ADVERTISEMENT

ದೇಗುಲ ಭಕ್ತರಿಂದ ಅಕ್ರಮ ಸುಂಕ ವಸೂಲಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:45 IST
Last Updated 25 ಏಪ್ರಿಲ್ 2017, 6:45 IST

ಮಾಗಡಿ: ಗಿರಿಧಾಮ ಸಾವನದುರ್ಗದಲ್ಲಿ ಇರುವ ಚಾರಿತ್ರಿಕ ಸಾವಂದಿ ವೀರಭದ್ರಸ್ವಾಮಿ ಸ್ವಾಮಿ ಮತ್ತು ಲಕ್ಷ್ಮೀನರಸಿಂಹ ಸ್ವಾಮಿ ದೇಗುಲಗಳಿಗೆಬರುವ ಭಕ್ತರಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಕ್ತಮಂಡಳಿಯ ಪದಾಧಿಕಾರಿಗಳು ಸೋಮವಾರ  ಹಂಚಿಕುಪ್ಪೆ ಗ್ರಾಮಪಂಚಾಯಿತಿ ಎದುರು  ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭಕ್ತಮಂಡಳಿ ಸದಸ್ಯರು ಧರಣಿ ನಡೆಸಿ ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕೆಪಿಆರ್‌ಎಸ್‌ ರಾಜ್ಯ ಸಮಿತಿ ಸದಸ್ಯೆ ವನಜ ಆಗೂ ಆರ್‌ಟಿಐ ಕಾರ್ಯಕರ್ತ ಜೋಡುಗಟ್ಟೆ ನಾಗರಾಜು, ಸಾವನದುರ್ಗದ ರುದ್ರೇಶಾರಾಧ್ಯ, ನರಸಿಂಹ, ನಾಗರಾಜು, ವೀರಭದ್ರಯ್ಯ, ಮಂಡಿಪ್ರಕಾಶ್‌, ಜಗದೀಶ್‌,ವೀರೇಶ್‌ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಇಡಿ ದಿನ ಗ್ರಾಮಪಂಚಾಯಿತಿ ಮುಂದೆ ಧರಣಿ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ಸಂಜೆ 6 ಗಂಟೆಗೆ ಭೇಟಿ ನೀಡಿದ ತಹಶೀಲ್ದಾರ್‌ ಎನ್‌.ಲಕ್ಷ್ಮಿ ಮಾತನಾಡಿ, ಏ25 ರಂದು ಬೆಳಿಗ್ಗೆ 10.30ಕ್ಕೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಭಕ್ತಮಂಡಳಿ ಮತ್ತು ಗ್ರಾಮ ಪಂಚಾಯಿತಿ ಪದಾಧಿಕಾರಿಗಳೊಂದಿಗೆ ಸುಂಕ ವಸೂಲಿ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು,  ನಂತರ ಧರಣಿ ಕೈಬಿಡುವಂತೆ ಅವರು ಪ್ರತಿಭಟನಾಕಾರರ ಮನವೊಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.