ADVERTISEMENT

ಹೈನುಗಾರಿಕೆ: ಸುಧಾರಿತ ಕೃತಕ ಗರ್ಭಧಾರಣೆ

ಬಿಡದಿ ಸಮೀಪದ ಕೆಂಪಶೆಟ್ಟಿದೊಡ್ಡಿ ಗ್ರಾಮದಲ್ಲಿ ಉಪಕರಣ ಬಿಡುಗಡೆ, ವಿವಿಧ ಉಪಕ್ರಮಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 9:49 IST
Last Updated 25 ಜುಲೈ 2017, 9:49 IST

ಬಿಡದಿ: ‘ಹೈನುಗಾರಿಕೆ ಉದ್ಯಮದ ಅಭಿವೃದ್ಧಿಗೆ ಸುಧಾರಿತ ಕೃತಕ ಗರ್ಭ ಧಾರಣೆ ಉಪಕ್ರಮ ರಾಮ ನಗರದಲ್ಲಿ ಚಾಲನೆ ಗೊಳಿಸುತ್ತಿರುವುದು ವಿಶ್ವದ ಲ್ಲಿಯೆ ಮೊಟ್ಟಮೊದಲ ಪ್ರಯೋಗ’ ಎಂದು ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ವಿ.ಚಂದ್ರಶೇಖರ ಮೂರ್ತಿ ಹೇಳಿದರು.

ಇಲ್ಲಿನ ಕೆಂಪಶೆಟ್ಟಿದೊಡ್ಡಿ ಗ್ರಾಮದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ, ಬಿಡದಿ ಕೈಗಾರಿಕೆಗಳ ಸಂಘ ಹಾಗೂ ಭಾಷ್ ಇಂಡಿಯಾ ಪ್ರತಿಷ್ಠಾನದ ಸಂಯು ಕ್ತಾಶ್ರಯದಲ್ಲಿ ಸೋಮವಾರ ನಡೆದ ಸುಧಾರಿತ ಕೃತಕ ಗರ್ಭಧಾರಣೆ ಉಪಕರಣದ ಬಿಡುಗಡೆ  ಕಾರ್ಯಕ್ರ ಮದಲ್ಲಿ ಅವರು ಉಪನ್ಯಾಸ ನೀಡಿದರು.

ಹೈನು ಉದ್ಯಮದ ಅಭಿವೃದ್ಧಿಗೆ ವಿವಿಧ ಉಪಕ್ರಮಗಳಿಗೆ ಚಾಲನೆ  ನೀಡ ಲಾಯಿತು. ಹಾಲು ಉತ್ಪಾದಕರ ಸಹ ಕಾರ ಸಂಘಗಳಲ್ಲಿ ಕೃತಕ ಗರ್ಭ ಧಾರಣೆಯ ಪ್ರಮಾಣ ಹೆಚ್ಚಿಸುವ ಸಲುವಾಗಿ ಸಮಾರಂಭವೂ ನಡೆಯಿತು.

ADVERTISEMENT

‘ಹುಟ್ಟಿದ ಕರು ಗಂಡಾಗಲಿ ಅಥವಾ ಹೆಣ್ಣಾಗಲಿ ಅದರ ಆರೋಗ್ಯ ರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ. ಹೆಣ್ಣು ಕರುವಿಗೆ ಪ್ರಾರಂಭದ ಒಂದೂವರೆ ತಿಂಗಳವರೆಗೆ ತಾಯಿಯ ಹಾಲನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಸಬೇಕು. ಇದರಿಂದ ಅದು  ಭವಿಷ್ಯ ದಲ್ಲಿ ಉತ್ತಮ ಅಭಿವೃದ್ಧಿ ಹೊಂದುತ್ತದೆ’ ಎಂದರು. ‘ಪಶುವಿನ ಆಹಾರ ಪೋಷಣೆಯ ಬಗೆಗೆ ರೈತರು ಹೆಚ್ಚಿನ ಗಮನ ವಹಿಸ ಬೇಕು’ ಎಂದು ತಿಳಿಸಿದರು.

