ADVERTISEMENT

ಅಪಾಯಕ್ಕೆ ಬಾಯ್ತೆರೆದು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 9:21 IST
Last Updated 22 ಆಗಸ್ಟ್ 2017, 9:21 IST

ಬಾಯ್ತೆರೆದ ಮ್ಯಾನ್‌ಹೋಲ್‌ ತುಮಕೂರಿನ ಎಸ್‌ಐಟಿ ಬಳಿಯ ಬಿಎಚ್‌ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಮುಚ್ಚಳ ಹಾಳಾಗಿದ್ದು ಅಪಾಯಕ್ಕೆ ಬಾಯಿ ತೆರೆದಿದೆ. ಅಪರಿಚಿತರು ಈ ಮ್ಯಾನ್‌ಹೋಲ್‌ಗೆ ಗಿಡಗಳನ್ನು ಸಿಕ್ಕಿಸಿದ್ದಾರೆ. ಇದರಿಂದ ಇದು ಅಪಾಯದ ಸ್ಥಳ ಎಂದು ವಾಹನ ಸಂಚಾರರಿಗೆ ಅರಿವಾಗುತ್ತದೆ.

ಬೆಂಗಳೂರು– ಶಿವಮೊಗ್ಗ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಅಪಾಯದ ಸ್ಥಳ ಇದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ದುರಸ್ತಿಗೆ ತುರ್ತಾಗಿ ಕ್ರಮ ಕೈಗೊಂಡಿಲ್ಲ. ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಅಲ್ಲದೆ ನಗರದಲ್ಲಿ ನಡು ರಸ್ತೆಯಲ್ಲಿಯೇ ಮ್ಯಾನ್‌ಹೋಲ್‌ಗಳಿಗೆ ಆಗಾಗ್ಗೆ ಇವುಗಳ ಸ್ಥಿತಿ, ದುಸ್ಥಿತಿ ಬಗ್ಗೆ ನಿಗಾವಹಿಸಬೇಕು. ಮಹೇಶ್, ಕೃಷ್ಣನಗರ

ಬೀದಿ ದೀಪ ಅಳವಡಿಸಿ
ತುಮಕೂರಿನಿಂದ 10 ಕಿಲೋ ಮೀಟರ್ ದೂರದಲ್ಲಿರುವ ಪೆರುಮನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡು ಗ್ರಾಮ ಇದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೌಲಭ್ಯಗಳನ್ನು ಕಲ್ಪಿಸಿಲ್ಲ. ಗ್ರಾಮದಲ್ಲಿ ಬಸ್ ನಿಲುಗಡೆಗೆ ನಾಮಫಲಕವೂ ಇಲ್ಲ. ಬೀದಿ ದೀಪಗಳೂ ಇಲ್ಲ. ಶ್ರೀಧರ್, ಗ್ರಾಮಸ್ಥ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.