ADVERTISEMENT

ಎಸ್ಸೆಸ್ಸೆಲ್ಸಿ: ಅನುಶ್ರೀ ಪ್ರಥಮ

​ಪ್ರಜಾವಾಣಿ ವಾರ್ತೆ
Published 13 ಮೇ 2017, 6:28 IST
Last Updated 13 ಮೇ 2017, 6:28 IST

ರಾಯಚೂರು:  ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಶ್ರೀ ಜಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 (ಶೇ 98.25) ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ಕನ್ನಡ ಭಾಷಾ ಅಧ್ಯಯನ ಆಯ್ಕೆ ಮಾಡಿಕೊಂಡಿರುವ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿರುವ ಅನುಶ್ರೀ ಎಲ್‌ಕೆಜಿಯಿಂದಲೂ ಶಾಲೆಗೆ ಪ್ರಥಮ ಸ್ಥಾನ ಕಾಯ್ದುಕೊಂಡು ಬಂದಿರುವುದು ವಿಶೇಷ.

ಶಾಲೆಯ ಮುಖ್ಯಸ್ಥರು ಹೇಳುವ ಪ್ರಕಾರ ರಾಯಚೂರು ಜಿಲ್ಲೆಯಲ್ಲೆ ಅನುಶ್ರೀ ಗರಿಷ್ಠ ಅಂಕ ಪಡೆದಿದ್ದಾರೆ. ಇದನ್ನು ಖಚಿತಗೊಳಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಯಾವುದೇ ಅಧಿಕಾರಿಗಳು ಲಭ್ಯವಿ ರಲಿಲ್ಲ.

ಕನ್ನಡದಲ್ಲಿ 125 ಅಂಕಗಳ ಪೈಕಿ 123 ಅಂಕ ಪಡೆದಿದ್ದಾರೆ. ಇಂಗ್ಲಿಷ್-99, ಹಿಂದಿ-100, ಗಣಿತ-99, ವಿಜ್ಞಾನ-93 ಹಾಗೂ ಸಮಾಜಶಾಸ್ತ್ರ- 100 ಅಂಕ ಪಡೆದಿದ್ದಾರೆ.
ಅದೇ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕರಾದ ರಾಘವೇಂದ್ರ ರಾವ್ ಕವಿತಾ ದಂಪತಿಯ ಏಕೈಕ ಪುತ್ರಿ ಅನುಶ್ರೀ.

ADVERTISEMENT

‘ಮಗಳ ಓದುವ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಪ್ರತಿವರ್ಷ ಶಾಲೆಗೆ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದ್ದಾಳೆ. ಅವಳ ಆಸಕ್ತಿಯಂತೆ ಓದಿಗೆ ನೆರವು ನೀಡು ತ್ತೇವೆ’ ಎಂದು ರಾಘವೇಂದ್ರ ರಾವ್‌ ಹೇಳಿದರು.

‘ಶಾಲಾ ಅವಧಿ ಮುಗಿದ ಬಳಿಕ ಮನೆಯಲ್ಲಿ ನಿತ್ಯ 4ರಿಂದ 5 ಗಂಟೆ ಅಧ್ಯಯನ ಮಾಡುತ್ತೇನೆ. ಓದಿನಲ್ಲಿ ಏನಾದರೂ ಸಂಶಯಗಳಿದ್ದರೆ ಪಾಲಕರು ತಿಳಿಸಿಕೊಡುತ್ತಿದ್ದರು. ಹೀಗಾಗಿ, ಯಾವುದೂ ಕಠಿಣವಾಗಲಿಲ್ಲ’ ಎಂದು ಅನುಶ್ರೀ ಹೇಳಿದರು.ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಕಂಪ್ಯೂಟರ್‌ ಎಂಜಿನಿಯರ್‌ ಆಗುವ ಆಸೆಯನ್ನು ಅನುಶ್ರೀ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.