ADVERTISEMENT

ವೃತ್ತಿ ಕೌಶಲದಿಂದ ಯಶಸ್ಸು ಸಾಧ್ಯ

ಹಾರೋಹಳ್ಳಿ: ಮಹಿಳಾ ವಸ್ತ್ರ ವಿನ್ಯಾಸ ತರಬೇತಿ ಶಿಬಿರದ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 9:48 IST
Last Updated 25 ಜುಲೈ 2017, 9:48 IST

ಹಾರೋಹಳ್ಳಿ (ಕನಕಪುರ): ಕರಕುಶಲತೆ, ವೃತ್ತಿ ಉದ್ಯಮದಲ್ಲಿ ಕೌಶಲ ಪಡೆದುಕೊಂಡಾಗ ಮಾತ್ರ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಕೆನರಾ ಬ್ಯಾಂಕಿನ ಉಪ ಮಹಾಪ್ರಬಂಧಕ ವಿಜಯ್‌ಕುಮಾರ್‌ ಹೇಳಿದರು.

ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್‌ ಗ್ರಾಮೀಣ ಮಹಿಳೆಯರ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ಮಹಿಳಾ ವಸ್ತ್ರ ವಿನ್ಯಾಸ ತರಬೇತಿ ಶಿಬಿರದ ಸಮಾ ರೋಪ ಸಮಾರಂಭದಲ್ಲಿ ಮಾತ ನಾಡಿದರು.

ಮಹಿಳೆಯರು ಟೈಲರಿಂಗ್‌, ಹೈನು ಗಾರಿಕೆ, ಮನೆಯಲ್ಲಿ ಕರವಸ್ತ್ರಗಳ ತಯಾರಿಕೆ, ಬ್ಯೂಟಿ ಪಾರ್ಲರ್‌, ಮೇಣದ ಬತ್ತಿ ತಯಾರಿಕೆ ಮೊದಲಾದ ಉದ್ಯೋಗವನ್ನು ಮಾಡಬಹುದು. ಆದರೆ, ಅದಕ್ಕೆ ಬೇಕಾದ ಸೂಕ್ತ ತರಬೇತಿ ಮತ್ತು ಉತ್ಪನ್ನಗಳ ಮಾರಾಟಕ್ಕೆ ಮಾರು ಕಟ್ಟೆಯ ಬಗ್ಗೆ ಜ್ಞಾನ ಹೊಂದಿರಬೇಕು, ಇಲ್ಲವಾದಲ್ಲಿ ಬಂಡವಾಳ ಹೂಡಿ ಮಾಡುವ ಸ್ವಯಂ ಉದ್ಯೋಗದಲ್ಲಿ ನಷ್ಟ ಮತ್ತು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ತರಬೇತಿ ಸಂಸ್ಥೆಯ ನಿರ್ದೇಶಕಿ ಸುಮ ಎನ್‌.ಗಾಂವಕರ್‌ ಮಾತನಾಡಿ ವೃತ್ತಿ ಕೋರ್ಸ್‌ ಮತ್ತು ಸ್ವ ಉದ್ಯೋಗ ಮಾಡಲು ಸೂಕ್ತ ತರಬೇತಿ ಬೇಕಿದೆ, ಅದನ್ನು ಪಡೆಯಲು ಖಾಸಗಿಯಾಗಿ ಹೋದರೆ ಹಣ ಕೊಡಬೇಕಿದೆ, ಆದರೆ ನಮ್ಮ ಸಂಸ್ಥೆಯು ಎಲ್ಲಾ ರೀತಿಯ ತರಬೇತಿಗಳನ್ನು ಉಚಿತವಾಗಿ ಊಟ ವಸತಿಯೊಂದಿಗೆ ನೀಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಪೂರ್ಣ ವಿಜಯ್‌ಕುಮಾರ್‌ ಮಾತನಾಡಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ, ಸವಲತ್ತುಗಳನ್ನು ನೀಡುತ್ತಿದೆ, ಆದರೆ ಮಹಿಳೆಯರು ಕುಟುಂಬದ ನಾಲ್ಕು ಗೋಡೆಗಳ ಮಧ್ಯದಲ್ಲೇ ಉಳಿದು ಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಬೇಕೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.