ADVERTISEMENT

ಹೊಸಪೇಟೆ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:18 IST
Last Updated 7 ನವೆಂಬರ್ 2017, 9:18 IST

ಮಾಗಡಿ: ಬಸವಾದಿ ಶರಣರು ಹಚ್ಚಿದ್ದ ಕಾರುಣ್ಯದ ಬೆಳಕು ಜಗತ್ತಿನ ಜೀವರಾಶಿಗಳಲ್ಲಿ ಸಹೋದರತೆ, ಸಮಾನತೆ ಬೆಳೆಸಿ ಸಕಲ ಚರಾಚರ ಜೀವಿಜಂತುಗಳಿಗೆ ಒಳಿತನ್ನು ಉಂಟು ಮಾಡಲಿ ಎಂದು ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮಿ ತಿಳಿಸಿದರು. ಪಟ್ಟಣದ ಹೊಸಪೇಟೆ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮದ ಆಚರಣೆ ಮತ್ತು ದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ದುಡಿಯುವ ಶಕ್ತಿ ದೊರೆಯಲಿದೆ, ಶರಣರ ಧಾರ್ಮಿಕ ಗ್ರಂಥಗಳನ್ನು ಓದಬೇಕು, ದೇವರ ಪೂಜೆಯ ಜೊತೆಗೆ ಪ್ರಾಮಾಣಿಕ ದುಡಿಮೆಯಲ್ಲಿ ತೊಡಗಿಸಿಕೊಂಡು ದುಡಿದುದರಲ್ಲಿ ಸ್ವಲ್ಪಭಾಗವನ್ನು ಸಮಾಜದ ಸೇವೆಗೆ ಕೊಡಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.

ಮುಖಂಡರಾದ ರುದ್ರೇಶ್‌, ಮಂಜುನಾಥ, ನಾಗರಾಜು, ಬಸವರಾಜು, ವೀರೇಗೌಡನ ದೊಡ್ಡಿಯ ಚಂದ್ರು ಗ್ರಾಮದ 13 ಕೈವಾಡಗಳ ಮುಖಂಡರು, ಮಾತೆಯರು ಇದ್ದರು. ಮಹಿಳೆಯರು ದೀಪ ಹಚ್ಚಿದರು, ಸಿಹಿ ವಿತರಿಸಲಾಯಿತು. ದೇಗುಲಕ್ಕೆ ದೀಪಾಲಂಕಾರ ಮಾಡಲಾಗಿತ್ತು, ಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.