ADVERTISEMENT

ಜನಸ್ನೇಹಿ ಕಾರ್ಯಕ್ರಮ ರೂಪಿಸಿ

ಅಂಚೆ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ ಸಭೆಯಲ್ಲಿ ರಾಜೇಂದ್ರಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:45 IST
Last Updated 17 ಜುಲೈ 2017, 7:45 IST

ಮೈಸೂರು: ‘ಸರ್ಕಾರ ಮತ್ತು ಸಾರ್ವ ಜನಿಕರು ನಡುವೆ ಅಂಚೆ ನೌಕರರು ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿ ದ್ದಾರೆ. ಸಂವಹನ ಸಂಪರ್ಕದ ರಾಯಭಾರಿಗಳಾಗಿದ್ದಾರೆ’ ಎಂದು ದಕ್ಷಿಣ ವಲಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ತಿಳಿಸಿದರು.

ನೆಲ್ಸನ್ ಮಂಡೇಲಾ ರಸ್ತೆಯಲ್ಲಿರುವ ಶೃಂಗಾರ್‌ ಹೋಟೆಲಿನಲ್ಲಿ ಭಾನುವಾರ ಅಂಚೆ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟದ (ಎನ್‌ಯುಪಿಇ) ಮೈಸೂರು ಘಟಕ ಆಯೋಜಿಸಿದ್ದ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ವೈಯಕ್ತಿಕ ಪತ್ರಗಳಿಗಿಂತ ವಾಣಿಜ್ಯ ವ್ಯವಹಾರದ ಪತ್ರಗಳ ವ್ಯವಹಾರ ಈಗ ಹೆಚ್ಚಿದೆ. ಹಿಂದಿನ ದಿನಗಳಿಗೆ ಹೋಲಿಸಿ ದರೆ ಅಂಚೆ ಕಚೇರಿಗಳು ಜನರಿಂದ ದೂರವಾಗುತ್ತಿದ್ದು, ಜನಸ್ನೇಹಿ ಕಾರ್ಯ ಕ್ರಮ ಹಾಗೂ ಯೋಜನೆ ರೂಪಿಸುವ ಮೂಲಕ ಅಂಚೆ ಇಲಾಖೆಗಳು ಗ್ರಾಹಕ ಸ್ನೇಹಿಯಾಗಬೇಕಿದೆ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಈಗ ಅಂಚೆ ಇಲಾಖೆ ಕಾರ್ಯ ಚಟುವಟಿಕೆಗಳಲ್ಲಿ ತುಂಬಾ ಬದಲಾವಣೆ ಯಾಗಿದೆ. ಸದ್ಯದಲ್ಲೇ ಪೋಸ್ಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಬರಲಿದೆ. ಹೀಗಾಗಿ, ಸಿಬ್ಬಂದಿಯ ಜವಾಬ್ದಾರಿಗಳೂ ಹೆಚ್ಚಾಗಲಿವೆ’ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾಜಿಕ ಪಿಂಚಣಿ ಯೋಜನೆಗಳ ಮೂಲಕ ಜನ ಸಾಮಾನ್ಯರಿಗೆ ನೀಡು ತ್ತಿರುವ ಮಾಸಿಕ  ಸಂಭಾವನೆಯನ್ನು ಅಂಚೆ ಇಲಾಖೆಯ ಮೂಲಕವೇ ವಿತರಣೆ ಮಾಡಲಾಗುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ’ ಎಂದು ತಿಳಿಸಿದರು.

ಈ ಸಭೆಯು ಮೂರು ದಿನ ನಡೆ ಯಲಿದೆ. ಸಭೆಯಲ್ಲಿ ಅಂಚೆ ಇಲಾಖೆಯ ಅಭಿವೃದ್ದಿಗೆ ಸಂಬಂಧಿಸಿದ ವಿಚಾರಗಳು, ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ. 50 ವರ್ಷಗಳ ಬಳಿಕ ಈ ಸಭೆ ಮೈಸೂರಿನಲ್ಲಿ ನಡೆಯುತ್ತಿದೆ.

ಎನ್‌ಯುಪಿಇ ಅಧ್ಯಕ್ಷ ಗುಲಾಂ ರಬ್ಬಾನಿ, ಎಫ್‌ಎನ್‌ಪಿಒ ಅಧ್ಯಕ್ಷ ಟಿ.ಎನ್‌.ರಹಾಟೆ, ಪ್ರಧಾನ ಕಾರ್ಯದರ್ಶಿ ಡಿ.ತ್ಯಾಗರಾಜನ್,  ಮೈಸೂರು ವಲಯದ ಅಂಚೆ ಕಚೇರಿಗಳ ಸೀನಿಯರ್‌ ಸೂಪ ರಿಂಟೆಂಡೆಂಟ್‌ ಡಿ.ಶಿವಯ್ಯ, ಪಿಟಿಸಿ ಉಪ ನಿರ್ದೇಶಕ ಎಸ್‌.ರಾಜಶೇಖರ್‌, ಬೆಂಗಳೂರಿನ ಎನ್‌ಯುಪಿಇ ಅಧ್ಯಕ್ಷ ಕೆ.ಸಿ.ಗಂಗಯ್ಯ, ಮೈಸೂರಿನ ಎನ್‌ಯುಪಿಇ ಅಧ್ಯಕ್ಷ ಎಸ್‌.ಎನ್‌.ನರಸಿಂಹಮೂರ್ತಿ, ಎನ್‌ಯುಜಿಡಿಎಸ್‌ ಮೈಸೂರು ವಲಯದ ಪಿ.ರಾಮಮೂರ್ತಿ, ಎಸ್‌.ಸಿದ್ದರಾಜು, ಕೆ.ರಾಜು, ವಾಸು ದೇವರಾವ್‌, ಸುರೇಶಕುಮಾರ್‌, ಕೆ.ವಿ.ಕುರಡಗಿ, ಆರ್‌.ಮಹದೇವ, ಸ್ವಾಗತ ಸಮಿತಿಯ ನಟೇಶ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.