ADVERTISEMENT

ವಿವಿಧ ಕಾಲೇಜುಗಳ ಉತ್ತಮ ಸಾಧನೆ

ರಾಮನಗರ ಜಿಲ್ಲೆ ದ್ವಿತೀಯ ಪಿ.ಯು.ಸಿ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 27 ಮೇ 2016, 9:43 IST
Last Updated 27 ಮೇ 2016, 9:43 IST

ಚನ್ನಪಟ್ಟಣ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಅಪ್ಪಗೆರೆಯ ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ 90 ರಷ್ಟು ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ಶೇ 88.31 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 92.5 ಸೇರಿ ಒಟ್ಟಾರೆ ಶೇ 90 ರಷ್ಟು ಫಲಿತಾಂಶ ಪಡೆದಿದ್ದು, ಪರೀಕ್ಷೆ ತೆಗೆದುಕೊಂಡಿದ್ದ 117 ವಿದ್ಯಾರ್ಥಿನಿ ಯರಲ್ಲಿ 105 ಮಂದಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 17 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 72 ಮಂದಿ ಪ್ರಥಮ ಶ್ರೇಣಿಯಲ್ಲಿ, 13 ಮಂದಿ ದ್ವಿತೀಯ ಶ್ರೇಣಿಯಲ್ಲಿ, 3 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಕೆ.ಮೋನಿಕಾ 579 ಅಂಕಗಳೊಂದಿಗೆ ಜಿಲ್ಲೆಗೆ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉಳಿದಂತೆ ಎನ್.ನಮ್ರತಾ 572, ಎಂ.ಎಸ್.ಅಪೂರ್ವ, 572, ಜೆ.ಪುಣ್ಯಶ್ರೀ 567, ಪ್ರೀತುಶ್ರೀ 567, ಸಿ.ಮೇಘನಾ 566, ಭೂಮಿಕಾ 566, ಇ.ತೇಜಸ್ವಿನಿ 553, ಪ್ರಿಯಾ ಅಶೋಕ 544, ಸಿ.ಬಿ.ಭಾವನಾ 544 ಅಂಕ ಗಳಿಸಿದ್ದಾರೆ.

ಹಾಗೆಯೆ ಕೆ.ಮೋನಿಕಾ ಗಣಿತದಲ್ಲಿ 100 ಅಂಕ, ಎಂ.ಎಸ್. ಅಪೂರ್ವ ಕನ್ನಡದಲ್ಲಿ 100 ಅಂಕ, ಜೆ.ಪುಣ್ಯಶ್ರೀ ಭೌತಶಾಸ್ತ್ರದಲ್ಲಿ 100 ಅಂಕ, ಭೂಮಿಕಾ ಗಣಿತದಲ್ಲಿ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಿ.ಸಹನಾ 549 ಅಂಕಗಳೊಂದಿಗೆ ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದಿದ್ದಾಳೆ.

ಈಕೆ ಕನ್ನಡದಲ್ಲಿ 97, ಆಂಗ್ಲಭಾಷೆಯಲ್ಲಿ 87, ಅರ್ಥಶಾಶ್ತ್ರದಲ್ಲಿ 88, ವ್ಯವಹಾರ ಅಧ್ಯಯನದಲ್ಲಿ 93, ಲೆಕ್ಕಶಾಸ್ತ್ರದಲ್ಲಿ 93, ಗಣಕ ವಿಜ್ಞಾನದಲ್ಲಿ 91 ಅಂಕ ಪಡೆದಿದ್ದಾಳೆ. ಹಾಗೆಯೆ ಆರ್.ರಶ್ಮಿ 548 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಮೋನಿಕಾಳನ್ನು ಸೇಂಟ್ ಆನ್ಸ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಬ್ರಿಜಿಟ್ ಜಾನ್, ಪ್ರಾಂಶುಪಾಲೆ ಸಿಸ್ಟರ್ ಮೆರಿನಾ, ಉಪನ್ಯಾಸಕ ವರ್ಗ, ಸಿಬ್ಬಂದಿ, ಪೋಷಕರು ಅಭಿನಂದಿಸಿದ್ದಾರೆ.

