ADVERTISEMENT

ದೊಡ್ಡಕೊಪ್ಪ ಗ್ರಾಮದಲ್ಲಿ ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:57 IST
Last Updated 18 ಡಿಸೆಂಬರ್ 2017, 4:57 IST
ಉಪ ಚುನಾವಣೆಯಲ್ಲಿ ಮತದಾನ ಮಾಡಲು ಸಾಲಿನಲ್ಲಿ ನಿಂತಿರುವುದು
ಉಪ ಚುನಾವಣೆಯಲ್ಲಿ ಮತದಾನ ಮಾಡಲು ಸಾಲಿನಲ್ಲಿ ನಿಂತಿರುವುದು   

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಪ್ಪ ಗ್ರಾಮ ಪಂಚಾಯಿತಿಗೆ ಭಾನುವಾರ ಉಪ ಚುನಾವಣೆ ನಡೆಯಿತು.

ದೊಡ್ಡಕೊಪ್ಪ ಗ್ರಾಮದ ಸದಸ್ಯೆ ರತ್ನಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತರಾಗಿ ವೆಂಕಟೇಶಮ್ಮ, ಜೆ.ಡಿ.ಎಸ್‌. ಬೆಂಬಲಿತರಾಗಿ ಕಾಳಮ್ಮ ಸ್ಪರ್ಧಿಸಿದ್ದರು. ‌ಒಟ್ಟು 433 ಮತದಾರರಿದ್ದು 325 ಮಂದಿ ಮತ ಚಲಾವಣೆ ಮಾಡಿದರು.

ಆರೋಪ: ದೊಡ್ಡಕೊಪ್ಪ ಗ್ರಾಮದಲ್ಲಿ ಚುನಾವಣೆಯ ಅಗತ್ಯವಿರಲಿಲ್ಲ. ಗ್ರಾಮಸ್ಥರು ಸೇರಿ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರು. ಜೆ.ಡಿ.ಎಸ್‌ ಉದ್ದೇಶಪೂರ್ವಕವಾಗಿ 85 ವರ್ಷದ ಕಾಳಮ್ಮ ಅವರನ್ನು ಕಣಕ್ಕಿಳಿಸಿ ಚುನಾವಣಾ ಪ್ರಚಾರಕ್ಕೆ ಬಾರದೆ ದೂರ ಉಳಿದು, ಅನಗತ್ಯ ಚುನಾವಣೆ ನಡೆಯುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ಎಂ.ರಾಜೇಂದ್ರ ಆರೋಪಿಸಿದರು. ಐ.ಗೊಲ್ಲಳ್ಳಿ ಕಾಂಗ್ರೆಸ್‌ ಮುಖಂಡ ಉಮೇಶ್‌,  ದೊಡ್ಡಕೊಪ್ಪರಾಜು, ನಾಸೀರ್‌, ಜಮೀರ್‌ಅಹಮ್ಮದ್‌, ಶಿವರಾಜು, ದೀಪು  ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.