ADVERTISEMENT

ಕುರಂಗ ರಾಜನ ಇತಿಹಾಸ ತಿಳಿಸುವ ಪ್ರಯತ್ನ

ಕುರಂಗರಾಜ ಐತಿಹಾಸಿಕ ನಾಟಕ ಪ್ರದರ್ಶನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:47 IST
Last Updated 2 ಫೆಬ್ರುವರಿ 2017, 6:47 IST
ಕುರಂಗ ರಾಜನ ಇತಿಹಾಸ ತಿಳಿಸುವ ಪ್ರಯತ್ನ
ಕುರಂಗ ರಾಜನ ಇತಿಹಾಸ ತಿಳಿಸುವ ಪ್ರಯತ್ನ   
ತುಮಕೂರು: ಸುವರ್ಣಗಿರಿಯನ್ನು ಆಳುತ್ತಿದ್ದ ಕುರಂಗರಾಯನ ಕುರಿತ  ಐತಿಹಾಸಿಕ ಕಾದಂಬರಿಗೆ ರಂಗಕಲೆಯ ಸ್ಪರ್ಶ ನೀಡಿರುವ ಡಾ. ನಾಗರಾಜು ಅವರು ಇಂದಿನ ಯುವ ಸಮುದಾಯಕ್ಕೆ ಕುರಂಗರಾಜನ ಇತಿಹಾಸ ತಿಳಿಸುವ ಕೆಲಸ ಮಾಡಿದ್ದಾರೆ ಎಂದು ನಿವೃತ್ತ ಅಧಿಕಾರಿ ಕೆ.ದೊರೈರಾಜು ಹೇಳಿದರು.
 
ಡಾ.ಗುಬ್ಬಿ ವೀರಣ್ಣ  ಕಲಾಕ್ಷೇತ್ರದಲ್ಲಿ ನೆಲಮಂಗಲದ ರಂಗ ಶಿಕ್ಷಣ ಕೇಂದ್ರ , ನಗರದ ಶಂಶಾಕ ಪ್ರಕಾಶನ, ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮ್ಭಿಣಾಭಿವೃದ್ದಿ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡ ಪ್ರಾಧ್ಯಾಪಕ ಡಾ.ಓ. ನಾಗರಾಜು ಅವರ ಕುರಂಗರಾಜ ವೈಭವ ಸಂಶೋಧನಾ ಕೃತಿ ಆಧಾರಿತ  ‘ಕುರಂಗರಾಜ ಐತಿಹಾಸಿಕ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಎಲ್ಲರಿಗೂ ಚಿರಪರಿಚಿತವಾಗಿದ್ದು ಗಿಡ ಮೂಲಿಕೆಗಳಿಗೆ ಹೆಸರುವಾಸಿ ಯಾಗಿದೆ. ಹಲವಾರು ರೋಗ ರುಜಿನಗಳಿಗೆ ಔಷಧಿತಾಣವಾಗಿರುವ ಈ ಸಿದ್ದರಬೆಟ್ಟವು ಕುರಂಗರಾಜ ಕಟ್ಟಿದ ಕೋಟೆ ಎನ್ನುವುದು ಕೆಲವು ಮಂದಿಗೆ ಮಾತ್ರ ತಿಳಿದಿದೆ ಎಂದು ಹೇಳಿದರು.
 
ಇಂದಿಗೂ ಕುರಂಕೋಟೆ ಎಂದೇ ಹೆಸರುವಾಸಿಯಾಗಿದೆ.  ಈ ಕುರಿತು ಸಾಕಷ್ಟು ಅಧ್ಯಯನ ನಡೆಸುವುದರ ಜೊತೆಗೆ ಇಂದಿನ ಯುವಜನತೆ ಕುರಂ ಕೋಟೆಯ ಇತಿಹಾಸಲು ರಂಗಪ್ರದರ್ಶನ ಆಯೋಜನೆ ಒಂದು ವಿಶಿಷ್ಟ ಪ್ರಯತ್ನ ಎಂದರು.
 
ಇತಿಹಾಸವು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಾಗಿದ್ದು,ಸಮಾಜವನ್ನು ಒಡೆಯುವ ಕೆಲಸವನಲ್ಲ. ಉತ್ತಮ ಸಮಾಜದ ನಿರ್ಮಾಣಕ್ಕೆ ತಳಸಮುದಾಯಗಳ ಶ್ರಮವೂ ಕೂಡ ಹೆಚ್ಚಿದೆ ಎನ್ನುವುದನ್ನು ಇತಿಹಾಸ ತಿಳಿಸುತ್ತದೆ ಎಂದು ತಿಳಿಸಿದರು.
 
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್, 45 ವರ್ಷಗಳಿಂದ ರಂಗ ಭೂಮಿ ಚಟುವಟಿಕೆ ಯಲ್ಲಿ ತೊಡಗಿ ಕೊಂಡಿದ್ದು, ಪರಸಂಗದ ಗೆಂಡೆತಿಮ್ಮ ಸಿನಿಮಾದಿಂದ ಬೆಳ್ಳಿ ತೆರೆ ಪ್ರವೇಶಿಸಿ 500ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟಿಸಿದ್ದೇನೆ. ಆದರೂ ಕಲಾವಿದನಾಗಿ ನೆಲೆ ನಿಲ್ಲಲು ಇಂದಿಗೂ ರಂಗಭೂಮಿಯೇ ಸಹಕಾರಿ ಎಂದರು.
 
ಡಾ. ನಾಗರಾಜು ಅವರ ಕುರಂಗ ರಾಜ ನಾಟಕವು ಉತ್ತಮ ಸಂದೇಶ ಸಾರುವಂತಹುದು. ಹೆಚ್ಚು ಪ್ರದರ್ಶನ ಕಾಣಬೇಕು ಎಂದರು.
 
ರಂಗಶಿಕ್ಷಣ ಕೇಂದ್ರದ ಅಧ್ಯಕ್ಷ ಸಿದ್ದರಾಜು, ತಳ ಸಮುದಾಯದ ರಾಜಕೀಯ ಇತಿಹಾಸ ಬಿಂಬಿಸುವ ಕುರಂಗರಾಜ ವೈಭವ ಸಂಶೋಧನಾ ಕೃತಿಯನ್ನು ರಂಗಭೂಮಿಗೆ ಅಳವಡಿಸಿಕೊಳ್ಳಲು ಹಲವು ದಿನಗಳ ಕಾಲ ನಿರಂತರ ಚರ್ಚೆ ನಡೆಸಲಾಗಿತ್ತು.  ಕೃತಿಗೆ ಲೋಪವಾಗದಂತೆ ರಂಗದ ಮೇಲೆ ತರಲಾಗಿದೆ ಎಂದು ಹೇಳಿದರು.
 
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ವಡ್ಡಗೆರೆ ನಾಗರಾಜಯ್ಯ, ಆರ್. ಲೋಕೇಶ್, ವೆಂಕಟೇಶ್, ಬಸವರಾಜಪ್ಪ ಆಪ್ಪಿನಕಟ್ಟೆ, ಕುರಂಗ ರಾಜ ವೈಭವ ಕೃತಿಯ ಬರಹಗಾರ ಡಾ.ಓ.ನಾಗರಾಜು,  ವೆಂಕಟೇಶ್ ಜೋಷಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.