ADVERTISEMENT

‘ವೃತ್ತಿ ತರಬೇತಿಗೆ ಕರ್ನಾಟಕ ಮಾದರಿ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:20 IST
Last Updated 19 ಮೇ 2017, 6:20 IST
ರಾಮನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಂ.ಎನ್‌. ರಾಜೇಂದ್ರಪ್ರಸಾದ್‌ ಮಾತನಾಡಿದರು
ರಾಮನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಂ.ಎನ್‌. ರಾಜೇಂದ್ರಪ್ರಸಾದ್‌ ಮಾತನಾಡಿದರು   

ರಾಮನಗರ: ಯುವಜನರ ಕೌಶಲ ವೃದ್ಧಿಯ ಜೊತೆಗೆ ನಿರುದ್ಯೋಗ ಸಮಸ್ಯೆ ನೀಗಿಸುವ ಸಲುವಾಗಿ ರಾಜ್ಯ ಸರ್ಕಾರವು `ಕೌಶಲ ಕರ್ನಾಟಕ’ ಯೋಜನೆ ಜಾರಿ ಗೊಳಿಸಿದ್ದು, ಹೆಚ್ಚೆಚ್ಚು ಯುವ ಜನರನ್ನು ಇದಕ್ಕೆ ನೋಂದಣಿ ಮಾಡಿಸುವ ಮೂಲಕ ಅವರಿಗೆ ವೃತ್ತಿ ಆಧಾರಿತ ತರಬೇತಿ ಕೊಡಿಸಬೇಕು ಎಂದು ಉಪ ವಿಭಾಗಾ ಧಿಕಾರಿ ಎಂ.ಎನ್. ರಾಜೇಂದ್ರ ಪ್ರಸಾದ್‌ ಹೇಳಿದರು.

ಯೋಜನೆಯ ಕುರಿತು ಕಾರ್ಯಾಗಾರ ಆಯೋಜಿಸುವ ಸಂಬಂಧ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪ್ರಥಮ ದರ್ಜೆ ಕಾಲೇಜು, ಎಂಜಿನಿ ಯರಿಂಗ್ ಕಾಲೇಜು ಹಾಗೂ ಐಟಿಐಗಳ ಪ್ರಾಚಾರ್ಯ ರೊಂದಿಗೆ ನಡೆದ  ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

‘ರಾಜ್ಯದಲ್ಲಿ ಒಟ್ಟು 6.6ಕೋಟಿ ಜನರಲ್ಲಿ 3.44 ಕೋಟಿ ಯುವ ಜನರಿದ್ದಾರೆ. ಅವರಿಗೆ ಮುಂದಿನ 25 ವರ್ಷಗಳವರೆಗೆ ಅವಕಾಶಗಳನ್ನು ಒದಗಿ ಸುವ ದೃಷ್ಟಿಯಿಂದ ಕೌಶಲ ತರಬೇತಿಯ ಅವಶ್ಯವಿದೆ. ಕೌಶಲ ಮತ್ತು ಸುಸ್ಥಿರ ಜೀವನೋಪಾಯ ಪ್ರೋತ್ಸಾಹಿ ಸಲು ಈ ಯೋಜನೆ ಜಾರಿಗೆ ಬಂದಿದೆ’ ಎಂದು ಅವರು  ವಿವರಿಸಿದರು.

ADVERTISEMENT

‘ಪ್ರತಿ ವರ್ಷ 5 ಲಕ್ಷ ಯುವಜನರಿಗೆ ವಿವಿಧ ಕೌಶಲ ತರಬೇತಿಯನ್ನು ನೀಡಲಾ ಗುವುದು. 18ರಿಂದ 35 ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಅಂತರ್ಜಾಲ ತಾಣ www.kaushalkar.com ಮೂಲಕ ಹೆಸರುಗಳನ್ನು ನೋಂದಾಯಿಸಬಹುದು. ಅಲ್ಲದೆ ಇದೇ 22ರ ವರೆಗೆ ತಾಲೂಕು ಕಚೇರಿಗಳಲ್ಲಿ ನಡೆಯುವ ಕೌಶಲ ಶಿಬಿರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಗಳಲ್ಲಿ ಉಚಿತವಾಗಿ ನೋಂದಾಯಿ ಸಿಕೊಳ್ಳಬಹುದು. ಈ ಬಗ್ಗೆ ಅಧಿಕಾರಿ ಗಳು ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಅವರು ಸೂಚಿಸಿದರು.

‘ತರಬೇತಿಗೆ ಅಂತರ್ಜಾಲದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ತರಬೇತಿ ನೀಡುವ ಸಂಖ್ಯೆಗಿಂತ ನೋಂದಾಯಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮೀಸಲಾತಿ ಕ್ರಮ, ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯಸ್ಸಿನ ಆಧಾರದ ಮೇಲೆ ಆದ್ಯತೆ ನೀಡಲಾಗುವುದು. ಆದ್ಯತಾ ಫಲಾನು ಭವಿಗಳನ್ನು ಶಾಲೆ ಬಿಟ್ಟವರು, ಕಡಿಮೆ ಉದ್ಯೋಗದ ಕಾರ್ಮಿಕರು, ಕಾರ್ಮಿಕ ಬಲದಿಂದ ಹೊರ ಗುಳಿದವರು, ಮಹಿಳೆ ಯರು, ತಾಂತ್ರಿಕ ಕೌಶಲ ಹೊಂದಿರದ ಕಾರ್ಮಿಕರು, ಆದ್ಯತಾ ಸಾಮಾಜಿಕ ಗುಂಪುಗಳು ಎಂದು ವಿಂಡನೆ ಮಾಡ ಲಾಗಿದೆ’ ಎಂದು ಮಾಹಿತಿ ನೀಡಿದರು.

ತಾ.ಪಂ. ಇಒ ಚಂದ್ರು, ಅಧ್ಯಕ್ಷ ಡಿ.ಎಂ.ಮಹದೇವಯ್ಯ, ಪ್ರಭಾರ ತಹಶೀಲ್ದಾರ್ ಶಿವಕುಮಾರ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ  ಡಾ.ಪುಂಡರೀಕ ಸೇರಿದಂತೆ ತಾಲ್ಲೂಕಿನ ವಿವಿಧ ಕಾಲೇಜುಗಳು ಪ್ರಾಚಾರ್ಯರು, ಗ್ರಾಮ ಪಂಚಾಯಿತಿ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

1–6 ತಿಂಗಳ ತರಬೇತಿ
‘ಕೌಶಲ ಕರ್ನಾಟಕ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತಾಲ್ಲೂಕಿನಲ್ಲಿ ಶಾಸಕರು ಶೀಘ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಅಂತರ್ಜಾಲದ ಮೂಲಕ ನೋಂದಣಿ ಆರಂಭವಾಗಿದೆ. ಯೋಜನೆ ಅಡಿ ಫನಾನುಭವಿಗಳಿಗೆ 1ರಿಂದ 6ತಿಂಗಳ ಕಾಲ ತರಬೇತಿ ಸಿಗಲಿದೆ. ಈ ಅವಧಿಯಲ್ಲಿ ಅವರಿಗೆ ಮಾಸಿಕ ₹1 ಸಾವಿರ ಪ್ರೋತ್ಸಾಹ ಧನವೂ ಸಿಗಲಿದೆ. ಒಟ್ಟು 23ಇಲಾಖೆಗಳ ಅಡಿ ತರಬೇತಿ ಸಿಗಲಿದ್ದು, ಮುಂದೆ ಉದ್ಯೋಗ ಪಡೆ ಯಲು ಅನುಕೂಲವಾಗಲಿ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.