ADVERTISEMENT

ಅಮಾವಾಸ್ಯೆ: ಗೌಡಗಾಂವ್‌ಗೆ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 8:55 IST
Last Updated 30 ಜುಲೈ 2014, 8:55 IST

ಅಕ್ಕಲಕೋಟ: ತಾಲ್ಲೂಕಿನ ದಕ್ಷಿಣ­ಮುಖಿ ಜಾಗೃತ ಮಾರುತಿ ದೇವಸ್ಥಾನಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಅಮಾವಾಸ್ಯೆಯಂದು ಭಕ್ತರು ಸಾಲುಗಳಲ್ಲಿ ನಿಂತು ದರ್ಶನ ಪಡೆದರು.

ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಂದ ಭಕ್ತರಿಗೆ ದೇವ­ಸ್ಥಾನ ಸಮಿತಿಯಿಂದ ಪ್ರಸಾದ, ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸ­ಲಾಗಿತ್ತು ಎಂದು ಕಾರ್ಯಾಧ್ಯಕ್ಷ ಶ್ರೀಕಾಂತ ಖಾನಾಪುರೆ ಮತ್ತು ಅಧ್ಯಕ್ಷ ಅಣ್ಣಪ್ಪ ಸೇರಿಕಾರ ತಿಳಿಸಿದರು.

   ಶನಿವಾರ ಬೆಳಿಗ್ಗೆ 3 ಕ್ಕೆ  ಶಿವಯ್ಯ ಪುರಾಣಿಕ, ಜ್ಞಾನೇಶ್ವರ ಫುಲಾರಿ, ಶಿವಪ್ಪ ಪೂಜಾರಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ, ಹೋಮ -ಹವನ, ನವಗ್ರಹ ಪೂಜೆ ,ಗಜಲಕ್ಮೀ ಪೂಜೆ, ಕಾಕಡಾರತಿ, ಮಹಾಆರತಿ ಸೇವೆ ಮಾಡಿದರು.

ಸೊಲ್ಲಾಪುರ, ಮುಂಬೈ, ವಿಜಾಪುರ, ಗುಲ್ಬರ್ಗ, ಸೇಡಂ, ಬೀದರ್‌, ಹೈದರಾ­ಬಾದ್‌ಗಳಿಂದ ಭಕ್ತರು ತಂಡೋಪ­ತಂಡವಾಗಿ ಬಂದಿದ್ದರು. 2 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆ ಭಕ್ತರು ದರ್ಶನ ಪಡೆದರು. ದೂರದ ಊರುಗಳಿಂದ ಬಂದಿದ್ದ  ಭಕ್ತರಿಗೆ ಸೊಲ್ಲಾಪುರ ಸ್ನೇಹಾ­ಲಯದ  ಬ್ರಹ್ಮಕುಮಾರಿ ಪ್ರಮೀಳಾ ಬೆಹನ್‌ ಅವರು  ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ, ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಕ್ಕಲಕೋಟ ಭಾರತಿ ಮಲ್ಲಿಕಾರ್ಜುನ ಖೇಡಗಿ ಅವರು ಬಂದ ಭಕ್ತರಿಗೆ ಸುಮಾರು 50 ಸಾವಿರ ಬಾಳೆ ಹಣ್ಣು ಹಂಚಿ­ದರು. ಆಳಂದ ಮಾರುತಿ ಭಕ್ತ ಶ್ರೀಮಂತರಾವ್‌ ಬಿರಾಜದಾ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.  ಸೊಲ್ಲಾಪುರ ಅಪರಾಧ ವಿಭಾಗದ ಮಹಾಪತಿ ಇಂಧ­ನಕರ ಅವರು ದರ್ಶನಕ್ಕೆ ಬಂದಿದ್ದರು.

  ದೇವಸ್ಥಾನ ಸಮಿತಿಯ ಪ್ರಕಾಶ ಮೆಂತೆ, ಸಿದ್ದರಾಮ ವಾಗಮೋಡೆ, ಬೀರಪ್ಪ ಪೂಜಾರಿ,ಸುಭಾಷ ಗೋಟೂರ, ಶ್ರೀಮಂತ ಸಾವಳಕೋಟಿ, ,ಚೌಡಪ್ಪ ಕುಂಬಾರ, ಅಜ್ಜು ಮಾನೆ,ಅಮೋಗಸಿದ್ಧ ಕೋರೆ, ಪರಮೇಶ್ವರ ಪಾಟೀಲ, ಚಂದ್ರಕಾಂತ ಮೇತ್ರಿ, ಶ್ರೀಮಂತ ಮೇತ್ರಿ, ಪರಮೇಶ್ವರ ಪಾಟೀಲ, ಶಿವಶರಣ ಮೆಂತೆ, ಶ್ರೀಶೈಲ ಕುಂಬಾರ,ಭಾರತ ನನ್ನವರೆ, ಲಕ್ಷ್ಮಣ ಪುಜಾರಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.