ADVERTISEMENT

ಮಧುಗಿರಿಯ ಸಿಹಿನೀರು ಬಾವಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:47 IST
Last Updated 22 ಮಾರ್ಚ್ 2017, 5:47 IST

ಮಧುಗಿರಿ: ಪಟ್ಟಣದ ಏಕಶಿಲಾ ಬೆಟ್ಟದ  ತಪ್ಪಲಿನಲ್ಲಿರುವ ಸಿಹಿ ನೀರು ಬಾವಿ  ಮಧುಗಿರಿ ಪಟ್ಟಣದ ಓಯಸಿಸ್‌ ಆಗಿದೆ. ಬಾವಿ ಬತ್ತಿದ್ದು ಕಂಡವರಿಲ್ಲ ಎಂದು ಹೇಳುವವರೂ ಇದ್ದಾರೆ. ಎಂಥ ಬೇಸಿಗೆಯಲ್ಲೂ ಪಟ್ಟಣದ ಜನರಿಗೆ ಬಾವಿ ನೀರು ಕೊಡುತ್ತಿದೆ.

ಪಟ್ಟಣ ಜನರು ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರು ಕಾರು, ಆಟೊ,ಟ್ರ್ಯಾಕ್ಟರ್‌, ಸೈಕಲ್‌ಗಳಲ್ಲಿ  ಬಂದು ಕುಡಿಯಲು ಈ ಬಾವಿಯ ನೀರುತೆಗೆದುಕೊಂಡು ಹೋಗುತ್ತಾರೆ.

ನೀರು ಸೇದಿ ತೆಗೆದುಕೊಂಡು ಹೋಗಬೇಕಾಗಿರುವುದರಿಂದ ಕುಡಿಯಲು ಎಷ್ಟು ಬೇಕೋ ಅಷ್ಟೇ ನೀರನ್ನು ಜನರು ತೆಗೆದುಕೊಂಡು ಹೋಗುತ್ತಾರೆ. ಬಾವಿಯ ನೀರು  ಈಗ ಸ್ವಲ್ಪ ಕಡಿಮೆಯಾದಂತೆ ಕಾಣುತ್ತಿದೆ. ಆದರೂ ನೀರು ಮಾತ್ರ ಬತ್ತಿಲ್ಲ. ಇದರಿಂದ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಿದೆ.

ಬೇಸಿಗೆ ಮಾತ್ರವಲ್ಲ ಮಳೆ ಗಾಲದಲ್ಲೂ ಈ ಬಾವಿಯ ನೀರೇ ಪಟ್ಟಣದ ಜನರಿಗೆ ಬೇಕು. ಪಟ್ಟಣದ ಬಹುತೇಕ ಹೋಟೆಲುಗಳು  ಗ್ರಾಹಕರಿಗೆ ಬಾವಿಯನೀರು ನೀಡುತ್ತಾರೆ.  ಅಲ್ಲದೇ ಗ್ರಾಹಕರು ಸಹ ಬಾವಿಯನ್ನೇ ಕೇಳಿಪಡೆಯುತ್ತಾರೆ.
–ಟಿ.ಪ್ರಸನ್ನಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.