ADVERTISEMENT

ಟಿಪ್ಪು ಟೀಕೆ ಮಾಡುವವರು ಇತಿಹಾಸ ಓದಲಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:06 IST
Last Updated 11 ನವೆಂಬರ್ 2017, 9:06 IST

ಶಿಕಾರಿಪುರ: ದೇಶದ ರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟಿದ ಮಹಾನ್‌ ನಾಯಕ ಟಿಪ್ಪು ಸುಲ್ತಾನ್ ವಿರುದ್ಧ ಟೀಕೆ ಮಾಡುವವರು ಮೊದಲು ಇತಿಹಾಸವನ್ನು ಸರಿಯಾಗಿ ಓದಬೇಕು ಎಂದು ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಯೂಸೂಫ್‌ ಅಲಿ ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಹಾಗೂ ಮುಸ್ಲಿಂ ಸಮಾಜದ ಆಶ್ರಯದಲ್ಲಿ ನಡೆದ ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್‌.ಪಿ. ನರಸಿಂಗನಾಯ್ಕ ಮಾತನಾಡಿ,  ಸ್ಥಳೀಯ ಶಾಸಕ ಬಿ.ವೈ. ರಾಘವೇಂದ್ರ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಮುಸ್ಲಿಮರಿಗೆ ಮಾಡಿದ ಅವಮಾನ ಎಂದರ. ಟಿಪ್ಪು ಜೀವನ ಕುರಿತು  ಶಿಕ್ಷಕ ಕರಿಬಸಪ್ಪ ಮಾತನಾಡಿದರು.

ADVERTISEMENT

ತಹಶೀಲ್ದಾರ್‌ ಬಿ. ಶಿವಕುಮಾರ್‌, ಶಿರಾಳಕೊಪ್ಪ ಅಂಜುಮಾನ್‌ ಇಸ್ಲಾಂ ಸಮಿತಿ ಅಧ್ಯಕ್ಷ ಮಹಮ್ಮದ್‌ ಹನೀಫ್‌, ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ರಶೀದಾ ಬೇಗಂ, ಮುಖಂಡರಾದ ನಗರದ ಮಹದೇವಪ್ಪ, ಗೋಣಿ ಮಾಲತೇಶ್‌, ಎಚ್‌.ಟಿ. ಬಳಿಗಾರ್, ಈಸೂರು ಜಯಣ್ಣ, ಫಯಾಜ್‌ ಅಹ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.