ADVERTISEMENT

‘ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ’

​ಪ್ರಜಾವಾಣಿ ವಾರ್ತೆ
Published 31 ಮೇ 2016, 9:49 IST
Last Updated 31 ಮೇ 2016, 9:49 IST

ಮಾಗಡಿ:  ಅರೆಬರೆ ಆಂಗ್ಲಭಾಷೆ ಕಲಿಸುವ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ದುಬಾರಿ ವಂತಿಗೆ ತೆತ್ತು ಸೇರಿಸುವ ಬದಲು, ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸಲು  ಪೋಷಕರು  ಮುಂದಾಗಬೇಕು ಎಂದು  ಶಾಲಾಭಿವೃದ್ದಿ ಸಮಿತಿ ಜಿಲ್ಲಾ ಸಂಚಾಲಕ  ವರದೋನ ಹಳ್ಳಿ ಲಕ್ಷ್ಮೀಪತಿ ರಾಜು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕರಲಮಂಗಲದ ಸರ್ಕಾರಿ ಶಾಲೆಯ ಆವರಣದಲ್ಲಿ  ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಕರ್ನಾಟಕ ಸಮೀಕ್ಷೆ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲಾ  ಅಂಗನವಾಡಿ ಕೇಂದ್ರಗಳಲ್ಲೂ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸರ್ಕಾರವೇ ಆರಂಭಿಸಬೇಕು. ಜೂನ್‌ ತಿಂಗಳಲ್ಲಿಯೆ ವಿದ್ಯಾರ್ಥಿಗಳಿಗೆ ಬಸ್‌್ ಪಾಸ್‌ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಮತ್ತು ಆಂಗ್ಲಮಾಧ್ಯಮದ ತರಗತಿ ಆರಂಭಿಸಬೇಕಿದೆ ಎಂದರು.

ಕರಲ ಮಂಗಲ ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ರಾಜಮ್ಮ, ಮಮತಾ, ನರಸಿಂಹಮೂರ್ತಿ, ವಿಶಾಲಮ್ಮ, ಲಕ್ಷ್ಮೀದೇವಿ, ಜಯಮ್ಮ, ಚಿತ್ತಯ್ಯ, ಬಸವ ರಾಜು. ಗೋವಿಂದರಾಜು, ಹರಳಪ್ಪ, ಶಂಕರ ಮೂರ್ತಿ, ರಾಮರಾವ್‌, ಮುಖ್ಯಶಿಕ್ಷಕ ಎ.ಬಿ.ಚಂದ್ರಧರ,  ಸಹ ಶಿಕ್ಷಕರಾದ ಮಂಜುಳಾ, ಎಸ್‌.ಆರ್‌. ಗಂಗಾಧರ್‌.ಸಿ.ವೈರಮುಡಿ, ನರಸಯ್ಯ. ಸಿ, ಇಂದ್ರಾಣಿ ಮಾತನಾಡಿದರು. ಟೌನ್‌ ಕ್ಲಸ್ಟರ್ನ ತಿರುಮಲೆ ಗೋವಿಂದರಾಜು, ಸವಿತಾ, ಅಶೋಕ್‌ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.