ADVERTISEMENT

ಮದುವೆಯಾದ ಮರುದಿನ ಪತಿ ಆತ್ಮಹತ್ಯೆ

ಜಾತಿ ಬೇರೆಯಾಗಿದ್ದ ಕಾರಣಕ್ಕೆ ಪ್ರೇಮಿಗಳ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮನೆಯವರು

​ಪ್ರಜಾವಾಣಿ ವಾರ್ತೆ
Published 5 ಮೇ 2017, 8:32 IST
Last Updated 5 ಮೇ 2017, 8:32 IST

ಮೈಸೂರು: ಪೋಷಕರ ವಿರೋಧದ ನಡುವೆಯೂ ಪ್ರೀತಿಸಿದ ಯುವತಿಯ ಕೈಹಿಡಿದ ನಾಗಯ್ಯ ಮಠಪತಿ (32) ವಿವಾಹವಾದ ಮರುದಿನವೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

‘ಹಾವೇರಿಯ ನಾಗಯ್ಯ ಅವರು ಬೆಂಗಳೂರಿನ ಬಿಎಂಟಿಸಿ ಬಸ್‌ ನಿರ್ವಾ ಹಕರಾಗಿದ್ದರು. ಬಿ.ಇಡಿ ಪದವಿ ಪಡೆ ಯುವ ಸಂದರ್ಭದಲ್ಲಿ ಪಡುವಾರ ಹಳ್ಳಿಯ ಸಹಪಾಠಿಯೊಂದಿಗೆ ಪ್ರೇಮಾಂಕುರವಾಗಿತ್ತು. ಜಾತಿ ಬೇರೆಯಾಗಿದ್ದ ಕಾರಣಕ್ಕೆ ಎರಡೂ ಮನೆಯವರು ಪ್ರೇಮಿಗಳ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು’ ಎಂದು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಈ ನಡುವೆ ಯುವಕನ ಕುಟುಂಬ ದವರು ಬೇರೊಬ್ಬ ಯುವತಿಯೊಂದಿಗೆ ಇದೇ 8ಕ್ಕೆ ವಿವಾಹ ನಿಶ್ಚಯ ಮಾಡಿ ದ್ದರು. ಈ ಮದುವೆಗೂ ಮುನ್ನವೇ ಪ್ರೇಮಿಯನ್ನು ವರಿಸಲು ನಾಗಯ್ಯ ಮೈಸೂರಿಗೆ ಧಾವಿಸಿದ್ದರು. ಒಂಟಿ ಕೊಪ್ಪಲು ದೇಗುಲದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ಬುಧವಾರ ವಿವಾಹ ವಾಗಿದ್ದರು. ಬಳಿಕ ರಾಮಕೃಷ್ಣ ನಗರ ದಲ್ಲಿರುವ ದಕ್ಷಿಣ ಉಪನೋಂದಣಾ ಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು’ ಎಂದು ವಿವರಿಸಿದ್ದಾರೆ.

‘ನವೋದಯ ಬಡಾವಣೆಯ ಸ್ನೇಹಿತರ ಮನೆಯಲ್ಲಿ ನವವಿವಾಹಿತರು ತಂಗಿದ್ದರು. ಗುರುವಾರ ಬೆಳಿಗ್ಗೆ ಶೌಚಾಲಯಕ್ಕೆ ತೆರಳಿದ್ದ ಪತ್ನಿ ಕೊಠಡಿಗೆ ಮರಳಿದಾಗ ನಾಗಯ್ಯ ನೇಣು ಹಾಕಿಕೊಂಡಿದ್ದು ಕಂಡು ಬಂದಿದೆ. ರಾತ್ರಿ ಇಬ್ಬರ ನಡುವೆ ನಡೆದ ಕಲಹ ಇದಕ್ಕೆ ಕಾರಣ ಇರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.