ADVERTISEMENT

ಡಿಪೊ ಅಭಿವೃದ್ಧಿಗೆ ₹1 ಕೋಟಿ ಅನುದಾನ: ಶಾಸಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:50 IST
Last Updated 5 ಸೆಪ್ಟೆಂಬರ್ 2017, 6:50 IST

ಮಸ್ಕಿ: ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಪಟ್ಟಣದ ಡಿಪೊದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪ್ರತಾಪಗೌಡ ಪಾಟೀಲ ಇಲ್ಲಿ ಹೇಳಿದರು. ಸೋಮವಾರ ಪಟ್ಟಣದ ಸಾರಿಗೆ ಡಿಪೊದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೂರು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಾಕಿ ಉಳಿದ ಕಾಮಗಾರಿಗೆ ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರಿಗೆ ಸಂಸ್ಥೆಯಲ್ಲಿನ ಕಟ್ಟಡ ಶಿಥಿಲಗೊಂಡಿದ್ದ ಅದರ ಗುಣಮಟ್ಟ ಪರೀಕ್ಷೆಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯುವಂತೆ ಡಿಪೊ ವ್ಯವಸ್ಥಾಪಕರಿಗೆ ಸೂಚಿಸಿದರು.
ಮಲ್ಲನಗೌಡ ಪೊಲೀಸ ಪಾಟೀಲ, ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಶಿವಕುಮಾರ, ಮಂಜುನಾಥ ಪಾಟೀಲ, ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವೀರೇಶ ಕಮತರ, ಯಲ್ಲೋಜಿರಾವ್‌ ಕೊರೆಕಾರ, ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಮಲ್ಲಯ್ಯ ಬಳ್ಳಾ, ಚೇತನ ಪಾಟೀಲ, ಶ್ರೀಧರ ಕಡಬೂರು, ಮಸೂದ ಪಾಸಾ, ಗುತ್ತಿಗೆದಾರ ಚಿನ್ನನಗೌಡ, ರಾಜಾ ನಾಯಕ, ಚಾಂದ್ ಶೆಡಮಿ, ಅಜ್ಮೀರ್‌, ಗೌಸ್ ಪಾಷಾ, ಪ್ರತಾಪಗೌಡ ಪಾಟೀಲ ಯುವ ಸೇನಾ ಅಧ್ಯಕ್ಷ ವಸಂತ ಭಜಂತ್ರಿ, ಡಿಪೊ ವ್ಯವಸ್ಥಾಪಕ ನಾಗರಾಜ ಇತರರು ಇದ್ದರು.

ಪರಿಶೀಲನೆ: ಶಾಸಕ ಪ್ರತಾಪಗೌಡ ಪಾಟೀಲ ಸಾರಿಗೆ ಡಿಪೊದ ಪರಿಶೀಲನೆ ನಡೆಸಿದರು. ಸಾರಿಗೆ ಬಸ್‌ಗಳ ಹಾಗೂ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಓಡಿಸುವಂತೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.