅಖಿಲ ಭಾರತ ಅಂತರ ವಿ.ವಿ ಕ್ರೀಡಾಕೂಟ: ಮೇಘನಾ ದೇವಾಂಗ (ಮಹಾರಾಣಿ ಕಲಾ ಕಾಲೇಜು; ಷಾಟ್‌ಪಟ್‌ನಲ್ಲಿ ಕಂಚು), ಟಿ.ಎಸ್‌.ರವಿ (ಕೋಚ್‌), ಎನ್‌.ರಮೇಶ್‌ (ವ್ಯವಸ್ಥಾಪಕ); ಎನ್‌.ಸಂಜಯ್‌, ಎಸ್‌. ನವೀನಕುಮಾರ್‌, ಎಚ್‌.ಬಿ. ಮಹದೇವ ಸ್ವಾಮಿ (ಜೆಎಸ್‌ಎಸ್‌ ಕಾಲೇಜು), ಜೆ. ಸಂಜಯಕುಮಾರ್‌ (ವಿದ್ಯಾವರ್ಧಕ ಕಾಲೇಜು), ಜೆ.ಪ್ರವೀಣಕುಮಾರ್‌, ಎಂ.ಐ.ಅಕ್ಷಯ್‌ (ಸಿಟಿಜನ್‌ ಪ್ರಥಮ ದರ್ಜೆ ಕಾಲೇಜು)–ಯೋಗಾ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ, ಬಿ.ರವಿ (ಕೋಚ್‌), ಅಂಥೋಣಿ ಮೋಸೆಸ್‌ (ಯೋಗಾ ತಂಡದ ವ್ಯವಸ್ಥಾಪಕ; ಟೆರೇಷಿಯನ್‌ ಕಾಲೇಜು)–ತಲಾ ₹ 15,000 ನಗದು.

ADVERTISEMENT

ಕೆ.ಆರ್‌.ರುಚಿತಾ, ಕೆ.ಎಸ್‌.ಪ್ರಫುಲ್ಲಾ (ಮಹಾರಾಣಿ ಕಾಲೇಜು), ಡಿ.ಪೂರ್ಣಿಮಾ, ಡಿ.ಸ್ನೇಹಾ (ಕ್ಯಾತನಹಳ್ಳಿ ಪ್ರಥಮದರ್ಜೆ ಕಾಲೇಜು), ಲತಾಶ್ರೀ, ಎಂ.ಮಂಜುಳಾ, ಕೆ.ಎಸ್‌. ಅಮೂಲ್ಯಾ, ಕೆ.ಎಸ್‌.ಮೇಘಾ, ಎಸ್‌. ಸುಷ್ಮಾ, ಕೆ.ಎಸ್‌.ಭವ್ಯಾ, ಎನ್‌.ಸುಷ್ಮಾ (ವಿದ್ಯೋದಯ ಪ್ರಥಮದರ್ಜೆ ಕಾಲೇಜು, ತಿ.ನರಸೀಪುರ), ಕೆ.ಎಂ. ಪಲ್ಲವಿ (ಭಾರತೀನಗರ)–ಕೊಕ್ಕೊನಲ್ಲಿ ಕಂಚಿನ ಪದಕ, ಬಿ.ಡಿ.ಕಾಂತರಾಜ್‌ (ಕೋಚ್), ಕೆ.ಸಿ.ಕುಮಾರಸ್ವಾಮಿ (ವ್ಯವ ಸ್ಥಾಪಕ)–ತಲಾ ₹ 10,000 ನಗದು.

ಅಂತರ ಕಾಲೇಜು ದೇಹದಾರ್ಢ್ಯ ಸ್ಪರ್ಧೆ: ಎಂ.ಶ್ರೀಧರ್‌ (ದೇಜೇಗೌ ಕಾಲೇಜು)–ಮಿಸ್ಟರ್‌ ಮೈಸೂರು ವಿ.ವಿ ಪ್ರಶಸ್ತಿ, ₹ 5,000 ನಗದು.ಅಂತರ ಕಾಲೇಜು ಕ್ರೀಡಾಕೂಟದಲ್ಲಿ ದಾಖಲೆ: ಎಂ.ಎಸ್‌.ನವ್ಯಾ ಶೆಟ್ಟಿ (ಬಿ.ಸೋಮಾನಿ ಕಾಲೇಜು–ಡಿಸ್ಕಸ್‌ ಥ್ರೋ), ವಿ.ಪ್ರಿಯಾಂಕಾ (800 ಮೀ. ಓಟ),ಎಸ್‌.ಜಿ.ಪ್ರಿಯಾಂಕಾ (ಟೆರೇಷಿಯನ್‌ ಕಾಲೇಜು; 100 ಮೀ. ಹರ್ಡಲ್ಸ್‌), ಆರ್‌.ಅರ್ಪಿತಾ (ಮಹಿಳಾ ಕಾಲೇಜು, ಮಂಡ್ಯ; 5 ಕಿ.ಮೀ ನಡಿಗೆ), ಎಚ್‌.ಆರ್‌.ಹರ್ಷಿತಾ (ಟೆರೇಷಿಯನ್ ಕಾಲೇಜು; ಹ್ಯಾಮರ್‌ ಥ್ರೋ), ಎಚ್‌.ಆರ್.ನವಮಿ, ಆರ್‌.ಎ.ಚೈತ್ರಾ, ಎಂ.ಲಿಖಿತಾ, ವಿ.ಪ್ರಿಯಾಂಕಾ (ಟೆರೇಷಿಯನ್‌ ಕಾಲೇಜು; 4x400 ಮೀ. ರಿಲೇ), ಭಕ್ಷಿತ್‌ ಸಾಲಿಯಾನ್‌ (ಬಿ.ಸೋಮಾನಿ ಕಾಲೇಜು; 400 ಮೀ. ಹರ್ಡಲ್ಸ್‌), ಜಗದೀಶ್‌ (ಬಿ.ಸೋಮಾನಿ ಕಾಲೇಜು; 4x100 ಮೀ. ರಿಲೇ), ಆರ್‌.ಸಾಗರ್‌ (ಬಿ.ಸೋಮಾನಿ ಕಾಲೇಜು; 4x100 ಮೀ. ರಿಲೇ), ಮೋಹಿತ್‌ಕುಮಾರ್‌ (ಬಿ.ಸೋಮಾನಿ ಕಾಲೇಜು; 4x100 ಮೀ. ರಿಲೇ)–ತಲಾ ₹ 5,000 ನಗದು.
ಅಂತರ ವಿ.ವಿ ಗುಡ್ಡಗಾಡು ಓಟ (ತಂಡ ಚಾಂಪಿಯನ್‌ಷಿಪ್‌): ಪುರು ಷರು: ಸ್ನಾತಕೋತ್ತರ ಕ್ರೀಡಾ ಮಂಡಳಿ, ಮಹಿಳೆಯರು: ವಿದ್ಯೋದಯ ಕಾಲೇಜು–ತಲಾ ₹ 10,000 ನಗದು.

