ADVERTISEMENT

ಕೆರೆ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ: ಆರೋಪ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:28 IST
Last Updated 18 ನವೆಂಬರ್ 2017, 9:28 IST

ಕುಣಿಗಲ್: ತಾಲ್ಲೂಕಿನ ಅಮೃತೂರು ಹೋಬಳಿಯ ಕೆ.ಹೊನ್ನಮಾಚನಹಳ್ಳಿ ಕೆರೆ ನೀರು ಪೋಲಾಗುತ್ತಿದ್ದರೂ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಿಂಗಾರಿನ ಮಳೆಯಿಂದ ಕೆರೆತುಂಬಿ ಕೋಡಿ ಹರಿದಿತ್ತು. ಕೆರೆ ವ್ಯಾಪ್ತಿಯ ಬ್ಯಾಡಗೆರೆ ಸೆಣಬಘಟ್ಟ ಮತ್ತು ಹೊನ್ನಮಾಚನಹಳ್ಳಿ ಅಚ್ಚುಕಟ್ಟು ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ರಾಗಿ ಬೆಳೆಗೆ ಒಂದು ಹದ ನೀರಿನ ಅವಶ್ಯಕತೆಯ ಕಾರಣ ಕೆಲ ರೈತರು ತಮ್ಮ ಜಮೀನಿಗೆ ನೀರು ಬಿಟ್ಟುಕೊಂಡ ನಿಲ್ಲಿಸಿಲ್ಲ. ಆದ ಕಾರಣ ನೀರು ಪೋಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥ ಮರಿಸ್ವಾಮಿಗೌಡ.

‘ಈ ಬಗ್ಗೆ ಹೇಮಾವತಿ ನಾಲಾ ವಲಯದ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ತೆಗೆದುಕೊಂಡಿಲ್ಲ. ನೀರನ್ನು ಮುಂದಿನ ಬೇಸಿಗೆ ಬೆಳೆಗೆ ಶೇಖರಿಸಲಾಗಿತ್ತು.ಅಧಿಕಾರಿಗಳು ಮೂರು ಗ್ರಾಮದ ರೈತರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಂಡು ಹಂಚಿಕೆ ಮಾಡದ ಕಾರಣ ವ್ಯರ್ಥವಾಗಿ ಹರಿಯುತ್ತಿದೆ’ ಎಂದು ಗ್ರಾಮಸ್ಥರಾದ ರಾಮೇಗೌಡ, ಶ್ರೀನಿವಾಸ್ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.