ADVERTISEMENT

ಕವಿತಾಳದಲ್ಲಿ ವಸತಿಸಹಿತ ಪದವಿ ಕಾಲೇಜು: ಬೋಸರಾಜು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 7:05 IST
Last Updated 24 ಜನವರಿ 2018, 7:05 IST
ಕವಿತಾಳದಲ್ಲಿ ನಿರ್ಮಿಸಲು ಉದ್ಧೇಶಿಸಿದ ವಸತಿ ಸಹಿತ ಪದವಿ ಕಾಲೇಜಿನ ಕಟ್ಟಡದ ನೀಲನಕ್ಷೆಯನ್ನು ಶಾಸಕರಾದ ಎನ್.ಎಸ್.ಬೋಸರಾಜು ಮತ್ತು ಜಿ.ಹಂಪಯ್ಯ ನಾಯಕ ಭಾನುವಾರ ಪ್ರದರ್ಶಿಸಿದರು
ಕವಿತಾಳದಲ್ಲಿ ನಿರ್ಮಿಸಲು ಉದ್ಧೇಶಿಸಿದ ವಸತಿ ಸಹಿತ ಪದವಿ ಕಾಲೇಜಿನ ಕಟ್ಟಡದ ನೀಲನಕ್ಷೆಯನ್ನು ಶಾಸಕರಾದ ಎನ್.ಎಸ್.ಬೋಸರಾಜು ಮತ್ತು ಜಿ.ಹಂಪಯ್ಯ ನಾಯಕ ಭಾನುವಾರ ಪ್ರದರ್ಶಿಸಿದರು   

ಕವಿತಾಳ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿಗಳ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣವಾದ ಬಳಿಕ ಗ್ರಾಮಸ್ಥರ ಜತೆ ಚರ್ಚಿಸಿ ಹಳೆ ಕಟ್ಟಡ ತೆರವುಗೊಳಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರೋತ್ಥಾನ ಯೋಜನೆ ಅಡಿ ಪಟ್ಟಣ ಪಂಚಾಯಿತಿಗೆ ಬಿಡುಗಡೆಯಾದ ₹ 5 ಕೋಟಿ ಅನುದಾನದಲ್ಲಿ ₹ 13 ರಸ್ತೆಗಳ ಅಭಿವೃದ್ಧಿ, ಚರಂಡಿ, ಶೌಚಾಲಯ ಮತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿ, ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಹೇಳಿದರು. ರಾಜ್ಯದಲ್ಲಿ ಪ್ರಥಮವಾಗಿ ಕವಿತಾಳದಲ್ಲಿ ವಸತಿ ಸಹಿತ ಪದವಿ ಕಾಲೇಜಿನ ನಿರ್ಮಾಣಕ್ಕೆ ಅಂದಾಜು ₹ 23 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ADVERTISEMENT

ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಪಟ್ಟಣದ ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ ನಿಲ್ದಾಣ, ಕುಡಿಯುವ ನೀರಿನ ಕೆರೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದರು. ಫಾದರ್‌ ಐವನ್‌ ಪಿಂಟೊ, ಡಾ.ಸರಮಸ್ತ ಧಣಿ, ಜಿಲ್ಲಾ ಪಂಚಾಯಿತಿ ಸದಸ್ಯ ಕಿರಲಿಂಗಪ್ಪ,ಮಾಜಿ ಸದಸ್ಯ ಮಾಳಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮೌನೇಶ ಬುಳ್ಳಾಪುರ, ಎಪಿಎಂಸಿ ನಿರ್ದೇಶಕ ವೀರಾರಡ್ಡೆಪ್ಪ ಭಾವಿಕಟ್ಟಿ, ಕಾಂಗ್ರೆಸ್‌ ಮುಖಂಡರಾದ ಈ.ಶೇಷಗಿರಿರಾವ್, ಡಾ.ಡಿ.ನಾಗಪ್ಪ, ಯಮನಪ್ಪ ದಿನ್ನಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.