ಅಂತರ ವಿ.ವಿ ಕಾಲೇಜು ಅಥ್ಲೆಟಿಕ್‌ ಕೂಟ–ತಂಡ ಪ್ರಶಸ್ತಿ: ಪುರುಷರು: ಸ್ನಾತಕೋತ್ತರ ಕ್ರೀಡಾ ಮಂಡಳಿ, ಮಹಿಳೆಯರು: ಟೆರೇಷಿಯನ್ ಕಾಲೇಜು–₹ 15,000 ನಗದು.ಅಂತರ ವಿ.ವಿ ಕಾಲೇಜು ಅಂತರ ವಲಯ ಕೂಟ–ತಂಡ ಪ್ರಶಸ್ತಿ: ಪುರುಷರು: ಸ್ನಾತಕೋತ್ತರ ಕ್ರೀಡಾ ಮಂಡಳಿ, ಮಹಿಳೆಯರು: ಟೆರೇಷಿಯನ್‌ ಕಾಲೇಜು–₹ 20,000 ನಗದು.

ದಕ್ಷಿಣ ವಲಯ ಅಂತರ ವಿ.ವಿ ಹಾಕಿ ಚಾಂಪಿಯನ್‌ (ಮಹಿಳೆಯರು): ಎಂ.ಪಿ. ರೋಹಿಣಿ, ಪಿ.ಪಿ.ರೇಷ್ಮಿ, ಎಂ.ಬಿ. ಅನಿತಾಕುಮಾರಿ, ಎ.ಆರ್‌.ತನುಶ್ರೀ, ಬಿ.ಎಂ.ಕೋಮಲಾ, ಎಂ.ಎಂ.ಲಿಖಿತಾ, ಎಚ್‌.ಪಿ.ಸಿಂಧೂ, ಎನ್‌.ಚೈತ್ರಾ, ಎನ್‌.ರಮ್ಯಾ, ನಿಹಾ, ಪಿ.ಕೆ.ರುಕ್ಮಿಣಿ, ಎಸ್‌.ಪಿ.ಕೃತ್ತಿಕಾ, ಎಚ್‌.ಪಿ.ಸ್ಫೂರ್ತಿ, ಸುಮನ್‌ ಎಸ್‌. ಹುಡ್ಡಾರ್‌, ಎಚ್‌.ಪಿ. ಸಂಧ್ಯಾ, ಎಸ್‌.ಪಿ.ಭವ್ಯಾ, ಎ.ಬಿ.ದಮ ಯಂತಿ, ಎ.ಕೆ.ರಂಜಿತಾ. ಡಾ.ಪುಲಿಕೇಶಿ ವೈ.ಶೆಟ್ಟಪ್ಪನವರ (ಹಾಕಿ ವ್ಯವಸ್ಥಾಪಕ; ಮೈಸೂರು ವಿ.ವಿ), ವಿಜಯಕೃಷ್ಣ (ಕೋಚ್‌, ಕ್ರೀಡಾ ಇಲಾಖೆ).ದಕ್ಷಿಣ ವಲಯ ಅಂತರ ವಿ.ವಿ ಕೊಕ್ಕೊ (3ನೇ ಸ್ಥಾನ): ಬಿ.ರಕ್ಷಿತ್‌, ಕೆ.ನೂತನ್‌, ಕೆ.ಬಿ.ಸಚಿನ್‌ ಬಾಬು, ಕೆ.ಎಸ್‌.ರವಿಕುಮಾರ್, ಜೆ.ಎಸ್‌.ಕಿರಣ್‌, ದಿಲೀಪ್‌ಕುಮಾರ್‌, ಎ.ವಿ.ಮಧು, ಸುದರ್ಶನ್‌, ಪ್ರಸನ್ನ, ಟಿ.ಪ್ರವೀಣ್‌ ಕುಮಾರ್‌, ಎಂ.ಅರುಣ್‌, ಕೆ.ಪಿ. ಸಂದೀಪ್‌, ಬಿ.ಡಿ.ಕಾಂತರಾಜ್‌ (ಕೋಚ್), ಮಹೇಂದ್ರಕುಮಾರ್‌ (ವ್ಯವಸ್ಥಾಪಕ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.