ADVERTISEMENT

ಮಾಗಡಿ: ಪ್ಲೇಗ್ ಮಾರಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:20 IST
Last Updated 19 ಜುಲೈ 2017, 11:20 IST

ಮಾಗಡಿ: ‘ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಜನಪದ ಹಿನ್ನೆಲೆಯ ಶಕ್ತಿದೇವತೆಗಳ ಜಾತ್ರಾ ಮಹೋತ್ಸವ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜುನಾಥ ತಿಳಿಸಿದರು, ಮಂಗಳವಾರ ಜಾತ್ರೆಯಲ್ಲಿ ಭಾಗ ವಹಿಸಿ ಪೂಜೆ ಸಲ್ಲಿಸಿ ಮಾತನಾಡಿದರು.

ಜನಪದ ಹಿನ್ನೆಲೆಯ ಪ್ಲೇಗ್‌ ಮಾರಮ್ಮ ದೇವಿ ಸರ್ವರಿಗೆ ಸುಖ ನೆಮ್ಮದಿ ಬದುಕು ನೀಡಲಿ ಎಂದು ಜಿ.ಪಂ. ಸದಸ್ಯರು ಪ್ರಾರ್ಥಿಸುವುದಾಗಿ ತಿಳಿಸಿದರು,
ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ. ಜಯರಾಮು, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್‌. ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹನುಮಂತರಾಯಪ್ಪ, ಶಂಕರ್‌, ಪುರಸಭೆಯ ಸದಸ್ಯರಾದ ಶಿವಕುಮಾರ್‌, ಮಹ ದೇವ್‌, ಕೆ.ವಿ.ಬಾಲು, ಮಹೇಶ್‌, ಕಾಂತರಾಜು, ಸುರೇಶ್‌, ನಯಾಜ್‌ ಅಹಮದ್‌, ನರಸಿಂಹಯ್ಯ, ಮಾಜಿ ಸದಸ್ಯೆ ರಾಧಾ ಮಂಜುನಾಥ್‌, ಮೋಟಗೊಂಡನ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಜಯರಾಮ್‌ ಹಾಜರಿದ್ದರು.

ಹೊಸಹಳ್ಳಿ ಮುನಿರಾಜು, ಮಾಯಣ್ಣ,  ಬೆಸಕ ಸುರೇಶ್‌, ಸ್ವಾಮಿ, ಯಶು, ಇಂದು, ಜಯಂತ್‌, ಅಪ್ಪಿ ,ಧರ್ಮ,  ಯುವ ಕಾಂಗ್ರೆಸ್‌ ಅಧ್ಯಕ್ಷ ರಹಮತ್‌ ಉಲ್ಲಾ ಖಾನ್‌, ರವಿ, ಸೋಮು ಹಾಗೂ ಭಕ್ತಾದಿಗಳು ಇದ್ದರು.  ಬೆನಕ ಸುರೇಶ ತಂಡದವರು ಜಿ.ಪಂ. ಸದಸ್ಯರನ್ನು ಸನ್ಮಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.