ADVERTISEMENT

ಮಹಿಳಾ ಕಾಲೇಜು ಕಟ್ಟಡ ಸ್ಥಳಾಂತರ ಬೇಡ

ಅಕ್ಕಮಹಾದೇವಿ ಮಹಿಳಾ ವಿವಿ ಸಂಯೋಜಿತ ಸಂಸ್ಥೆ; ಪ್ರತಿಭಟನೆ– ಎಬಿವಿಪಿ, ಎಸ್‌ಎಫ್‌ಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:28 IST
Last Updated 14 ಫೆಬ್ರುವರಿ 2017, 9:28 IST
ಕೊಪ್ಪಳದ ಮಹಿಳಾ ಸರ್ಕಾರಿ  ಪ್ರಥಮದರ್ಜೆ ಕಾಲೇಜು ಕಟ್ಟಡಕ್ಕೆ ನಿಗದಿಯಾದ ಸ್ಥಳ ಬದಲಾಯಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತನನ್ನು ಸೋಮವಾರ ಪೊಲೀಸರು ಬಂಧಿಸಿದರು
ಕೊಪ್ಪಳದ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಟ್ಟಡಕ್ಕೆ ನಿಗದಿಯಾದ ಸ್ಥಳ ಬದಲಾಯಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತನನ್ನು ಸೋಮವಾರ ಪೊಲೀಸರು ಬಂಧಿಸಿದರು   
ಕೊಪ್ಪಳ:  ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ನಿಗದಿಪಡಿಸಿದ ಸ್ಥಳದಲ್ಲಿಯೇ (ಸಾರ್ವಜನಿಕ ಮೈದಾನದ ಬಳಿ) ನಿರ್ಮಿಸುವಂತೆ ಒತ್ತಾಯಿಸಿ ಅಖಿಲಭಾರತ ವಿದ್ಯಾರ್ಥಿ ಪರಿಷತ್‌ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಕಾರ್ಯಕರ್ತರು ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
 
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಸಂಯೋಜಿತ ಈ ಕಾಲೇಜಿಗೆ ನೂತನ ಕಟ್ಟಡ ಮಂಜೂರಾಗಿದೆ. ಇದರ ಹಿಂದೆ ತಮ್ಮ ಸಂಘಟನೆಯ ಹೋರಾಟವಿದೆ. ಈಗ ಕೆಲವರು ಸಾರ್ವಜನಿಕ ಮೈದಾನವನ್ನು ಉಳಿಸುವ ಹೆಸರಿನಲ್ಲಿ ಕಾಲೇಜನ್ನು ನಗರದ ಹೊರಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಇದು ಖಂಡನೀಯ. ಹೀಗಾದಲ್ಲಿ ವಿದ್ಯಾರ್ಥಿನಿಯರ ಪದವಿ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು. 
 
 ಕಟ್ಟಡವನ್ನು ಬೇರೆ ಕಡೆ ಸ್ಥಳಾಂತರಿಸಲು ಆಗ್ರಹಿಸಿರುವುದು ಸರಿಯಲ್ಲ. ಸಾರ್ವಜನಿಕ ಮೈದಾನವು ನಗರದ ಮಧ್ಯಭಾಗದಲ್ಲಿದ್ದು ಮಹಿಳೆಯರಿಗೆ ನಗರದ ಬಸ್‌ ಮತ್ತು ರೈಲು ನಿಲ್ದಾಣಗಳಿಂದ ಕಾಲೇಜಿಗೆ ಬರಲು ಸಮೀಪವಾಗಿದೆ. ಈ ನಿಟ್ಟಿನಲ್ಲಿ ಕಟ್ಟಡವನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ನಿರ್ಮಿಸಬೇಕು ಎಂದು ಎರಡು ಸಂಘಟನೆಗಳ ಮುಖಂಡರು ಒತ್ತಾಯಿಸಿದರು. 
 
ಎಬಿವಿಪಿ ನಡೆಸಿದ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ರವಿಚಂದ್ರ ಮಾಲಿಪಾಟೀಲ್, ನಗರ ಸಂಘಟನಾ ಕಾರ್ಯದರ್ಶಿ ಎನ್.ಮಂಜುನಾಥ, ಜಿಲ್ಲಾ ಸಹ ಸಂಚಾಲಕ ನಾಗರಾಜ ನಾಯಕ, ನಗರ ಕಾರ್ಯದರ್ಶಿ ಮುಕುಂದ ಕರಣಂ, ವಿದ್ಯಾರ್ಥಿನಿಯರಾದ ಲಕ್ಷ್ಮಿ ಬೆಟ್ಟದೂರು, ಶ್ರುತಿ, ಶಿಲ್ಪಾ, ಕಾಶಿನಾಥ, ಮಂಜುನಾಥ, ಗವಿ, ರೇಖಾ, ಸಂಗೀತಾ ಇದ್ದರು. 
 
ಎಸ್ಎಫ್ಐ ನಡೆಸಿದ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ, ತಾಲ್ಲೂಕು ಮುಖಂಡ ಸುಭಾನ್ ಸೈಯದ್‌, ಶಿವಕುಮಾರ್, ರಾಜಕುಮಾರ ಮೋಜಗಾರ, ವಿಷ್ಣು, ಶಾಂತಕುಮಾರ, ಕೃಷ್ಣ ಲಮಾಣಿ, ಸಿಐಟಿಯು ಜಿಲ್ಲಾ ಮುಖಂಡರಾದ ಕಾಸಿಂಸಾಬ್ ಸರ್ದಾರ್, ಸುಂಕಪ್ಪ ಗದಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.