ADVERTISEMENT

ಅಂತರ ಕಾಲೇಜು ಯುವ ಪ್ರೇರಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:59 IST
Last Updated 18 ಜನವರಿ 2017, 5:59 IST
ಅಂತರ ಕಾಲೇಜು ಯುವ ಪ್ರೇರಣಾ ಶಿಬಿರ
ಅಂತರ ಕಾಲೇಜು ಯುವ ಪ್ರೇರಣಾ ಶಿಬಿರ   

ಕಾರ್ಕಳ: ತಾಲ್ಲೂಕಿನ ಗುಂಡ್ಯಡ್ಕದಲ್ಲಿ ರುವ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಯುವ ಸಪ್ತಾಹದ ಅಂಗವಾಗಿ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕಗಳ ಆಶ್ರಯದಲ್ಲಿ ಒಂದು ದಿನದ ಅಂತರಕಾಲೇಜು ಯುವ ಪ್ರೇರಣಾ ಶಿಬಿರ ಆಯೋಜಿಸಲಾಯಿತು.

ಉಡುಪಿ ಜಿಲ್ಲಾ ಭಾರತ್ ಸ್ಕೌಟ್‌ ಅಂಡ್ ಗೈಡ್ಸ್‌ನ ಉಪಾಧ್ಯಕ್ಷೆ ಜ್ಯೋತಿ ಪೈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಯುವಶಕ್ತಿ ಗುರು ಹಿರಿಯರ ಸೂಕ್ತ ಮಾರ್ಗದರ್ಶನ ಪಡೆದು ಪ್ರಬಲಗೊಳ್ಳ ಬೇಕು. ದೇಶವನ್ನು ಸದೃಢಗೊಳಿಸುವತ್ತ ಅದು ಮುನ್ನಡೆಯಬೇಕು ಎಂದರು.

ಉಡುಪಿಯ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿಯ ಪ್ರಾಂಶುಪಾಲ ಪ್ರೊ. ಜೈಕಿಶನ್ ಭಟ್, ಭಾರತ್ ಸ್ಕೌಟ್‌ ಅಂಡ್ ಗೈಡ್ಸ್‌ನ ಉಡುಪಿ ಜಿಲ್ಲಾ ಸಂಘಟಕ ನಿತಿನ್ ಅಮೀನ್, ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ರೋವರ್ ಲೀಡರ್ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.

ಕಾಲೇಜಿನ ಪ್ರಾಶುಪಾಲ ಪ್ರೊ. ಶ್ರೀವರ್ಮ ಅಜ್ರಿ ಎಂ. ಶುಭಹಾರೈಸಿದರು. ಶಿಬಿರದಲ್ಲಿ ವಿದ್ಯಾಥಿಗಳು ಹಲವು ವಿಷಯಗಳ ಕುರಿತು  ತಮ್ಮ ವಿಚಾರ ಮಂಡಿಸಿದರು. ಕಾಲೇಜಿನ ರೋವರ್ ಲೀಡರ್ ಕೃಷ್ಣಮೂರ್ತಿ ವೈದ್ಯ ಮತ್ತು ರೇಂಜರ್ ಲೀಡರ್ ಜ್ಯೋತಿ ಎಲ್.ಜೆ. ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಇತರ 6 ಕಾಲೇಜುಗಳ 50 ಮಂದಿ ವಿದ್ಯಾರ್ಥಿ ಗಳನ್ನು ಒಳಗೊಂಡಂತೆ 150 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾಲೇಜಿನ ಪ್ರಾಧ್ಯಾಪಕಿ ಗೌರಿ ಎಸ್. ಭಟ್, ಯೋಗೇಶ್ ಡಿ.ಎಚ್. ಕೃಷ್ಣ ಭಟ್, ಕಚೇರಿ ಅಧೀಕ್ಷಕ ಪ್ರಭು ಕೆ.ಎಸ್.ಮೂಡುಬಿದಿರೆ ಧವಳ ಪ್ರಥಮದರ್ಜೆ ಕಾಲೇಜಿನ ರೇಂಜರ್ ಲೀಡರ್ ಶೈಲಜಾ ಮತ್ತು ಇತರರು ಶಿಬಿರದಲ್ಲಿ ಭಾಗವಹಿಸಿದರು. ರೋವರ್ ನವೀನ ಮತ್ತು ರೇಂಜರ್ ಮಧುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.