ADVERTISEMENT

ಜಿಲ್ಲೆಯಲ್ಲಿ ಸಂಭ್ರಮದ ಹೋಳಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:46 IST
Last Updated 14 ಮಾರ್ಚ್ 2017, 5:46 IST
ಶಿವಮೊಗ್ಗದ ರಾಜೇಂದ್ರನಗರದಲ್ಲಿ ಸೋಮವಾರ ಮಕ್ಕಳು ಹೋಳಿ ಆಡಿ ಸಂಭ್ರಮಿಸಿದರು.
ಶಿವಮೊಗ್ಗದ ರಾಜೇಂದ್ರನಗರದಲ್ಲಿ ಸೋಮವಾರ ಮಕ್ಕಳು ಹೋಳಿ ಆಡಿ ಸಂಭ್ರಮಿಸಿದರು.   

ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮ ವಾರ ಸಂಭ್ರಮದ ಹೋಳಿ ಆಚರಣೆ ನಡೆಯಿತು. ಯುವಕ- ಯುವತಿಯರು, ನಾಗರಿಕರು, ಹಿರಿಯರು ಹಾಗೂ ಸಣ್ಣ ಮಕ್ಕಳು ನಗರದೆಲ್ಲೆಡೆ ಪರಸ್ಪರ ಬಣ್ಣ ಹಚ್ಚುವ ಮೂಲಕ ಸಡಗರದಿಂದ ಹೋಳಿ ಹಬ್ಬ ಆಚರಿಸಿದರು.

ಸ್ನೇಹಿತರ ಮನೆಗಳಿಗೆ ಹುಡುಕಿ ಕೊಂಡು ತೆರಳಿದ ಕೆಲವರು ಪರಸ್ಪರ ಬಣ್ಣ ಹಚ್ಚಿಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಗಾಂಧಿಬಜಾರ್, ದುರ್ಗಿಗುಡಿ, ವಿನೋಬನಗರ, ಗಾಂಧಿನಗರ, ಸೀಗೆಹಟ್ಟಿ, ಕೆ.ಆರ್. ಪುರಂ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಯುವಕರು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಕೆಲ ಏರಿಯಾಗಳಲ್ಲಿ ಹಾಡು, ನೃತ್ಯ, ಪಿಚಕಾರಿ ಹಾಗೂ ಮಡಿಕೆ ಒಡೆಯುವ ದೃಶ್ಯವೂ ಮುಗಿಲುಮುಟ್ಟಿತ್ತು.

ಜಿಲ್ಲೆಯ ಬಹುತೇಕ ಕಡೆ ಭಾನುವಾರ ಹೋಳಿ ಆಚರಿಸಲಾಗಿತ್ತು. ನಗರದಲ್ಲಿ ಪ್ರತಿವರ್ಷವೂ ದುರ್ಗಿಗುಡಿಯ ದುರ್ಗಮ್ಮ ದೇವಿಯ ರಥೋತ್ಸವದ ನಂತರದ ದಿನ ಹೋಳಿ ಆಚರಿಸುವುದು ವಾಡಿಕೆಯಾದ್ದರಿಂದ ನಗರದ ಹೆಚ್ಚಿನ ಭಾಗದಲ್ಲಿ ಸೋಮವಾರ ಆಚರಿಸಲಾಯಿತು. ಗಾಂಧಿಬಜಾರ್, ರವಿವರ್ಮ ಬೀದಿ, ಕುಂಬಾರ ಬೀದಿ ಸೇರಿದಂತೆ ಹಲವೆಡೆ ಮನ್ಮಥ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.