‘ಇದುವರೆಗೆ ಕೃತಕ ಗರ್ಭ ಧಾರಣೆಯು ಶೇ 42ರಷ್ಟಿದ್ದು ಇದೀಗ ಉಪಯೋಗಿಸುವ ಸುಧಾರಿತ ಕೃತಕ ಗರ್ಭಧಾರಣೆ ಉಪಕರಣವು ಶೇ 60 ರಷ್ಟು ಫಲ ನೀಡುತ್ತದೆ. ಅಲ್ಲದೆ ರೈತರಿಗೆ ಆರ್ಥಿಕ ಆದಾಯ ತರುವ ಮೂಲ ವಾಗಿದೆ. ಆದರೆ ರೈತರು ತಮ್ಮ ಹಸುಗಳಿಗೆ ಗರ್ಭಧಾರಣೆ ಮಾಡಿಸುವಾಗ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡ ಬೇಕು’ಎಂದು ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್ ಮಾತನಾಡಿ ‘ಹಸುಗಳು ಗರ್ಭಧಾರಣೆ ಹೊಂದಿರುವ ಬಗ್ಗೆ ಇದುವರೆಗೆ ದೈಹಿಕವಾಗಿಯೇ ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ. ಆದರೆ ಈಗ ಟಾಟಾ ವಿಜ್ಞಾನ ಸಂಶೋಧನಾ ಸಂಸ್ಥೆಯು ಗರ್ಭ ಪರೀಕ್ಷೆಯ ಸ್ಕ್ಯಾನಿಂಗ್ ಯಂತ್ರವನ್ನು ಕಂಡು ಹಿಡಿದಿದೆ. ಸದ್ಯದಲ್ಲಿಯೇ ರಾಮನಗರ ತಾಲ್ಲೂಕಿಗೆ ಅದನ್ನು ಖರೀದಿಸಲಾಗುವುದು. ಇದರಿಂದ ಕೇವಲ ಎರಡೂವರೆ ನಿಮಿಷದಲ್ಲಿ ಹಸುವಿನ ಗರ್ಭಧರಿಸಿರುವ ಬಗ್ಗೆ ಖಚಿತ ಮಾಹಿತಿ ತಿಳಿದುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.

ಭಾರತೀಯ ವಿಜ್ಞಾನ ಸಂಶ್ಥೆಯ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳಾದ ಪ್ರೊ.ಕೆ.ಪಿ.ಜೆ. ರೆಡ್ಡಿ, ಪ್ರೊ.ಜಿ.ಜಗದೀಶ್, ಮಾಲಿ ಕ್ಯೂಲರ್ ರಿಪ್ರೊಡಕ್ಷನ್ ಮತ್ತು ಡೆವಲ ಪ್‍ಮೆಂಟಲ್ ಜೆನೆಟಿಕ್ ವಿಭಾಗದ ಪ್ರೊ.ಆರ್.ವೇದಮೂರ್ತಿ, ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ವಿ. ಚಂದ್ರ ಶೇಖರ್ ಮೂರ್ತಿ, ಭಾಷ್ ಪ್ರತಿಷ್ಠಾನದ ಮುಖ್ಯಸ್ಥ ರಾಜಕುಮಾರ್ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಯ್ಯ, ಬೈರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ರಾಮಯ್ಯ, ವಿಎಸ್‍ಎಸ್‍ಎನ್ ಅಧ್ಯಕ್ಷ ಸಿದ್ಧರಾಜು, ತಾಲ್ಲೂಕು ಪಂಚಾ ಯಿತಿ ಸದಸ್ಯ ಪ್ರಕಾಶ್, ರಾಜಾರಾಜೇಶ್ವರಿ ನಗರ ರೋಟರಿ ಕ್ಲಬ್ ಅಧ್ಯಕ್ಷ ಶ್ಯಾಮ್ ಸುಂದರ್, ಬೆಂಗಳೂರು ಹಾಲು ಒಕ್ಕೂಟದ ರಾಮನಗರ ಶಿಬಿರ ಉಪ ವ್ಯವಸ್ಥಾಪಕರಾದ ಡಾ. ಶಿವಶಂಕರ್, ಡಾ.ಶ್ರೀನಿವಾಸ್, ಕೆಂಪಶೆಟ್ಟಿದೊಡ್ಡಿ ಎಂಪಿಸಿಎಸ್ ಅಧ್ಯಕ್ಷ ಪುರುಷೋತ್ತಮ್, ಭಾಷ್ ಪ್ರತಿಷ್ಠಾನದ ಡಾ. ಪುಂಡಲೀಕ ಕಾಮತ್, ಸೈಯ್ಯದ್ ಅತಿಕುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯೆ ಶಿವಮ್ಮ ಜಗದೀಶ್, ವೆಂಕಟಾಚಲಯ್ಯ ಇದ್ದರು.

ಉತ್ತಮ ಪರಿಸರ ಮುಖ್ಯ
‘ಮನುಷ್ಯನಿಗೆ ಆರೋಗ್ಯದಿಂದ ಜೀವನ ಸಾಗಿಸಲು ಉತ್ತಮ ಪರಿಸರ ಹೇಗೆ ಮುಖ್ಯವೋ ಹಾಗೆಯೇ ಹಸು ಸಾಕಾಣಿಕೆಗೂ ಪರಿಸರ ಮುಖ್ಯವಾಗಿದೆ’ ಎಂದು ಡಾ.ವಿ.ಚಂದ್ರಶೇಖರ ಮೂರ್ತಿ ತಿಳಿಸಿದರು.

‘ರೈತರು ಹಸುಗಳಿಗೆ ನೀಡುವ ಆಹಾರ ಪದ್ಧತಿ ಮತ್ತು ಹಸು ಗರ್ಭ ಧರಿಸಲು ಸೂಕ್ತ ಕಾಲ ಗಮನಿಸುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.