ADVERTISEMENT

ಶುಂಠಿ ಬೆಳೆಗೆ ಕಬ್ಬಿನ ಸೋಗು; ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 9:27 IST
Last Updated 18 ಮಾರ್ಚ್ 2017, 9:27 IST

ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂ ಕಿನಾದ್ಯಂತ ಕಬ್ಬನಿ ಸೋಗಿಗೆ ಬೇಡಿಕೆ ಬಂದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ.

ಶುಂಠಿ ಬೆಳೆಯಲು ಭತ್ತದ ಹುಲ್ಲಿನ ಬದಲಾಗಿ ಕಬ್ಬನ ಸೋಗು ಬಳಸುತ್ತಿರು ವುದೇ ಅದಕ್ಕೆ ಮುಖ್ಯ ಕಾರಣವಾಗಿದೆ.

ಶುಂಠಿ ಬೆಳೆ ಮೊಳಕೆಯೊಡೆಯುವ ಮುನ್ನ ಪಾತಿಗಳಿಗೆ ಮುಚ್ಚಲು ಭತ್ತದ ಹುಲ್ಲನ್ನು ಬಳಸಲಾಗುತ್ತಿತ್ತು. ಆದರೇ, ಈ ವರ್ಷ ಬರದ ಹಿನ್ನೆಲೆಯಲ್ಲಿ ಹುಲ್ಲು ದೊರೆಯುತ್ತಿಲ್ಲವಾದ್ದರಿಂದ, ಜಮೀನಿ ನಲ್ಲೇ ಕೊಳೆತು ಗೊಬ್ಬರವಾಗುತ್ತಿದ್ದ ಸೋಗಿನತ್ತ ರೈತರು ಮುಖಮಾಡಿರುವು ದರಿಂದ ಅದಕ್ಕೆ ಬೇಡಿಕೆ ಹೆಚ್ಚಿದೆ.

ADVERTISEMENT

ತಾಲ್ಲೂಕಿನಲ್ಲಿ 5,000 ಎಕರೆಯಷ್ಟು ಶುಂಠಿ ಬೇಸಾಯ ಮಾಡಲಾಗಿದ್ದು, ಒಂದು ಎಕರೆಯಲ್ಲಿ ಬೆಳೆದಿರುವ ಕಬ್ಬಿನ ಸೋಗಿಗೆ ₹ 5 ರಿಂದ ₹6 ಸಾವಿರ ನೀಡಿ ಖರೀದಿಸುತ್ತಿದ್ದಾರೆ. ಅಲ್ಲದೇ, ಅದನ್ನು ಕಟ್ಟಲು ₹3 ಸಾವಿರ ಹಾಗೂ ಟ್ರ್ಯಾಕ್ಟರ್‌ಗೆ ತುಂಬಲು ₹1500 ಹಾಗೂ ಟ್ರ್ಯಾಕ್ಟರ್‌ ಬಾಡಿಗೆ ಸೇರಿ ಅಂದಾಜು ₹ 12 ಸಾವಿರ ಆಗುತ್ತಿದೆ.

ಈ ಹಿಂದೆ ಭತ್ತದ ಹುಲ್ಲು ಖರೀ ದಿಸುತ್ತಿದ್ದಾಗ ₹ 30 ಸಾವಿರಕ್ಕೂ ಅಧಿಕ ಖರ್ಚು ಆಗುತ್ತಿತ್ತು. ಕಬ್ಬಿನ ಸೋಗನ್ನು ಬಳಸುತ್ತಿರುವುದರಿಂದ ₹ 20 ಸಾವಿರ ಉಳಿತಾಯವಾಗುತ್ತಿದೆ ಎಂದು  ಹೇಳುತ್ತಾರೆ ಶುಂಠಿ ಬೆಳೆಗಾರ ಶಿವಪ್ಪ.

ಕಬ್ಬು ಕಟಾವಾದ ಬಳಿಕ ಅದರ ಸೋಗಿಗೆ ಬೆಂಕಿಹಾಕಿ ಸುಡುತ್ತಿದ್ದೆವು. ಅಥವಾ ನೀರನ್ನು ಹಾಯಿಸಿ ಕೊಳೆಯಲು ಬಿಡುತ್ತಿದ್ದೆವು, ಈಗ ಕಬ್ಬಿನ ಸೋಗಿನಿಂದಲೂ ಆದಾಯ ಬರುತ್ತಿದೆ. ಅಲ್ಲದೇ, ಕಬ್ಬಿನ ಗದ್ದೆಯೂ ಶುಚಿಗೊಳ್ಳುತ್ತಿದೆ ಎಂದು ಹೇಳುತ್ತಾರೆ ಹೆಗ್ಗನೂರಿನ ಲೋಕೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.