ADVERTISEMENT

ಸೇತುವೆ ಕಾಮಗಾರಿಗೆ ಭೂಮಿಪೂಜೆ

ಹುತ್ತೂರು: ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಗೀತಾ ಮಹದೇವಪ್ರಸಾದ್

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:26 IST
Last Updated 4 ಮೇ 2017, 7:26 IST

ಗುಂಡ್ಲುಪೇಟೆ: ತಾಲ್ಲೂಕಿನ ಕೊಡಸೊಗೆ ಗ್ರಾಮ ಪಂಚಾಯಿತಿಯ ಹುತ್ತೂರು ಗ್ರಾಮದ ಸೇತುವೆ ಕಾಮಗಾರಿಗೆ ಬುಧವಾರ ಶಾಸಕಿ ಗೀತಾ ಮಹದೇವ ಪ್ರಸಾದ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಸದ್ಯದಲ್ಲಿಯೇ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿ ಬೋಮ್ಮನಹಳ್ಳಿ, ಕುಂದಕೆರೆ, ವಡ್ಡಗೆರೆ ಮತ್ತು ಕರಕಲ ಮಾದಹಳ್ಳಿ ಗ್ರಾಮಗಳಿಗೆ ಮೊದಲ ಹಂತದಲ್ಲಿ ನೀರನ್ನು ಕೊಡ ಲಾಗುವುದು’ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಸ್ಥಾಪಿತ ವಾಗಿರುವ ಕುಡಿಯುವ ನೀರಿನ ಘಟಕವನ್ನು ಸದ್ಯದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

‘ಹುತ್ತೂರು ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ₹ 53 ಕೋಟಿ ಅನುದಾನ ದೊರೆತಿದೆ. ಶೀಘ್ರ ದಲ್ಲೇ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
ಅಲ್ಲದೆ, 2014–15ನೇ ಸಾಲಿ ನಲ್ಲಿ ಸಾಲ ಕೇಳಿ ಅರ್ಜಿ ಸಲ್ಲಿಸಿದ್ದ ಅರ್ಜಿ ದಾರರಿಗೆ ₹ 4 ಕೋಟಿ ಹಣ ಮಂಜೂರು ಆಗಿದೆ. ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತೇನೆ. ಅಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಕ್ರಮ ವಹಿಸುತ್ತೇನೆ’ ಎಂದು ತಿಳಿಸಿದರು.

ಬಳಿಕ ತಾಲ್ಲೂಕಿನ ವಿವಿಧ ಭಾಗ ಗಳಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಕಟ್ಟಡ ಕಾಮಗಾರಿ ಯೋಜನೆ ಗಳನ್ನು ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ‘ಕಾಡಾ’ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಬ್ಬಹಳ್ಳಿ ಮಹೇಶ್, ಅಶ್ವಿನಿ ವಿಶ್ವ ನಾಥ್, ಮುಖಂಡರಾದ ಕೊಡಸೊಗೆ ಶಿವಬಸಪ್ಪ ಹಾಗೂ ತೆರಕಣಾಂಬಿ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.