ADVERTISEMENT

ಅಧಿಕಾರ ಪಡೆಯಲು ಸಂಘಟಿತರಾಗಿ

ಚಲವಾದಿ ಮಹಾಸಭಾದ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಸಚಿವ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:01 IST
Last Updated 1 ಸೆಪ್ಟೆಂಬರ್ 2014, 7:01 IST
ರಾಯಚೂರಿನ ಮಹಿಳಾ ಸಮಾಜದ ಆವರಣದಲ್ಲಿ ಭಾನುವಾರ ನಡೆದ ಚಲವಾದಿ ಮಹಾಸಭಾದ ಜಿಲ್ಲಾ ಪ್ರಥಮ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಮಾಜಿ ಸಚಿವೆ ಮೋಟಮ್ಮ, ಚಲವಾದಿ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಕೆ.ಶಿವರಾಂ, ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಸುಂಕಾರ ಹಾಗೂ ಸಮಾಜದ ಹಿರಿಯ ಮುಖಂಡರು, ಪದಾಧಿಕಾರಿಗಳಿದ್ದರು
ರಾಯಚೂರಿನ ಮಹಿಳಾ ಸಮಾಜದ ಆವರಣದಲ್ಲಿ ಭಾನುವಾರ ನಡೆದ ಚಲವಾದಿ ಮಹಾಸಭಾದ ಜಿಲ್ಲಾ ಪ್ರಥಮ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಮಾಜಿ ಸಚಿವೆ ಮೋಟಮ್ಮ, ಚಲವಾದಿ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಕೆ.ಶಿವರಾಂ, ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಸುಂಕಾರ ಹಾಗೂ ಸಮಾಜದ ಹಿರಿಯ ಮುಖಂಡರು, ಪದಾಧಿಕಾರಿಗಳಿದ್ದರು   

ರಾಯಚೂರು: ಚಲವಾದಿ ಸಮಾಜದ ಅನೇಕ ಮುಖಂಡರು ನಿಸ್ವಾರ್ಥ ಸೇವೆ ಸಲ್ಲಿಸಿ ಸರ್ವ ಸಮಾಜದ ಜನನಾಯಕರಾಗಿದ್ದಾರೆ. ಈ ಸಮಾಜದ ಮುಖಂಡರೂ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುತ್ತಾರೆ. ಅವರು ಮುಖ್ಯಮಂತ್ರಿ ಆಗಬೇಕಾದರೆ ಈ ಸಮಾಜದ ಸಂಘಟನೆ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಮಹಿಳಾ ಸಮಾಜದ ಆವರಣದಲ್ಲಿ ಚಲವಾದಿ ಮಹಾಸಭಾದ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಚಲವಾದಿ ಮಹಾಸಭಾದ ಜಿಲ್ಲಾ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಮಹತ್ವದ ಕೊಡುಗೆಯನ್ನು ದೇಶಕ್ಕೆ ನೀಡಿದ್ದಾರೆ. ಅವರು ಪ್ರತಿಯೊಬ್ಬರಿಗೂ ಮತದಾನ ಹಕ್ಕು ಕಲ್ಪಿಸಿದ್ದಾರೆ. ಮತದಾನ ಹಕ್ಕು ಇಲ್ಲದಿದ್ದರೆ ಸಮಾಜ ಹೇಗಿರುತ್ತಿತ್ತು ಎಂಬುದನ್ನು ಮನುಷ್ಯನ ಊಹಿಸಲು ಸಾಧ್ಯವಾಗು ತ್ತಿರಲಿಲ್ಲ ಎಂದು ತಿಳಿಸಿದರು.

ಸರ್ಕಾರದ ಯೋಜನೆಗಳ ಸಮಪರ್ಕವಾಗಿ ಸದುಪಯೋಗವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮಿಸಬೇಕು. ಸಮಾಜದ ಜನರಲ್ಲಿ ಜಾಗೃತಿ ಮೂಡಬೇಕು. ಪ್ರತಿಯೊಬ್ಬರು ನಿಸ್ವಾರ್ಥ ಸೇವೆಗೆ ಮುಂದಾಗಬೇಕು ಎಂದರು.

