ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಪ್ರತಿಯೊಬ್ಬರೂ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 6:44 IST
Last Updated 12 ಫೆಬ್ರುವರಿ 2018, 6:44 IST

ಸಿಂಧನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹಿಂದೆ ಬೀಳದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಹೊಸ ಜಗತ್ತಿಗೆ ಇಂದಿನ ಮಕ್ಕಳನ್ನು ಸಿದ್ಧಗೊಳಿಸಬೇಕು ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.

ನಗರದಲ್ಲಿ ಇಎಲ್‌ಟಿ ಇಂಡಿಯಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂಧನೂರು, ಆಂಗ್ಲ ಭಾಷಾ ಶಿಕ್ಷಕರ ವೇದಿಕೆಯಿಂದ ವಿನಯ್ ರೆಸಿಡೆನ್ಸಿಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಆಂಗ್ಲ ಭಾಷಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಭಾಗವು ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕಾದರೆ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಆಂಗ್ಲಭಾಷಾ ವಿಷಯವನ್ನು ಸುಲಭವಾಗಿ ಕಲಿಸಬೇಕು. ಮುಂದಿನ ಅವರ ಭವಿಷ್ಯವನ್ನು ಉಜ್ವಲಗೊಳಿಸಿಸಲು ಶ್ರಮಿಸಬೇಕು ಎಂದರು.

ADVERTISEMENT

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ ನಂದನೂರು, ಡಯಟ್ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಸೇಖರಗೌಡ, ಶಿಕ್ಷಣಾಧಿಕಾರಿ ಇಂದಿರಾ ಮಾತನಾಡಿದರು.

ನಗರಸಭೆ ಸದಸ್ಯ ಸೈಯದ್ ಜಾಫರಲಿ ಜಹಗೀರದಾರ್, ಡಯಟ್‌ನ ಹನುಮಂತಪ್ಪ ಗವಾಯಿ, ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ಬಿ ಪೊಲೀಸ್ ಪಾಟೀಲ್, ಜೆ.ಸಿ. ಸಂಜೀವ್ ಸುಧಾಕರ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಹಿರೇಮೇಠ, ವಿಷಯ ಪರಿವೀಕ್ಷಕರಾದ ಹೀರಾಬಾಯಿ, ಜೀವನಸಾಬ ಮುಖಂಡರಾದ ಭದ್ರಿ ಮಸ್ಕಿ, ವೀರೇಶ ಅಗ್ನಿ, ಮಲ್ಲಿಕಾರ್ಜುನ ಮಟ್ಟೂರು ಇದ್ದರು.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಬೋಧಿಸುವ 250ಕ್ಕೂ ಹೆಚ್ಚು ಶಿಕ್ಷಕರು ಭಾಗವಹಿಸಿದ್ದರು.

ಇಎಲ್‌ಟಿ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಛತ್ತೀಸ್‌ಗಢ ರಾಜ್ಯದ ಜಿ.ಎ.ಘನಶ್ಯಾಮ, ಹೈದರಾಬಾದ್ ಸಿಫೆಲ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಮೋಹನ್‌ರಾಜ್, ಬಾಗಲಕೋಟೆ ಜಿಲ್ಲೆಯ ಕೆರೂರಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಎಸ್.ಎಮ್.ನದಾಫ್ ಕಾರ್ಯಾಗಾರದದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಇಎಲ್‌ಟಿ ಇಂಡಿಯಾದ ಜಿಲ್ಲಾ ಘಟಕವನ್ನು ಉದ್ಘಾಟಿಸಲಾಯಿತು. ಆಂಗ್ಲಭಾಷಾ ಶಿಕ್ಷಕರ ಬಲವರ್ಧನೆ, ಆಂಗ್ಲಭಾಷಾ ವಿಷಯದ ಕಾವ್ಯ ಪ್ರಕಾರ ಬೋಧನೆ, ಆಂಗ್ಲಭಾಷಾ ಕಲಿಕಾ ಚಟುವಟಿಕೆಗಳು ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮ ಪಡಿಸುವಿಕೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಆಂಗ್ಲಭಾಷಾ ವಿಷಯ ಪರಿವೀಕ್ಷಕ ಆರೀಫಾ ತಬಸ್ಸುಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ ಪ್ರಕಾಶ ಆರ್‌ಎಚ್ ಸ್ವಾಗತಿಸಿದರು. ಶಿಕ್ಷಕಿ ನಂದಿನಿ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ವೀರೇಶ ಗೋನವಾರ ವಂದಿಸಿದರು.
ಪದಾಧಿಕಾರಿಗಳಾದ ಶೇಖರಗೌಡ ಮಾಲಿಪಾಟೀಲ್, ಕೆ.ಮಲ್ಲಪ್ಪ, ರವೀಂದ್ರಗೌಡ, ಆದಪ್ಪ, ಹನುಮಂತಪ್ಪ, ಶರಣಪ್ಪ, ಶಿವಪ್ಪ, ಟಿ.ಆರ್.ಪಾಟೀಲ್, ಸಿದ್ರಾಮಯ್ಯ, ಬಸವರಾಜಸ್ವಾಮಿ, ಖಾದ್ರಿ, ಹರೀಶ ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.