ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಡಿ. 4ರಂದು ತೀರ್ಪು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:09 IST
Last Updated 15 ನವೆಂಬರ್ 2017, 10:09 IST
ಪೂಜಾ ಗಾಂಧಿ
ಪೂಜಾ ಗಾಂಧಿ   

ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾ ಗಾಂಧಿ ಅವರನ್ನು 2ನೇ ಜೆಎಂಎಫ್‌ಸಿ ನ್ಯಾಯಾಧೀಶರಾದ ಪೂರ್ಣಿಮಾ ಯಾದವ ಅವರು ವಿಚಾರಣೆ ನಡೆಸಿ, ಡಿಸೆಂಬರ್‌ 4ಕ್ಕೆ ತೀರ್ಪು ಕಾಯ್ದಿರಿಸಿ ಮಂಗಳವಾರ ಆದೇಶ ಹೊರಡಿಸಿದರು.

2013 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ, ಅನುಮತಿಯಿಲ್ಲದೆ ವಾಹನ ಬಳಸಿದ್ದಾರೆ ಎಂದು ಸದರ್ ಬಜಾರ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.

ಪೂರ್ವ ನಿಗದಿತ ದಿನದಂದು ನ್ಯಾಯಾಲಯಕ್ಕೆ ಮಂಗಳವಾರ ಸರಿಯಾಗಿ ಹಾಜರಾಗಿ ಪೂಜಾ ಗಾಂಧಿ ಹೇಳಿಕೆ ನೀಡಿದರು. ನವೆಂಬರ್‌ 10 ರಿಂದ ಈವರೆಗೆ ನಟಿ ಪೂಜಾ ಗಾಂಧಿ ಅವರು ಕೋರ್ಟ್‌ ನಿಗದಿ ಪಡಿಸಿದ ದಿನಗಳಿಗೆ ಸರಿಯಾಗಿ ನಾಲ್ಕು ಬಾರಿ ಹಾಜರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.