ADVERTISEMENT

ಜ.18ರಂದು ತುಮಕೂರಿನಲ್ಲಿ ಸ್ಪರ್ಧೆ

ಜ.18ರಂದು ತುಮಕೂರಿನಲ್ಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 10:06 IST
Last Updated 13 ಜನವರಿ 2017, 10:06 IST
ತುಮಕೂರು: ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ಗಾಗಿ ರಾಜ್ಯದ 10 ನಗರಗಳಲ್ಲಿ 2017ರ ಜನವರಿ 4ರಿಂದ 21ರವರೆಗೆ ವಿಭಾಗ ಮಟ್ಟದ ಸ್ಪರ್ಧೆಗಳು ನಡೆಯಲಿವೆ.
 
ತುಮಕೂರಿನಲ್ಲಿ ಜನವರಿ 18ರ ಬುಧವಾರ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಸ್ಪರ್ಧೆ  ನಡೆಯಲಿದೆ.
 
10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಡೆಯುವ ಈ ಸ್ಪರ್ಧೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಒಂದು ಶಾಲೆಯಿಂದ ತಲಾ ಇಬ್ಬರಂತೆ ಗರಿಷ್ಠ ಮೂರು ತಂಡಗಳು ಭಾಗವಹಿಸಬಹುದು.
 
ತುಮಕೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಇಲ್ಲಿ ವಿಜೇತವಾಗುವ ತಂಡ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಲಿದೆ. 
 
ಅಂತಿಮ ಸುತ್ತು ಜನವರಿ 21ರಂದು ಬೆಂಗಳೂರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ.
 
ಅಂತಿಮ ಸುತ್ತಿನಲ್ಲಿ ವಿಜೇತ ತಂಡಗಳಿಗೆ ಮೊದಲನೇ ಬಹುಮಾನ ₹ 50 ಸಾವಿರ, 2ನೇ ಬಹುಮಾನ ₹ 30 ಸಾವಿರ, 3ನೇ ಬಹುಮಾನ ₹ 10 ಸಾವಿರ, 4ನೇ ಬಹುಮಾನ ₹ 6 ಸಾವಿರ ಹಾಗೂ 5ನೇ ಬಹುಮಾನ ₹ 4 ಸಾವಿರ ನಗದು ದೊರೆಯಲಿದೆ.
 
ಪ್ರವೇಶದ ಅರ್ಜಿಗಳನ್ನು ಕಳುಹಿಸಲು ಶನಿವಾರ (ಜ. 14) ಕಡೆಯ ದಿನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಶಾಲೆಯ ವಿದ್ಯಾರ್ಥಿ ತಂಡಗಳು ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪರ್ಕಿಸಬೇಕಾದ ಸಂಖ್ಯೆ: ತುಮಕೂರು ಜಿಲ್ಲೆ– ಸಂಗಮೇಶ್ (ಮೊಬೈಲ್‌ – 8884432492), ಶ್ರೀನಿವಾಸ್ (ಮೊಬೈಲ್– 9449397747), ಚಿಕ್ಕಬಳ್ಳಾಪುರ ಜಿಲ್ಲೆ– ರಾಚಯ್ಯಸ್ವಾಮಿ (ಮೊಬೈಲ್– 9449152823).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.