ADVERTISEMENT

ಅಂತಿಮ ಹಂತದಲ್ಲಿ ಕೊಳಲಗಿರಿ ಸಂಪರ್ಕ ಸೇತುವೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:57 IST
Last Updated 21 ಏಪ್ರಿಲ್ 2014, 8:57 IST

ಬ್ರಹ್ಮಾವರ: ಕುಂಜಾಲು ಆರೂರು ಕೊಳಲಗಿರಿಯನ್ನು ಸಂಪರ್ಕಿಸಲು ಆರೂರಿನಲ್ಲಿ ಹಾದುಹೋಗುವ ಮಡಿ ಸಾಲು ಹೊಳೆಗೆ ಸುಮಾರು ₨೩ ಕೋಟಿ ಅಂದಾಜಿನಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ.

ಸ್ವಾತಂತ್ರ್ಯ ಪೂರ್ವದ ಈ ಯೋಜನೆಯ ಕನಸು ಕಂಡವರು ಆರೂರಿನ ದಿ.ಮಹಾ ಬಲ ಪಟೇಲರು. ಸ್ವಾತಂತ್ರ್ಯ ಪೂರ್ವ ದಲ್ಲೇ ಕಾಮಗಾರಿ ಪ್ರಾರಂಭಿಸಿ ಶೀಘ್ರವೇ ಪೂರ್ಣಗೊಳಿಸಿ ಈ ಮೂಲಕ ಕೆ.ಜಿ.ರೋಡ್ -ಉಡುಪಿ -ಮಣಿಪಾಲ ಮತ್ತು ಕೊಳಲಗಿರಿಯಿಂದ ಹಾವಂಜೆ ಪೆರ್ಡೂರಿಗೆ ನೇರ ಸಂಪರ್ಕ ಕಲ್ಪಿಸುವ ಮತ್ತು ಸೇತುವೆ ಮೂಲಕ ಆರೂರು, ಚೇರ್ಕಾಡಿ, ನೀಲಾವರ, ಕೊಕ್ಕರ್ಣೆ, ಪೇತ್ರಿ, ಉಪ್ಪೂರು, ಹಾವಂಜೆ ಜನತೆಗೆ ನಿತ್ಯ ಸಂಚಾರಕ್ಕೆ ಅನುಕೂಲ ಮಾಡಿ ಸುವ ಯೋಜನೆಯಾಗಿತ್ತು. ಆದರೆ ಹಣಕಾಸಿನ ಅಡಚಣೆಯಿಂದಾಗಿ ಅವರ ಕನಸು ನನಸಾಗಿರಲಿಲ್ಲ.

ನಂತರ ೩೦ ವರ್ಷಗಳ ಹಿಂದೆ ಸುಮಾರು ₨೧೫ ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ಆರಂಭ ಗೊಂಡಿತು. ಕೇವಲ ಎರಡು ಬದಿಯಲ್ಲಿ ಎರಡು ಪಿಲ್ಲರ್‌ರ್‌ಗಳು ಮತ್ತು ಆರೂರು -ಬೆಳ್ಮಾರು ರಸ್ತೆ ನಿರ್ಮಾಣದ ಕೆಲಸ ಆರಂಭವಾದ ಕೆಲವೇ ತಿಂಗಳಲ್ಲಿ ದಿಢೀರನೆ ಕಾಮಗಾರಿ ಸ್ಥಗಿತಗೊಳಿಸ ಲಾಗಿತ್ತು.

ನಂತರ ಗ್ರಾಮಸ್ಥರ ನಿರಂತರ ಹೋರಾಟ ಮತ್ತು ಶಾಸಕ ಕೆ.ರಘುಪತಿ ಭಟ್ ಅವರ ಶ್ರಮದಿಂದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಡುಪಿ ವಿಭಾಗದಿಂದ  ಸುಮಾರು ₨೩ಕೋಟಿ ಅಂದಾಜಿನ ಕಾಮಗಾರಿಗೆ ಅಂದಿನ ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 2012ರ ಡಿ.9ರಂದು ಶಿಲಾನ್ಯಾಸ ಮಾಡಿದರು.  ಇದೀಗ ಸೇತುವೆಯ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಮೇ ತಿಂಗಳೊಳಗೆ ಸೇತುವೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.

ಸೇತುವೆಯ ಅಗತ್ಯತೆ : ಆರೂರಿನಲ್ಲಿ ಹರಿಯುವ ಮಡಿಸಾಲು ಹೊಳೆಗೆ ಸೇತುವೆ ನಿರ್ಮಾಣದಿಂದ ಪೇತ್ರಿ, ಕರ್ಜೆ, ಕೊಕ್ಕರ್ಣೆ, ಕುಂಜಾಲು, ಚೇರ್ಕಾಡಿಯ ಜನತೆಗೆ ಕೆ.ಜಿ ರೋಡ್‌ ಮೂಲಕ ಉಡುಪಿ, ಮಣಿಪಾಲಕ್ಕೆ ಹೋಗಲು ನೇರ ಸಂಪರ್ಕ ದೊರಕಿದಂತಾಗಿ ಸುಮಾರು ೧೦ರಿಂದ ೧೫ ಕಿ.ಮೀ ನಷ್ಟು ದೂರದ ಉಳಿತಾಯವಾಗುತ್ತದೆ.

