ADVERTISEMENT

ಕ್ರೀಡೆ ಉತ್ತೇಜನಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2015, 9:28 IST
Last Updated 31 ಡಿಸೆಂಬರ್ 2015, 9:28 IST

ಕನಕಪುರ: ‘ಗ್ರಾಮೀಣ ಕ್ರೀಡೆಯಲ್ಲಿ ಕೊಕ್ಕೊ ಕೂಡ ಒಂದಾಗಿದ್ದು, ಕ್ರೀಡೆಯನ್ನು ಉಳಿಸಲು ಉತ್ತೇಜನ ನೀಡಬೇಕು’ ಎಂದು ಆರ್‌.ಇ.ಎಸ್‌. ಸಂಸ್ಥೆಯ ನಿರ್ದೇಶಕ ಕೆ.ಬಿ.ನಾಗರಾಜು ಹೇಳಿದರು.

ನಗರದ ಆರ್.ಜಿ.ಎಚ್.ಎಸ್. ಶಾಲೆಯಲ್ಲಿ ಪೂಜ್ಯ ಎಸ್. ಕರಿಯಪ್ಪನವರ ಸ್ಮರಣಾರ್ಥ ಏರ್ಪಡಿಸಿದ್ದ ಅಂತರ ಪ್ರೌಢಶಾಲಾ ಬಾಲಕಿಯರ ಕೊಕ್ಕೊ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ದೇಶದ ಎಲ್ಲಾ ಕ್ರೀಡೆಗಳು ವ್ಯಾಯಾಮದ ಹಿನ್ನೆಲೆಯುಳ್ಳವಾಗಿವೆ. ಮಾನಸಿಕ ಸದೃಢತೆಯ ಜತೆಗೆ ದೈಹಿಕ ದಂಡನೆ  ಕ್ರೀಡೆಯಲ್ಲಿರುವುದರಿಂದ ಕ್ರೀಡಾಪಟುಗಳಿಗೆ ಉತ್ತಮ ವ್ಯಾಯಾಮವಾಗಲಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಿ.ರಮೇಶ್‌ ಮಾತನಾಡಿ, ‘ವಿಶ್ವಮಟ್ಟದಲ್ಲಿ ಒಂದು ದೇಶವನ್ನು ಗುರುತಿಸುವುದು ಆಯಾ ದೇಶದ ಕ್ರೀಡೆಯಿಂದ. ಕೊಕ್ಕೊ  ಕ್ರೀಡೆಯಲ್ಲಿ ಉತ್ತಮ ಪರಿಣಿತಿ ಪಡೆದು ಉತ್ತಮ ಸಾಧನೆ ಮಾಡಿದರೆ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಹೋಗುವ ಅವಕಾಶವಿದೆ’ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಟಿ. ಶಿವರಾಮು, ಶಿಕ್ಷಕರಾದ ಲಿಂಗರಾಜು, ಜಿ.ಎಸ್.ನಾಗರಾಜು, ಶ್ರೀನಿವಾಸ್, ಟಿ.ವಿ.ಎನ್. ಪ್ರಸಾದ್, ತಿಮ್ಮೇಗೌಡ, ಕೆ.ಸಿ.ಆರಾಧ್ಯ, ಶೃತಿ, ಪುಷ್ಪಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ಎಂ.ಎನ್. ಕುಸುಮಾ ಸಿದ್ದೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.