ADVERTISEMENT

ಶೃಂಗೇರಿ ಉಭಯಶ್ರೀಗಳಿಗೆ ಪೂರ್ಣಕುಂಭ ಸ್ವಾಗತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 8:20 IST
Last Updated 10 ಫೆಬ್ರುವರಿ 2018, 8:20 IST

ಶಿವಮೊಗ್ಗ: ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಫೆ.10ರಂದು ಹಮ್ಮಿಕೊಂಡಿರುವ ಶತಚಂಡಿಕಾ ಮಹಾಯಾಗಕ್ಕೆ ಸಾನ್ನಿಧ್ಯ ವಹಿಸಲಿರುವ ಶೃಂಗೇರಿ ಶಾರದ ಪೀಠದ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಭಾರತೀ ಸ್ವಾಮೀಜಿಯನ್ನು ಶುಕ್ರವಾರ ವಿನೋಬನಗರದ ಡಿವಿಎಸ್ ಕಾಲೇಜಿನಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಮೆರವಣಿಗೆಯು ವಿನೋಬನಗರ ಡಿವಿಎಸ್ ಕಾಲೇಜಿನಿಂದ ಪೊಲೀಸ್ ಚೌಕಿ, 60 ಅಡಿ ರಸ್ತೆ ಮುಖಾಂತರ ಶುಭಮಂಗಳ ಕಲ್ಯಾಣ ಮಂದಿರ ತಲುಪಿತು.  ಮೆರವಣಿಗೆಯಲ್ಲಿ ಚಂಡೆ, ತಾಳಮದ್ದಳೆ, ವಾದ್ಯಗಳೊಂದಿಗೆ  ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಆಯನೂರು ಮಂಜುನಾಥ್, ದತ್ತಾತ್ರಿ, ಚನ್ನಬಸಪ್ಪ, ಮದುಸೂಧನ್, ಸಹನಾ ಚೇತನ್  ಪಾಲ್ಗೊಂಡಿದ್ದರು

ನಂತರ  ಮಾತನಾಡಿದ ಶೃಂಗೇರಿ ಶಾರದ ಪೀಠದ ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ, ‘ಧರ್ಮದಿಂದ ಲೋಕಕ್ಕೆ ಶಾಂತಿ ಲಭಿಸುತ್ತದೆ. ಧರ್ಮದ ಮಾರ್ಗದಲ್ಲಿ ನಡೆಯುವ ಮೂಲಕ ಜ್ಞಾನ, ಭಕ್ತಿಯನ್ನು ಸಂಪಾದಿಸಬೇಕು’ ಎಂದರು. ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿದರು.

ADVERTISEMENT

ಲೋಕ ಕಲ್ಯಾಣಕ್ಕಾಗಿ, ನಗರದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ವಿನೋಬನಗರ ಶನೀಶ್ವರ ದೇವಾಲಯ ಸಮಿತಿ ಟ್ರಸ್ಟ್ ಫೆ. 6ರಿಂದ ಶತಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. 6 ರಿಂದ 9ರವರೆಗೆ ಗುರು ಪ್ರಾರ್ಥನೆ, ಗುರುಪೂಜೆ, ಪುಣ್ಯಾಹ, ನಾಂದಿ, ಸಂಜೆ ನವಾಕ್ಷರೀ ಮಂತ್ರ ಜಪ, ಪೂಜೆ, ಅಷ್ಟವದನಾ ಸೇವೆ, ನವಾವರಣ ಪೂಜೆ, ಸಪ್ತಶತಿಪಾರಾಯಣ, ನವಾಕ್ಷರೀ ಮಂತ್ರ ಜಪ, ಪೂಜೆ ನೆರವೇರಿತ್ತು.ಮೆರವಣಿಗೆಯಲ್ಲಿ ಚಂಡೆ, ತಾಳಮದ್ದಳೆ, ವಾದ್ಯಗಳೊಂದಿಗೆ  ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಆಯನೂರು ಮಂಜುನಾಥ್, ದತ್ತಾತ್ರಿ, ಚನ್ನಬಸಪ್ಪ, ಮದುಸೂಧನ್, ಸಹನಾ ಚೇತನ್  ಪಾಲ್ಗೊಂಡಿದ್ದರು

ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ, ನಗರದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ವಿನೋಬನಗರ ಶನೀಶ್ವರ ದೇವಾಲಯ ಸಮಿತಿ ಟ್ರಸ್ಟ್ ಫೆ. 6ರಿಂದ ಶತಚಂಡಿಕಾ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. 6 ರಿಂದ 9ರವರೆಗೆ ಗುರು ಪ್ರಾರ್ಥನೆ, ಗುರುಪೂಜೆ, ಪುಣ್ಯಾಹ, ನಾಂದಿ, ಸಂಜೆ ನವಾಕ್ಷರೀ ಮಂತ್ರ ಜಪ, ಪೂಜೆ, ಅಷ್ಟವದನಾ ಸೇವೆ, ನವಾವರಣ ಪೂಜೆ, ಸಪ್ತಶತಿಪಾರಾಯಣ, ನವಾಕ್ಷರೀ ಮಂತ್ರ ಜಪ, ಪೂಜೆ ನೆರವೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.