ADVERTISEMENT

ಅಕ್ರಮ ಬೇಟೆ: ಕಾಡುಕೋಣಗಳ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:25 IST
Last Updated 6 ಸೆಪ್ಟೆಂಬರ್ 2017, 7:25 IST

ಕುಂದಾಪುರ: ತಾಲ್ಲೂಕಿನ ಅಂಪಾರು ಗ್ರಾಮದ ಕೊಲ್ಲೂರು ರಸ್ತೆಯಲ್ಲಿ ಮಂಗಳವಾರ ನಸುಕಿನ ವೇಳೆ ದುಷ್ಕರ್ಮಿಗಳು 2 ಕಾಡುಕೋಣಗಳನ್ನು  ಗುಂಡುಹೊಡೆದು ಬೇಟೆಯಾಡಿದ್ದಾರೆ.

ಕಾಡುಕೋಣಗಳ ಶವ ರಸ್ತೆ ಪಕ್ಕದ ಪೊಡೆಯಲ್ಲಿ ಕಂಡು ಬಂದಿದ್ದು , ಅವುಗಳನ್ನು ಸಾಗಿಸಲು ಬೇಟೆಗಾರರಿಗೆ ಸಾಧ್ಯವಾಗಿಲ್ಲಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಅವರ ತಂಡದವರು ಪ್ರಕರಣವನ್ನು ಪರಿಶೀಲಿಸಿ ಕಾಡುಕೋಣವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದಲ್ಲಿ1 ಕಾರು,1ಗೂಡ್ಸ್,1 ಬೈಕ್ ಹಾಗೂ 8 ಜನರು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.