ADVERTISEMENT

ಫೆ.12ರಂದು ಗ್ರಾ.ಪಂ 11 ಸ್ಥಾನಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:27 IST
Last Updated 30 ಜನವರಿ 2017, 7:27 IST

ತುಮಕೂರು: ಜಿಲ್ಲೆಯ ತುಮಕೂರು, ಕುಣಿಗಲ್, ತುರುವೇಕೆರೆ, ಮಧುಗಿರಿ,ಶಿರಾ ಹಾಗೂ ಪಾವಗಡ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ 11 ಸದಸ್ಯ ಸ್ಥಾನಗಳಿಗೆ ಫೆಬ್ರುವರಿ 12ರಂದು ಉಪಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಫೆಬ್ರುವರಿ 2 ಕೊನೆಯ ದಿನಂಕವಾಗಿದೆ. ಫೆ.3ರಂದು ಪರಿಶೀಲನೆ ನಡೆಯಲಿದೆ. ಫೆ. 6ರಂದು ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.

ಫೆ.12ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಫೆ.15ರಂದು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಚುನಾವಣೆ ನಡೆಯುವ ಸ್ಥಾನಗಳು: ತುಮಕೂರು ತಾಲ್ಲೂಕಿನ ಗೂಳೂರು ಪಂಚಾಯಿತಿಯ ಗೂಳಹರಿವೆ, ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಪಂಚಾಯಿತಿಯ ಕಡಸಿಂಗನಹಳ್ಳಿ, ತುರುವೇಕೆರೆ ತಾಲ್ಲೂಕಿನ ಮುನಿಯೂರು ಪಂಚಾಯಿತಿಯ ಮುನಿಯೂರು, ಹುಲ್ಲೇಕೆರೆ ಪಂಚಾಯಿತಿ ಮಾಚೇನಹಳ್ಳಿ, ಮಧುಗಿರಿ ತಾಲ್ಲೂಕಿನ ರೆಡ್ಡಿಹಳ್ಳಿ ಪಂಚಾಯಿತಿಯ ರೆಡ್ಡಿಹಳ್ಳಿ, ರಂಟವಳಲು ಪಂಚಾಯಿತಿಯ ಮಾಯಗೊಂಡನಹಳ್ಳಿ,  ಶಿರಾ ತಾಲ್ಲೂಕಿನ ದೊಡ್ಡ ಅಗ್ರಹಾರ ಪಂಚಾಯಿತಿಯ ಚಿಕ್ಕಅಗ್ರಹಾರ, ಬುಕ್ಕಾಪಟ್ಟಣ ಪಂಚಾಯಿತಿಯ ಹೊಸಹಳ್ಳಿಯ 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಪಾವಗಡ ತಾಲ್ಲೂಕಿನ ನ್ಯಾಯದಗುಂಟೆ ಪಂಚಾಯಿತಿಯ ಚಿಕ್ಕನ ತಿಮ್ಮಹಟ್ಟಿ, ಪೋತಗಾನಹಳ್ಳಿ ಪಂಚಾಯಿತಿಯ ದಳವಾಯಿಹಳ್ಳಿ ಕ್ಷೇತ್ರದ ತಲಾ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.