ADVERTISEMENT

ಜೀವಬಲಿಗೆ ಕಾದಿರುವ ವಿದ್ಯುತ್‌ ತಂತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:14 IST
Last Updated 13 ಸೆಪ್ಟೆಂಬರ್ 2017, 9:14 IST
ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿ ಮತ್ತು ತಿಪ್ಪಾಪುರ ಗ್ರಾಮಗಳ ಮಧ್ಯೆ ಇರುವ ಸಿ.ಟಿ ನರಸಿಂಹಪ್ಪನ ಜಮೀನಿನಲ್ಲಿ ನೆಲಕ್ಕೆ ನೇತಾಡುತ್ತಿರುವ ವಿದ್ಯುತ್‌ ತಂತಿ
ಕೊಡಿಗೇನಹಳ್ಳಿ ಹೋಬಳಿ ಅಡವಿನಾಗೇನಹಳ್ಳಿ ಮತ್ತು ತಿಪ್ಪಾಪುರ ಗ್ರಾಮಗಳ ಮಧ್ಯೆ ಇರುವ ಸಿ.ಟಿ ನರಸಿಂಹಪ್ಪನ ಜಮೀನಿನಲ್ಲಿ ನೆಲಕ್ಕೆ ನೇತಾಡುತ್ತಿರುವ ವಿದ್ಯುತ್‌ ತಂತಿ   

ಕೊಡಿಗೇನಹಳ್ಳಿ: ರೈತನ ಜಮೀನೊಂದರಲ್ಲಿ ವಿದ್ಯುತ್‌ ತಂತಿ ಹಾದು ಹೋಗಿದ್ದು ಅದು ಈಗ ಜೋತು ಬಿದ್ದು ನೆಲಕ್ಕೆ ತಾಗುತ್ತಿದ್ದು ಜನರು ಕಂಗಾಲಾಗಿದ್ದಾರೆ. ಹೋಬಳಿಯ ಅಡವಿನಾಗೇನಹಳ್ಳಿ ಮತ್ತು ತಿಪ್ಪಾಪುರ ಗ್ರಾಮಗಳ ನಡುವೆ ಇರುವ ಸಿ.ಟಿ.ನರಸಿಂಹಯ್ಯನ ಜಮೀನೊಂದರಲ್ಲಿ ಕಳೆದ ಒಂದು ವರ್ಷದಿಂದ ವಿದ್ಯುತ್‌ ತಂತಿ ನೇತಾಡುತ್ತಿದೆ\

‘ಈ ಕುರಿತು ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸರಿಪಡಿಸದೆ ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಭಾಗಕ್ಕೆ ಪ್ರತಿನಿತ್ಯ ಸುತ್ತನುತ್ತಲಿನ ಗ್ರಾಮಗಳ ಕುರಿಗಾಹಿಗಳು, ಜಾನುವಾರುಗಳು ಓಡಾಡುತ್ತಾರೆ. ಇಲ್ಲಿ ಬಂದ ತಕ್ಷಣ ಮೈಯಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮಸ್ಥ ಚಿಕ್ಕನರಸಿಂಹಯ್ಯ ಹೇಳುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.