ADVERTISEMENT

ಜಿಎಸ್‌ಟಿ: ಉಪ್ಪಿನಕಾಯಿ ಉದ್ಯಮ ಹೊರಗಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮೇ 2017, 4:38 IST
Last Updated 29 ಮೇ 2017, 4:38 IST
ಶಿರಾಳಕೊಪ್ಪ: ಜೆಎಸ್‌ಟಿಯಿಂದ ಉಪ್ಪಿನಕಾಯಿ ತಯಾರಿಕೆ ಉದ್ಯಮವನ್ನು ಹೊರಗಿಡಬೇಕು ಎಂದು ರಾಜ್ಯ ಉಪ್ಪಿನಕಾಯಿ ತಯಾರಕರ ಸಂಘದ ಮಾಜಿ ಅಧ್ಯಕ್ಷ ಎಮ್.ಎನ್.ರಾಮಚಂದ್ರ ಶ್ರೇಷ್ಠಿ ಒತ್ತಾಯಿಸಿದ್ದಾರೆ.
 
ಉಪ್ಪಿನಕಾಯಿ ಉದ್ಯಮದಿಂದ ಗ್ರಾಮೀಣ ಭಾಗದ ಸಾವಿರಾರು ಮಹಿಳೆಯರು ಜೀವನ ಸಾಗಿಸುತ್ತಿ ದ್ದಾರೆ. ರೈತರು ಬೆಳೆದ ಮಾವಿಗೆ ಗ್ರಾಮೀಣ ಪ್ರದೇಶದಲ್ಲಿಯೇ ಉತ್ತಮ ದರ ಸಿಗುತ್ತಿದೆ.
 
ಅಪ್ಪಟ ಗ್ರಾಮೀಣ ಕೈಗಾರಿಕೆಗೆ ಇದುವರೆಗೂ ರಾಜ್ಯ ಸರ್ಕಾರ ತೆರಿಗೆಯಿಂದ ಹೊರಗಿಟ್ಟು ಉದ್ಯಮದ ಬೆಳವಣಿಗೆಗೆ ಸಹಕಾರ ನೀಡಿದೆ. ಈಗ ಕೇಂದ್ರ ಸರ್ಕಾರ ಶೇ 18 ರಷ್ಟು ತೆರಿಗೆ ವಿಧಿಸುವ ಮೂಲಕ ಉದ್ಯಮದ ಬೇರುಗಳನ್ನೇ ಅಲುಗಾಡಿಸಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ರಾಜ್ಯದ ಉಪ್ಪಿನ ಕಾಯಿ ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಸರಕು ಸಾಗಣೆ ತೆರಿಗೆಯಿಂದ ಕೇಂದ್ರ ಸರ್ಕಾರ ತಮ್ಮನ್ನು ಹೊರಗಿಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.