ADVERTISEMENT

ಕೆಸರಿನ ಹೊಂಡವಾದ ರಸ್ತೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:12 IST
Last Updated 17 ಅಕ್ಟೋಬರ್ 2017, 9:12 IST

ಕುಣಿಗಲ್: ‘ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣದ ಕಾಮಗಾರಿ ಮತ್ತು ಮಳೆಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿದ್ದು, ನಾಗರಿಕರು ಓಡಾಡಲು ಪರದಾಡುತ್ತಿದ್ದರೂ ಅಧಿಕಾರಿಗಳು ಜಾಣ ಕಿವುಡು, ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

22ನೇ ವಾರ್ಡ್‌ನಲ್ಲಿ ಒಳ ಚರಂಡಿ ಕಾಮಗಾರಿ ಮಾಡಿದ ಗುತ್ತಿಗೆದಾರರು ರಸ್ತೆಯನ್ನು ಸಮತಟ್ಟು ಮಾಡದ ಕಾರಣ ರಸ್ತೆಗಳು ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳಲ್ಲಿ ಓಡಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗೆ, ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಐ.ಜಿ.ರಮೇಶ್ ತಿಳಿಸಿದ್ದಾರೆ.

23ನೇ ವಾರ್ಡ್‌, 12ನೇ ವಾರ್ಡ್‌ನಲ್ಲಿ ಪತಂಜಲಿ ನಗರದ ರಸ್ತೆಗಳು, ಕೋಟೆ ಪ್ರದೇಶದ ಸಂತ ರೀತಮ್ಮ ಶಾಲೆ ರಸ್ತೆ, 18ನೇ ವಾರ್ಡ್‌ನ ಬಿ.ಟಿ.ರಂಗಸ್ವಾಮಿ ಮನೆ ರಸ್ತೆ, ಸ್ಟೆಲ್ಲಾ ಮೇರೀಸ್ ಶಾಲೆ ಹಿಂಭಾಗದ ರಸ್ತೆ, ಮೊರಾರ್ಜಿ ವಸತಿ ಶಾಲೆ ರಸ್ತೆಗಳು ಇದೇ ಸ್ಥಿತಿಯಲ್ಲಿವೆ. ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜಣ್ಣ, ರಂಗಸ್ವಾಮಿ. ಕೆ.ಟಿ.ರಮೇಶ್ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.