ADVERTISEMENT

ಕ್ರೈಸ್ತ ಧರ್ಮದ ಸೇವೆ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:06 IST
Last Updated 20 ಮಾರ್ಚ್ 2017, 5:06 IST

ಚಿಕ್ಕನಾಯಕನಹಳ್ಳಿ:  ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಹಾಗೂ  ಜೀವನಮಟ್ಟ ಸುಧಾರಣೆಗೆ ಕೆಲಸ ಮಾಡುತ್ತಿರುವ ಕ್ರೈಸ್ತ ಧರ್ಮದ ಸೇವೆ ಶ್ಲಾಘನೀಯ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಹೇಳಿದರು.

ಪಟ್ಟಣದ ಕೋಡುಗಲ್ಲು ರಸ್ತೆಯಲ್ಲಿರುವ ಬಿಲೀವರ್ಸ್ ಚರ್ಚ್‌ನಲ್ಲಿ ಕೇರಳ ರಾಜ್ಯಕ್ಕೆ ನೂತನವಾಗಿ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ರೆವೆರೆಂಡ್ ಜೇಸು ಪ್ರಸಾದ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಲಿವರ್ಸ್ ಚರ್ಚ್ ಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುತ್ತಿದೆ. ಕುಡಿಯುವ ನೀರಿಗಾಗಿ ಚರ್ಚ್ ವತಿಯಿಂದ ಕೊಳವೆಬಾವಿ ಕೊರೆಸಲಾಗಿದೆ. ಬಡವರಿಗೆ ಕುರಿ ಸಾಕಾಣಿಕೆ, ಟೈಲರಿಂಗ್ ತರಬೇತಿ ನೀಡಲಾಗಿದೆ ಎಂದರು.

ಫಾದರ್ ಆನಂದ್‌ಕುಮಾರ್ ಮಾತನಾಡಿ,  ಕನ್ನಡಿಗರೊಬ್ಬರು ಕೇರಳ ರಾಜ್ಯಕ್ಕೆ ಮೊಟ್ಟಮೊದಲ ಬಿಷಪ್ ಆಗಿ ನೇಮಕವಾಗಿರುವುದು ಹೆಮ್ಮೆ ತಂದಿದೆ. ಚರ್ಚ್‌ನ ಉನ್ನತ ಹುದ್ದೆಗಳಿಗೆ ಏರಲು ಕನ್ನಡಿಗರಿಗೂ ಅವಕಾಶವಿದೆ ಎಂದರು. ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಜೇಸುಪ್ರಸಾದ್ ಅವರನ್ನು ಚರ್ಚಿನಲ್ಲಿ ಸನ್ಮಾನಿಸಲಾಯಿತು.

ಮುಖಂಡ ಬಿ.ಲಕ್ಕಪ್ಪ, ಕರ್ನಾಟಕ ಯೂನೈಟೆಡ್ ಕ್ರಿಶ್ಚಿಯನ್ ಫಾರಂನ ಪೆರಿಕೊ ಪ್ರಭು, ತುಮಕೂರು ಕ್ಯಾಥೋಲಿಕ್ ಚರ್ಚ್‌ನ ಫಾದರ್ ಪ್ರದೀಪ್ ಕುಮಾರ್, ಕರ್ನಾಟಕ ದಲಿತ ಕ್ಯಾಥೋಲಿಕ್ ಕ್ರೈಸ್ತರ ರಕ್ಷಣಾ ವೇದಿಕೆಯ ಅಧ್ಯಕ್ಷ ಮೈಕಲ್ ರಾಜು, ಫಾದರ್ ಲಕ್ಷ್ಮಣ್,  ಕಾರ್ಯದರ್ಶಿ ವಡಿವೇಲು, ಖಜಾಂಚಿ ರಾಮಕೃಷ್ಣಚಾರ್, ಮಾರಯ್ಯ, ವಜ್ರಮ್ಮ, ಬಾಬು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.