ADVERTISEMENT

ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಅಡ್ಡಿಪಡಿಸಿಲ್ಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 9:14 IST
Last Updated 14 ನವೆಂಬರ್ 2017, 9:14 IST

ಚಿಕ್ಕನಾಯಕನಹಳ್ಳಿ: ಟಿಪ್ಪು ಜಯಂತಿ ಆಚರಣೆಗೆ ತಾಲ್ಲೂಕಿನಲ್ಲಿ ಬಿ.ಜೆ.ಪಿ ಅಡ್ಡಿ ಮಾಡಿಲ್ಲ ಹಾಗೂ ವಿರೋಧಿಸಿ ಯಾವ ಅಧಿಕಾರಿಗೂ ದೂರು ಸಲ್ಲಿಸಿಲ್ಲ ಎಂದು ಪಕ್ಷದ ಮುಖಂಡ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಪಟ್ಟಣದ ತಾತಯ್ಯನ ಗೋರಿಯಲ್ಲಿ ನಡೆದ ಮುಸ್ಲಿಮ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತ್ಯುತ್ಸವದಲ್ಲಿ ಶಾಸಕ ಜಮೀರ್ ಅಹಮದ್ ಭಾಗವಹಿಸುವುದನ್ನು ತಡೆಯಲು ಶಾಸಕ ಸಿ.ಬಿ. ಸುರೇಶ್‌ಬಾಬು ಅವರೇ ಅಡ್ಡಗಾಲು ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ತಾಲ್ಲೂಕು ಆಡಳಿತ ಕರೆದಿದ್ದ ಜಯಂತ್ಯುತ್ಸವ ಸಿದ್ಧತಾ ಸಭೆಯಲ್ಲಿ ಬಿಜೆಪಿ ಮುಖಂಡರೂ ಭಾಗವಹಿಸಿದ್ದರು. ನ.11ರಂದು ಜಯಂತಿ ಆಚರಿಸುವುದಾಗಿ ನಡಾವಳಿಯಲ್ಲಿ ದಾಖಲಿಸಿ, ಕರಪತ್ರಗಳನ್ನೂ ಹಂಚಲಾಗಿತ್ತು. ಆದರೆ ಜಮೀರ್ ಅಹಮದ್ ಭಾಗವಹಿವ ಕಾರಣಕ್ಕಾಗಿ ಏಕಾಏಕಿ ಒಂದು ದಿನ ಮುಂಚಿತವಾಗಿ ಆಚರಿಸಿದ್ದಾರೆ ಎಂದರು.

ADVERTISEMENT

ಮುಖಂಡ ಸಾಮಿಲ್ ಬಾಬು ಮಾತನಾಡಿ, ಸುರೇಶ್‌ಬಾಬು ಅಲ್ಪ ಸಂಖ್ಯಾತರನ್ನು ಓಟ್ ಬ್ಯಾಂಕ್ ಎಂಬು ಭಾವಿಸಿದ್ದರೆ. ಟಿಪ್ಪು ಜಯಂತಿ ದಿನ ಗೊಂದಲ ಸೃಷ್ಟಿಸಿ ಮುಸ್ಲಿಮರು ಭಾಗವಹಿಸದಂತೆ ಮಾಡಿದ್ದಾರೆ ಎಂದು ದೂರಿದರು. ಪುರಸಭೆ ಸದಸ್ಯ ಸಿ.ಎಂ. ರಂಗಸ್ವಾಮಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.