ಮಾಗಡಿವರದಿ: ಪಟ್ಟಣದಲ್ಲಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವತಿಯಿಂದ ನಡೆಯುತ್ತಿರುವ ಬಿಜಿಎಸ್‌ ವಿಜ್ಞಾನ ಕಾಲೇಜಿನಲ್ಲಿ 212 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಒಟ್ಟು 208 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ, ಬಿಜಿಎಸ್‌ ವಿಜ್ಞಾನ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಕಾಮರ್ಸ್‌ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 92 ವಿದ್ಯಾರ್ಥಿಗಳು ಸಹ ಉತ್ತೀರ್ಣರಾಗಿ ಕಾಲೇಜಿಗೆ ನೂರಕ್ಕೆ ನೂರರಷ್ಟು ಫಲಿತಾಂಶ ತಂದು ಕೊಟ್ಟಿದ್ದಾರೆ,ಡಿಸ್ಟಿಂಗ್‌ಷನ್‌–30, ಪ್ರಥಮ ದರ್ಜೆ 61, ದ್ವಿತೀಯ ದರ್ಜೆ–1 ಉತ್ತೀರ್ಣರಾಗಿದ್ದಾರೆ, ವಿಜ್ಞಾನ ವಿಭಾಗದಲ್ಲಿ 120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 116 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಡಿಸ್ಟಿಂಗ್‌ಷನ್‌–40, ಪ್ರಥಮ ದರ್ಜೆ–73, ದ್ವಿತೀಯ ದರ್ಜೆ–3 ಉತ್ತೀರ್ಣರಾಗಿದ್ದಾರೆ, ವಿಜ್ಞಾನ ವಿಭಾಗದಲ್ಲಿ ಶೇ.97 ರಷ್ಟು ಫಲಿತಾಂಶ ತಂದುಕೊಟ್ಟಿದ್ದಾರೆ ಎಂದು ಪ್ರಾಂಶುಪಾಲ ಕೆ.ಉಮೇಶ್‌ ತಿಳಿಸಿದ್ದಾರೆ.

ಶಿಲ್ಪಶ್ರೀ.ಜಿ.ಆರ್‌.(578) ಶೇ.96.33. ಧನಲಕ್ಷ್ಮೀ.ಎಂ.ಎಸ್‌(577) ಶೇ.96.17, ದಿವ್ಯ .ಎಚ್‌.ಟಿ.(576) ಶೇ.96.00,  ಪ್ರತಿಭಾ .ಎನ್‌.ಎಸ್‌(572) ಶೇ.95,33, ಪಲ್ಲವಿ.ಬಿ.ಎಸ್‌.(571),ಶೇ.95.17 ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಉಳಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹ ಉತ್ತಮ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಅಭಿನಂಧನೆ: ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯ ಸ್ಥರು, ಮಾರ್ಗ ದರ್ಶಕರು ಹಾಗೂ ವಿಜಯ ನಗರ ಶಾಖಾ ಮಠಾಧೀಶರಾದ ಸೌಮ್ಯನಾಥ ಸ್ವಾಮಿ, ಮಾಗಡಿಯ ಬಿಜಿಎಸ್‌  ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿ,

ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ, ಕಾಲೇಜಿನ ಪ್ರಾಂಶುಪಾಲರು.ಉಪನ್ಯಾಸಕರು, ಪೋಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು  ಆಡಳಿತ ಮಂಡಳಿಯ ಪರವಾಗಿ ಅಭಿನಂದಿಸಿರುವುದಾಗಿ ಸ್ವಾಮಿಜಿ ತಿಳಿಸಿದ್ದಾರೆ.

ಮೋನಿಕಾ: ಜಿಲ್ಲೆಗೆ ಪ್ರಥಮ ಸ್ಥಾನ
ಚನ್ನಪಟ್ಟಣದ ಅಪ್ಪಗೆರೆಯ ಸೇಂಟ್ ಆನ್ಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ.ಮೋನಿಕಾ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ 96.5 ಅಂಕ ಪಡೆಯುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಈಕೆ ಕನ್ನಡದಲ್ಲಿ 98, ಆಂಗ್ಲಭಾಷೆಯಲ್ಲಿ 88, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 97, ಗಣಿತದಲ್ಲಿ 100, ಜೀವಶಾಸ್ತ್ರದಲ್ಲಿ 97 ಅಂಕ ಪಡೆದು 600ಕ್ಕೆ ಒಟ್ಟು 579 ಅಂಕ ಗಳಿಸಿ ಈ ಸಾಧನೆ ಮಾಡಿದ್ದಾಳೆ. ಮೋನಿಕಾ ಪಟ್ಟಣದ ಮಂಜುನಾಥನಗರದಲ್ಲಿ ವಾಸವಿರುವ ಕೆ.ಪದ್ಮಾವತಿ ಆರ್.ಕೃಷ್ಣಪ್ಪ ದಂಪತಿ ಪುತ್ರಿ. ಈಕೆಯ ತಂದೆ ಕೃಷ್ಣಪ್ಪ ಅಕ್ಕಿ ಉದ್ಯಮ ನಡೆಸುತ್ತಿದ್ದಾರೆ.

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಮೋನಿಕಾಳನ್ನು ಸೇಂಟ್ ಆನ್ಸ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಬ್ರಿಜಿಟ್ ಜಾನ್, ಪ್ರಾಂಶುಪಾಲೆ ಸಿಸ್ಟರ್ ಮೆರಿನಾ, ಉಪನ್ಯಾಸಕ ವರ್ಗ, ಸಿಬ್ಬಂದಿ, ಪೋಷಕರು ಅಭಿನಂದಿಸಿದ್ದಾರೆ.

ಸತತ ಅಭ್ಯಾಸ: ಅಂದಂದಿನ ಪಾಠ ಗಳನ್ನು ಅಂದೆ ಅಭ್ಯಾಸ ಮಾಡುವುದು. ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಮೋನಿಕಾ  ‘ಪ್ರಜಾವಾಣಿಗೆ‘ ಪ್ರತಿಕ್ರಿಯೆ ನೀಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT