ADVERTISEMENT

ನೆಲಕಚ್ಚಿದ ಅಡಿಕೆ, ತೆಂಗು

​ಪ್ರಜಾವಾಣಿ ವಾರ್ತೆ
Published 16 ಮೇ 2017, 4:55 IST
Last Updated 16 ಮೇ 2017, 4:55 IST
ಶಿರಾ ತಾಲ್ಲೂಕಿನ ನ್ಯಾಯಗೆರೆ ಗ್ರಾಮದಲ್ಲಿ  ಅರಳಿಮರ ರಸ್ತೆಗೆ ಅಡ್ಡವಾಗಿ ಬಿದ್ದಿದೆ
ಶಿರಾ ತಾಲ್ಲೂಕಿನ ನ್ಯಾಯಗೆರೆ ಗ್ರಾಮದಲ್ಲಿ ಅರಳಿಮರ ರಸ್ತೆಗೆ ಅಡ್ಡವಾಗಿ ಬಿದ್ದಿದೆ   

ಶಿರಾ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುರಿದ ಮಳೆ ಮತ್ತು ಗಾಳಿಗೆ ಅಪಾರ ನಷ್ಟವಾಗಿದೆ. ಸೋಮವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸೊರೆಕುಂಟೆ ಗ್ರಾಮದಲ್ಲಿ 400, ಭೂವನಹಳ್ಳಿಯಲ್ಲಿ 105, ದೊಡ್ಡಗೂಳ ಗ್ರಾಮದಲ್ಲಿ 100 ಅಡಿಕೆ ಮರಗಳು ನೆಲಕಚ್ಚಿವೆ. 36 ಮನೆಗಳಿಗೆ ಅಲ್ಪಪ್ರಮಾಣದಲ್ಲಿ ಹಾನಿಯಾಗಿದೆ. ನ್ಯಾಯಗೆರೆ ಗ್ರಾಮದಲ್ಲಿ 10 ಮನೆಗಳು, 150 ಅಡಿಕೆ ಮರ, ತೆಂಗು, ಬಾಳೆ, ಹಲಸು, ಮಾವು ಹಾಗೂ ಬೇವಿನ ಮರಗಳು ನೆಲಕಚ್ಚಿವೆ. ಯಲಿಯೂರು ಗ್ರಾಮದಲ್ಲಿ 4 ಮನೆ ಹಾಗೂ 150 ಅಡಿಕೆ, 5 ತೆಂಗಿನ ಮರ, ಯರಗುಂಟೆಯಲ್ಲಿ 10 ಅಡಿಕೆ ಮರ, ಕೆಂಪನಹಳ್ಳಿ, ಕದುರೇಕಂಬದಹಳ್ಳಿ ಗ್ರಾಮಗಳಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ನೆಲಕಚ್ಚಿವೆ. ನ್ಯಾಯಗೆರೆ ಗ್ರಾಮದ ರಸ್ತೆಯಲ್ಲಿ ಅರಳಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ಹಲವು ಕಡೆ ಕಂಬಗಳು ಬಿದ್ದ ಕಾರಣ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಕುಡಿಯುವ ನೀರಿಗೆ ಜನರು ಕಷ್ಟಪಡುತ್ತಿದ್ದಾರೆ.  ತಹಶೀಲ್ದಾರ್ ಎಸ್.ಸಿ.ಹೊನ್ನಶ್ಯಾಮೇಗೌಡ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಆರ್.ಐ ಮಂಜುನಾಥ್, ಅರಣ್ಯ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.