ADVERTISEMENT

ಮಾಗಡಿ ಕ್ಷೇತ್ರದಿಂದ ಸ್ಪರ್ಧೆ: ಇಂಗಿತ

ಶಾಸಕ ಬಾಲಕೃಷ್ಣ ಕಾಂಗ್ರೆಸ್‌ ಸೇರಿದರೆ, ಜೆಡಿಎಸ್‌ ಸೇರುವೆ – ಎ.ಮಂಜು

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:48 IST
Last Updated 22 ಮೇ 2017, 7:48 IST
ಮಾಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ್ ಅವರ 43ನೇ ಹುಟ್ಟುಹಬ್ಬದ ನೆನಪಿಗಾಗಿ  ಅಭಿಮಾನಿಗಳು ಬೆಳ್ಳಿ ಖಡ್ಗ  ನೀಡಿ ಸನ್ಮಾನಿಸಿದರು
ಮಾಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ್ ಅವರ 43ನೇ ಹುಟ್ಟುಹಬ್ಬದ ನೆನಪಿಗಾಗಿ ಅಭಿಮಾನಿಗಳು ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು   

ಮಾಗಡಿ: ‘2018ನೇ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ’ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮನವಿ ಮಾಡಿದರು. ಪಟ್ಟಣದ ಜಿಕೆಬಿಎಂಎಸ್ ಆವರಣದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಾಸಕ ಬಾಲಕೃಷ್ಣ ಅವರು ಯಾವ ನೈತಿಕತೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ’ ಎಂದು ಪ್ರಶ್ನಿಸಿದರು. ‘ಚುನಾವಣೆಯಲ್ಲಿ ಕಾಂಗ್ರೆಸ್ ಮತದಾರರು ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಶಾಸಕ ಬಾಲಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾನು ಜೆಡಿಎಸ್ ಪಕ್ಷಕ್ಕೆ ಹೋಗುತ್ತೇನೆ’ ಎಂದು ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣ ಮೂರ್ತಿ ಶುಭ ಕೋರಿದರು.

43ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು 43 ಕೆಜಿಯ ಬೃಹತ್ ಕೇಕ್‌ ಕತ್ತರಿಸಿ ಎ.ಮಂಜುನಾಥ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿದರು.
ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್.ಮಂಜುನಾಥ, ಪುರ ಸಭೆ ಸದಸ್ಯ ಕೆ.ವಿ.ಬಾಲು, ದಂಡಿಗೆ ಪುರದ ಅಶೋಕ್ ಇತರರು ಬೆಳ್ಳಿ ಖಡ್ಗ ನೀಡಿ ಶುಭ ಹಾರೈಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್‌, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜು, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಜಿ. ನರಸಿಂಹಮೂರ್ತಿ, ಶಂಕರ್‌, ಗ್ರಾಮ ಪಂಚಾಯಿತಿ ಸದಸ್ಯ ಹೊಸಹಳ್ಳಿ ರಂಗಣ್ಣ, ಡೈರಿ ಅಧ್ಯಕ್ಷ ಅಶೋಕ್, ಪುರಸಭೆ ಸದಸ್ಯರಾದ  ಶಿವಕುಮಾರ್, ಮಹೇಶ್, ಮಹದೇವ್, ನಯಾಜ್, ನರಸಿಂಹಮೂರ್ತಿ, ಕೆಂಪಸಾಗರ ಗುಂಡ, ವೀರಶೈವ ಸಮಾಜದ ಮುಖಂಡ ಅನಿಲ್‌ ಕುಮಾರ್‌, ಯುವ ಕಾಂಗ್ರೆಸ್ ಅಧ್ಯಕ್ಷ ರಹಮತ್ ಉಲ್ಲಾ ಖಾನ್‌  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಸಕರಿಂದ ವಂಚನೆ
ಶಾಸಕ ಎಚ್‌.ಸಿ, ಬಾಲಕೃಷ್ಣ ರಾಜ್ಯಸಭಾ ಚುನಾವಣೆಯಲ್ಲಿ ₹9  ಕೋಟಿ ಪಡೆದು ಕ್ಷೇತ್ರದ ಮತವನ್ನು ಹಣಕ್ಕೆ ಮಾರಿಕೊಂಡಿದ್ದಾರೆ ಎಂದು ಎ.ಮಂಜುನಾಥ ಆರೋಪಿಸಿದರು.

ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದು ಹೇಳುತ್ತಿದ್ದಾರೆ.  ಶಾಸಕರು ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್‌ ಠಾಣೆಗಳಲ್ಲಿ ಹಿಂಬಾಲಕರ ಮೂಲಕ ಕೇಸು  ಹಾಕಿಸಿ, ಇನ್ನಿಲ್ಲದ ಕಿರುಕುಳ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT