ADVERTISEMENT

‘ಮೀಸಲಾತಿ ಬಳಸಿಕೊಂಡು ಮುಂದುವರಿಯಿರಿ’

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:00 IST
Last Updated 12 ಮೇ 2017, 10:00 IST
ಕೆ.ಆರ್.ನಗರ: ದಲಿತರು ಕೇವಲ ಸರ್ಕಾರಿ ಸವಲತ್ತುಗಳಿಗಾಗಿ ಕಾಯದೇ ಸ್ವಯಂ ದುಡಿಮೆಯಿಂದ ಮುಂದೆ ಬರ ಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಯುತಾನಂದ ಸಲಹೆ ನೀಡಿದರು.
 
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಅಂಬೇಡ್ಕರ್ ಎಂದರೆ ಕೇವಲ ದಲಿತರಿಗೆ ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಕೇವಲ ದಲಿತರಿಗೆ ಮೀಸಲಾತಿ ನೀಡಿಲಿಲ್ಲ, ತುಳಿತಕ್ಕೆ ಒಳಗಾದ ಎಲ್ಲ ಸಮಾಜದವರಿಗೂ ಮೀಸಲಾತಿ ಒದಗಿಸಿದ್ದಾರೆ. ತುಳಿತಕ್ಕೆ ಒಳಗಾದ ಇತರೆ ಜನಾಂಗದವರು ಬುದ್ಧಿವಂತಿಕೆಯಿಂದ ಮೀಸಲಾತಿ ಬಳಸಿಕೊಂಡು ಆರ್ಥಿಕ ವಾಗಿ ಸದೃಢರಾಗುತ್ತಿದ್ದಾರೆ. ಅವರಂತೆ ನಾವು ಕೂಡ ಮೀಸಲಾತಿ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
 
ಬಿಎ, ಎಂಎ ಮುಗಿಸಿದ ಶೇ 80ರಷ್ಟು ಯುವಜನರು ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಊರುಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗದ ಕಡೆ ಗಮನ ಹರಿಸಬೇಕು. ಯುವಕರು ಕೇವಲ ಸರ್ಕಾರಿ ನೌಕರಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಬೇಕು. ಮೀಸ ಲಾತಿ ಬಳಸಿಕೊಂಡು ಬದುಕು ರೂಪಿಸಿ ಕೊಳ್ಳದೇ ಹೋದಲ್ಲಿ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದಂತಾ ಗುತ್ತದೆ ಎಂದರು.
 
ವಿಭಾಗೀಯ ನಿಯಂತ್ರಣಾಧಿಕಾರಿ ಗಳಾದ ಎಂ. ಮಹೇಶ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ.ಸೋಮಶೇಖರ್, ಮುಖ್ಯ ಭದ್ರತಾ ಅಧಿಕಾರಿ ಎನ್.ಎಸ್.ಶಿವರಾಜೇಗೌಡ, ಸಹಾಯಕ ಲೆಕ್ಕಾಧಿಕಾರಿ ಎಲ್.ಗಿರೀಶ್, ಸಮಿತಿಯ ಗೌರವಾಧ್ಯಕ್ಷ ಜೆ.ಗಂಗಾಧರ್, ನಿವೃತ್ತ ಉಗ್ರಾಣ ಪಾಲಕ ಎಂ.ಕೆ.ರೇವಣ್ಣ, ವಿಭಾಗೀಯ ಭದ್ರತಾ ನಿರೀಕ್ಷಕರಾದ ಎನ್.ರವೀಂದ್ರ, ಎಲ್.ರಮೇಶ್ ಬಾಬು, ಪರಿಶಿಷ್ಟ ಜಾತಿ, ಪಂಗಡಗಳ ಸಂಘದ ಅಧ್ಯಕ್ಷೆ ಚಂದ್ರಕಲಾ, ಎಂ.ಮೆಹಬೂಬ್ ಆಲಿ, ಎಂ.ಸುರೇಶ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.