ಚಲವಾದಿ ಸಮಾಜ ಕಲ್ಯಾಣ ಮಂಟಪ ನಿರ್ಮಾಣ ಕ್ಕಾಗಿ ಸ್ಥಳ ಗುರುತಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಕಲ್ಯಾಣ ಮಂಟಪಕ್ಕೆ ಅಗತ್ಯವಿರುವ ಅನುದಾನ ಕಲ್ಪಿಸುವ ಮೂಲಕ ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಚಲವಾದಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಶಿವರಾಂ ಮಾತನಾಡಿ, ಸಮಾಜದಲ್ಲಿ ಅಕ್ಷರಸ್ಥರಿ ದ್ದಾರೆ. ಅವರು ಸಂಘಟಿತರಾಗಿಲ್ಲ. ಡಾ.ಅಂಬೇಡ್ಕರ್ ಅವರ ಕನಸು ನನಸುಗೊಳಿಸಲು ಸಮಾಜದ ಬಾಂಧವರು ಸಂಘಟಿತರಾಗಬೇಕು ಎಂದು ಹೇಳಿದರು. ರಾಜ್ಯದಲ್ಲಿ 40 ಲಕ್ಷ ಚಲವಾದಿ ಸಮಾಜದ ಜನಸಂಖ್ಯೆ ಇದ್ದರೂ ಈ ಸಮಾಜದವರು  ಮುಖ್ಯಮಂತ್ರಿಯಾಗಲು ಆಗುತ್ತಿಲ್ಲ. ಸಂಘಟಿತ ರಾದರೇ ಸಮಾಜದವರು ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ತಿಳಿಸಿದರು.

ಚಲವಾದಿ ಸಮಾಜಕ್ಕೆ ಸೂಕ್ತ ಮೀಸಲಾತಿ ದೊರ ಕುತ್ತಿಲ್ಲ. ಮೀಸಲಾತಿ ಅನ್ಯರ ಪಾಲಾಗುತ್ತಿದೆ. ಸಮಾಜದ ಪ್ರತಿಭಾನ್ವಿತರ ವಿದ್ಯಾರ್ಥಿಗಳಿಗೆ ಐಎಎಸ್‌, ಐಪಿಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳಾಗಿ ಮಾಡುವ ಉದ್ದೇಶದಿಂದ ಸಮಾಜದ ವತಿಯಿಂದ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಬೆಂಗಳೂರು, ಬೀದರ್‌, ದಾವಣಗೆರೆ ಸೇರಿದಂತೆ ಅನೇಕ ಕಡೆಗೆ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಆಂಧ್ರಪ್ರದೇಶ ಚಲುವಾದಿ ಮಹಾಸಭಾದ ಅಧ್ಯಕ್ಷ ಕಾರೆಂ ಶಿವಾಜಿ ಮಾತನಾಡಿ, ಸರ್ಕಾರದ ಯೋಜನೆ ಪಡೆಯಲು ಆಂಧ್ರಪ್ರದೇಶದಲ್ಲಿ ಚಲವಾದಿ ಸಮಾಜ ಸಂಘಟಿತರಾಗಿ ಹೋರಾಟ ಮಾಡಿದೆ. ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಲು ಸಂಘಟಿ ತರಾಗಬೇಕು. ಭಿನ್ನಾಭಿಪ್ರಾಯ ಬದಿಗಿಡಿ ಎಂದರು.

ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಅಶ್ವಥ ನಾರಾಯಣ ಮಾತನಾಡಿ, ಸಮಾಜದ ಅಭಿವೃದ್ಧಿ  ಪ್ರತಿಯೊಬ್ಬರ ಹೊಣೆ ಎಂದರು. ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸದರೆ, ರಾಯಚೂರು ಜಿಲ್ಲೆಯ ಚಲವಾದಿ ಸಮಾಜ ಉತ್ತಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗುಲ್ಬರ್ಗದ ಸಿದ್ದಾರ್ಥ ಬುದ್ಧ ವಿಹಾರದ ಬಂತೆ ಸಂಘಾನಂದಜೀ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯೆ ಡಾ.ಮೋಟಮ್ಮ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವಿ.ನಾಯಕ, ಶಾಸಕರಾದ ಶಿವರಾಜ ಪಾಟೀಲ, ಎನ್‌.ಎಸ್‌. ಬೋಸರಾಜ, ಪ್ರತಾಪಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ಮಾಜಿ ಶಾಸಕರಾದ ಎ.ಪುಷ್ಪಾವತಿ, ಸೈಯದ್‌ ಯಾಸಿನ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಚಲುವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಸುಂಕಾರಿ, ನಗರಸಭೆ ಸದಸ್ಯ ಮಹಾಲಿಂಗ ರಾಂಪುರ, ರವೀಂದ್ರನಾಥ ಪಟ್ಟಿ, ಡಾ.ಬಿ.ಮಹಾಲಿಂಗ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.