ADVERTISEMENT

ಗುಂಡಿ ಮುಚ್ಚಿ ಸಂಪರ್ಕ ರಸ್ತೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 10:04 IST
Last Updated 16 ಸೆಪ್ಟೆಂಬರ್ 2017, 10:04 IST
ಚೀಲೂರು ಗ್ರಾಮದ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ
ಚೀಲೂರು ಗ್ರಾಮದ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ   

ಮರಳವಾಡಿ(ಕನಕಪುರ):ತಾಲ್ಲೂಕಿನ ಮರಳವಾಡಿ ಹೋಬಳಿ ಚೀಲೂರು ಗ್ರಾಮದ ಸಂಪರ್ಕ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿ ಪಂಚಾಯಿತಿ ವತಿಯಿಂದ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ.

ಚೀಲೂರು ಗ್ರಾಮಕ್ಕೆ ಬೆಂಗಳೂರು ಮುಖ್ಯ ರಸ್ತೆಯಿಂದ ಸಂಪರ್ಕ ಸಲ್ಲಿಸುವ ರಸ್ತೆಯು ತೀರ ಹದಗೆಟ್ಟು ಗುಂಡಿಗಳಾಗಿ ವಾಹನಗಳು ಓಡಾಡುವುದು ತೀವ್ರ ಕಷ್ಟವಾಗಿತ್ತು. ಜನತೆಯ ಸಮಸ್ಯೆಯನ್ನು ಅರಿತು ‘ಪ್ರಜಾವಾಣಿ’ ದಿನಪತ್ರಿಕೆ ರಸ್ತೆಯ ದುಸ್ಥಿತಿಯ ವರದಿ ಮಾಡಿತ್ತು.

ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತವು ಶೀಘ್ರವೇ ಸ್ಪಂದಿಸಿ ಗ್ರಾಮಕ್ಕೆ ಬರುವ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಎರಡು ದಿನದಂದ ರಸ್ತೆಗೆ ಮಣ್ಣುಹೊಡೆಸಿ ರಸ್ತೆಯನ್ನು ಎತ್ತರಿಸುವ ಮೂಲಕ ರಸ್ತೆಯಲ್ಲಿ ನೀರು ನಿಲ್ಲದಂತೆ ಅಭಿವೃದ್ಧಿ ಕಾಮಗಾರಿ ಮಾಡುತ್ತಿದೆ. ‘ಪ್ರಜಾವಾಣಿ’ ವರದಿಯಿಂದ ರಸ್ತೆ ಅಭಿವೃದ್ಧಿ ಆಗುತ್ತಿರುವುದಕ್ಕೆ ಗ್ರಾಮದ ಜನತೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.