ADVERTISEMENT

‘ಸರ್ವರ ಅಭಿವೃದ್ಧಿಗೆ ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 10:11 IST
Last Updated 27 ಜನವರಿ 2017, 10:11 IST
ಮಾಗಡಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕೋಟೆ ಬಯಲಿನಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ವಾಸವಿ ಶಾಲೆಯ ವಿದ್ಯಾರ್ಥಿನಿ ತನುಶ್ರೀ ತಂಡದವರು ಬುಲೆಟ್‌ ಮೇಲೆ ಯೋಗಾಸನ ನಡೆಸಿದರು
ಮಾಗಡಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕೋಟೆ ಬಯಲಿನಲ್ಲಿ ನಡೆದ ಸಾಹಸ ಪ್ರದರ್ಶನದಲ್ಲಿ ವಾಸವಿ ಶಾಲೆಯ ವಿದ್ಯಾರ್ಥಿನಿ ತನುಶ್ರೀ ತಂಡದವರು ಬುಲೆಟ್‌ ಮೇಲೆ ಯೋಗಾಸನ ನಡೆಸಿದರು   

ಮಾಗಡಿ: ಸಂವಿಧಾನದತ್ತ ಆಶಯ ಸರ್ವರಿಗೂ ತಲುಪಿಸಿ, ಸರ್ವರ ಅಭಿವೃದ್ಧಿಗೆ ಶ್ರಮಿಸುವುದು  ನಮ್ಮ  ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಹಶೀಲ್ದಾರ್‌ ಎನ್‌.ಲಕ್ಷ್ಮೀಚಂದ್ರ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ   ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು, ತಹಶೀಲ್ದಾರ್‌ ಎನ್‌.ಲಕ್ಷ್ಮಿಚಂದ್ರ ಧ್ವಜಾರೋಹಣ ನೆರವೇರಿಸಿದ ತಕ್ಷಣ ತುಂತುರು ಹನಿಯ ಹೂಮಳೆ ಸುರಿಯಿತು.

ಭಾರತದ ನಿವಾಸಿಗಳೆಲ್ಲರೂ ಸಂವಿಧಾನಕ್ಕೆ ಗೌರವ ಸಲ್ಲಿಸಲೇಬೇಕು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಬಾಳು ತತ್ವದಡಿಯಲ್ಲಿ ಎಲ್ಲರ ಏಳಿಗೆಗೆ ಶ್ರಮಿಸಬೇಕು ಎಂದರು.

ರಾಜ್ಯ ಕರಕುಶಲ ಮಂಡಳಿ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯೆ ಚಂದ್ರಮ್ಮ ನಂಜಯ್ಯ, ತಾಲ್ಲೂಕು ಪಂಚಾಯ್ತಿ ಇಒ ಕೆ.ಮುರುಡಯ್ಯ, ಪುರಸಭೆ ಅಧ್ಯಕ್ಷೆ ಹೊಂಬಮ್ಮ ನರಸಿಂಹ ಮೂರ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎಂ.ಎಚ್‌. ಸುರೇಶ್‌, ಉಪಾಧ್ಯಕ್ಷ ಧನಂಜಯ ನಾಯ್ಕ್‌, ಹಾಲು ಒಕ್ಕೂಟದ ನಿರ್ದೇಶಕ ನರಸಿಂಹ ಮೂರ್ತಿ, ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್‌. ನಂಜಯ್ಯ, ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಬಿ.ನಂಜುಂಡಯ್ಯ, ತಾಲ್ಲೂಕು ಕಸಾಪ ಅಧ್ಯಕ್ಷೆ ಕಲ್ಪನಾ ಶಿವಣ್ಣ,

ಪುರಸಭೆ ಸದಸ್ಯ ಎಂ,ನಾಗೇಂದ್ರ, ಬಿಇಒ ರಂಗಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನಾಗರಾಜಪ್ಪ, ಟಿಎಪಿಎಂಎಸ್‌ ಮಾಜಿ ಉಪಾಧ್ಯಕ್ಷ ಮಂಜುನಾಥ್‌, ಸಿಪಿಐ ‌ ಎಚ್‌.ಎಲ್‌.ನಂದೀಶ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ನಾರಾಯಣ್‌, ಜೆಡಿಎಸ್‌ನ ಮಹಮದ್‌ ಇನಾಯತ್‌ ಉಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌  ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಮು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಸವಿ ಶಾಲೆಯ ಮಕ್ಕಳಿಂದ ಬುಲೆಟ್‌ ಸಾಹಸ ಪ್ರದರ್ಶನ ನಡೆಯಿತು. ಬುಲೆಟ್‌ ಪ್ರದರ್ಶನ ನಡೆಸಿದ ಟೈಲರ್‌ ಉಮೇಶ್‌ ಪುತ್ರಿ  ತನುಶ್ರೀ ಅವರ ಸಾಹಸ ಮೆಚ್ಚಿ ಪುರಸಭೆಯ ಸದಸ್ಯ ಎಂ. ನಾಗೇಂದ್ರ ₹ 10 ಸಾವಿರ ನಗದು ಬಹುಮಾನ ನೀಡಿದರು. ಸಾಂಸ್ಕೃತಿಕ   ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಶಾಸಕರು ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.