ADVERTISEMENT

ಪ್ರಾಕಾರೋತ್ಸವಕ್ಕೆ ಚಾಲನೆ

ಮಾಗಡಿ ಸೋಮೇಶ್ವರಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 8:45 IST
Last Updated 30 ಜನವರಿ 2017, 8:45 IST
ಮಾಗಡಿ ಪಟ್ಟಣದ ಸೋಮೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ನಡೆದ ಪ್ರಾಕಾರೋತ್ಸವಕ್ಕೆ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್‌ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಮಾಗಡಿ ಪಟ್ಟಣದ ಸೋಮೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ನಡೆದ ಪ್ರಾಕಾರೋತ್ಸವಕ್ಕೆ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್‌ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ಮಾಗಡಿ: ಪಟ್ಟಣದ ಸೋಮೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ನಡೆದ ಪ್ರಾಕಾರೋತ್ಸವಕ್ಕೆ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್‌ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಧಾರ್ಮಿಕ ಪೂಜಾದಿಗಳನ್ನು ನೆರವೇರಿಸುವುದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ಜೀವನ್ಮುಕ್ತಿ ದೊರೆಯಲಿದೆ ಎಂಬ ಅನುಭಾವಿಗಳ ಮಾತಿನಂತೆ ಪ್ರಾಕಾರೋತ್ಸವ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸೋಮೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಫೆ.3ರಂದು ಮಧ್ಯಾಹ್ನ 12.30ರಿಂದ 1.30ರವರೆಗೆ ನಡೆಯಲಿರುವ ಬ್ರಹ್ಮರಥೋತ್ಸವದ ಅಂಗವಾಗಿ ಸೋಮೇಶ್ವರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 18 ನೇ ವರ್ಷದ  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಭಾಗವಹಿಸುವಂತೆ ಮನವಿ
ಮಾಡಿದರು.

ಪ್ರಾಕಾರೋತ್ಸವ ಮತ್ತು ಕಲ್ಯಾಣೋತ್ಸವದ ಸೇವಾ ಕರ್ತರಾದ ಎಸ್‌.ಕೆ.ಮಂಜುನಾಥ, ಆರ್‌.ಪುಟ್ಟಸ್ವಾಮಿ, ಗುರುಸ್ವಾಮಿ, ಆರ್‌.ಮಂಜುನಾಥ್‌, ರಘುಪತಿ, ಎಂ.ವೈ.ರೇಣುಕಪ್ಪ, ಡಾ.ಮಂಜುನಾಥ ಧಾರ್ಮಿಕ ಪೂಜಾ ಉತ್ಸವಗಳ ಬಗ್ಗೆ ಮಾತನಾಡಿದರು.

ರಾಜು, ರಾಜವರ್ಮ, ಎಂ.ಆರ್‌.ಬಾಬು, ನಂದಾಕೇಬಲ್‌, ಕದಂಬ ಕೃಷ್ಣ, ರತ್ನಾ ಮಂಜುನಾಥ್‌, ರೂಪಾವೆಂಕಟೇಶ್‌, ವಿಜಯಲಕ್ಷ್ಮೀಗುರುಸ್ವಾಮಿ ಇದ್ದರು. ಅರ್ಚಕರಾದ ಕಿರಣ್‌ ದೀಕ್ಷಿತ್‌ ಪೂಜಾದಿಗಳನ್ನು ನೆರವೇರಿಸಿದರು. ಪ್ರಸಾದ ವಿನಿಯೋಗ ಮಾಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.