ಹಾವಂಜೆ ಪರಾರಿ ಮಣಿಪಾಲಕ್ಕೆ ಸಂಪರ್ಕ ಸೇತುವೆಗೆ ಆಗ್ರಹ
ಹಾವಂಜೆಯ ಪರಾರಿಯಿಂದ ಮಣಿಪಾಲದ ಮಧ್ಯೆ ಹರಿಯುವ ಸ್ವರ್ಣ ನದಿಗೆ ಇನ್ನೊಂದು ಸಂಪರ್ಕ ಸೇತುವೆ ನಿರ್ಮಾಣವಾದಲ್ಲಿ ಕೊಳಲ ಗಿರಿಯಿಂದ ಕೇವಲ ಮೂರ್ನಾಲ್ಕು ಕಿಲೋ ಮೀಟರ್‌ ಅಂತರದಲ್ಲಿ ಮಣಿಪಾಲಕ್ಕೆ ಹೋಗಬಹುದಾಗಿದೆ. ಈಗಾಗಲೇ ಸೇತುವೆ ನಿರ್ಮಾಣದ ಬಗ್ಗೆ ಅನೇಕ ಮನವಿಗಳು ಜನಪ್ರತಿನಿಧಿಗಳಿಗೆ ಹೋಗಿದ್ದು, ಇದನ್ನೂ ಮಾಡುವ ಭರವಸೆ ಅಂದಿನ ಶಾಸಕ ರಘುಪತಿ ಭಟ್‌ ನೀಡಿದ್ದರು. ಆದರೆ ಇದುವರೆಗೂ ಕಾಮಗಾರಿಯ ಬಗ್ಗೆ ಏನೂ ಮಾಹಿತಿ ದೊರಕುತ್ತಿಲ್ಲ.  ಈ ಸೇತುವೆಯನ್ನೂ ಕೂಡಲೇ ನಿರ್ಮಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸೇತುವೆ ನಿರ್ಮಾಣವಾದಲ್ಲಿ ಆರೂರು ಮೂಲಕ ಮಣಿಪಾಲಕ್ಕೆ ನೇರವಾಗಿ ಹೋಗಬಹುದಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ.

ಸೇತುವೆ ಕಾರ್ಯ ಪೂರ್ಣ ಸಂಪರ್ಕ ಎಂದು?
ಶೇತುವೆ ಕಾರ್ಯ ಬರುವ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ ಎರಡೂ ಬದಿಯಲ್ಲಿ ಮಣ್ಣು ತುಂಬಿ ರಸ್ತೆ ಸಂಪರ್ಕ ಮಾಡಲು ಇಲಾಖೆ ಹಿಂದೇಟು ಹಾಕಿದಲ್ಲಿ ಈ ಮಳೆಗಾಲವೂ ಸೇತುವೆಯ ಬಳಕೆ ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟ ಇಲಾಖೆ ಈ ಮಳೆಗಾಲದೊಳಗೆ ಎರಡೂ ಕಡೆ ಮಣ್ಣು ಹಾಕಿ ಇದೇ ಮಳೆಗಾಲದ ಮುನ್ನ ಸಂಪರ್ಕ ಕಲ್ಪಿಸಲು ಪ್ರಯತ್ನ ಪಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

5ತಿಂಗಳಲ್ಲಿ ಪೂರ್ಣ
ಸೇತುವೆಯ ಗುತ್ತಿಗೆ ಕಾರ್ಯವನ್ನು ವಹಿಸಿಕೊಂಡಿರುವ ಕೇರಳ ಕಾಸರ ಗೋಡಿನ ಲಾಫ್ ಕನ್ಸಟ್ರಕ್ಷನ್ ಕಂಪೆನಿ ೧೨ತಿಂಗಳಿನ್ಲಲಿ (ಮಳೆಗಾಲ ಹೊರತು ಪಡಿಸಿ) ಕಾಮಗಾರಿ ಪೂರ್ಣ ಗೊಳಿಸಲು ಉದೇಶಿಸ್ದಿದರೂ, ಕೇವಲ ೫ತಂಗಳಿನ್ಲಲಿ ಮುಗಿಸಲು ಯೋಜನೆ ರೂಪಿಸಿದೆ. ಬರುವ ಮೇ ಒಳಗೆ ಸೇತುವೆ ಕಾಮಗಾರಿ ಸಂಪೂರ್ಣ ಮುಗಿಯುತ್ತದೆ ಎಂದು ಗುತ್ತಿಗೆದಾರ ಪಿ.ಎ.ಮಹಮ್ಮದ್ ಕುಂಜ್ಞಿ ತಿಳಿಸ್ದಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.