ADVERTISEMENT

ಮತದಾರರ ಪಟ್ಟಿ ಪರಿಶೀಲನೆಗೆ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮತ್ತು ನಗರ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರ ಧರಣಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 9:11 IST
Last Updated 14 ಡಿಸೆಂಬರ್ 2017, 9:11 IST

ತುಮಕೂರು: ನಗರದ 63 ಬೂತ್‌ಗಳಲ್ಲಿ ಮತದಾರರ ಪಟ್ಟಿ ಪರಿಶೀಲನೆಗೆ ವಿಶೇಷ ತಂಡ ರಚನೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಮತ್ತು ನಗರ ಯುವ ಮೋರ್ಚಾ ಘಟಕಗಳ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ಮಾಡಿದರು.

ಬಾಂಗ್ಲಾ ಅಕ್ರಮ ವಲಸಿಗರು ಸೇರಿದಂತೆ ನಕಲಿ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದು, ವಿಶೇಷ ತಂಡದ ಮೂಲಕ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ವ್ಯಾಪಕವಾಗಿ ನಕಲಿ ಮತದಾರರಿದ್ದಾರೆ. ಈಗಾಗಲೇ ಈ ಸಂಬಂಧ ಅನೇಕ ಹೋರಾಟ, ಪ್ರತಿಭಟನೆ ಮಾಡಲಾಗಿದೆ. ಒಂದು ವರ್ಷದಿಂದ ಮನವಿ ಸಲ್ಲಿಸಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ADVERTISEMENT

ಈ ಕುರಿತು ತನಿಖೆ ನಡೆಸಬೇಕು. ಕೂಡಲೇ ಮತದಾರರ ಪಟ್ಟಿ ಪರಿಶೀಲನೆಗೆ ವಿಶೇಷ ತಂಡ ರಚಿಸಬೇಕು ಎಂದು ಕೋರಿದರು.

  1. ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತರಾಜು, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಗಣೇಶ್ ಬಾವಿಕಟ್ಟೆ, ಶ್ರೀನಿವಾಸ್, ವಿನಯ್ ಹಿರೇಹಳ್ಳಿ, ಪ್ರೀತಂ ಜೈನ್, ಸಿದ್ದರಾಜುಗೌಡ, ರಮೇಶ್, ಶರತ್, ಪುರುಷೋತ್ತಮ್, ಗುರುಪ್ರಸಾದ್, ರುದ್ರೇಶ್, ರಕ್ಷಿತ್, ಶಶಿ, ಸುನೀಲ್, ಕಾರ್ತಿಕ್ ನಾಯಕ್, ಕೊಪ್ಪಲ್ ನಾಗರಾಜು, ತರಕಾರಿ ಉಮೇಶ್, ಶಂಭುಲಿಂಗಸ್ವಾಮಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.