ADVERTISEMENT

ಅಧಿಕಾರಿಗಳ ಕಾರ್ಮಿಕ ವಿರೋಧಿ ಧೋರಣೆ–ಖಂಡನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 8:24 IST
Last Updated 24 ನವೆಂಬರ್ 2014, 8:24 IST

ಕುಂದಾಪುರ: ಕಾರ್ಮಿಕ ನಿಧಿಯನ್ನು ದುರ್ಬಳಿಕೆ ಮಾಡುವ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡದೆ ಇರುವ ಸರ್ಕಾರಿ ಇಲಾಖೆಗಳ ಹಾಗೂ ಅಧಿ ಕಾರಿ­ಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಸಿಡಿದೇಳಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿ­ಕರ ಸಂಘಟನೆಯ ಅಧ್ಯಕ್ಷ ಎನ್‌. ವೀರಸ್ವಾಮಿ ಹೇಳಿದರು.

ನಗರದ ಕಾರ್ಮಿಕ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಕಟ್ಟಡ ಹಾಗೂ ಇತರೆ ಕಾರ್ಮಿಕರ ಸಂಘದ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿಐಟಿಯು ಸಂಘಟನೆಯ ಹಲವು ದಶಕಗಳ ಹೋರಾಟದ ಫಲವಾಗಿ ಕಾರ್ಮಿಕ ಕಲ್ಯಾಣ ನಿಧಿಯ ಸ್ಥಾಪನೆ­-ಯಾ­ಗಿದೆಯೇ ಹೊರತು  ಸರ್ಕಾರದ ಸ್ವಇಚ್ಚೆಯ ಕೊಡುಗೆಯಲ್ಲ.

ಕಾರ್ಮಿ ಕರ ಕಲ್ಯಾಣಗಳಿಗಾಗಿ ಬಳಕೆಯಾಗ ಬೇಕಾದ ಈ ನಿಧಿಯನ್ನು ಇತ್ತೀಚಿನ ದಿನಗಳಲ್ಲಿ ಕಾರ್ಮಿಕ ಕಲ್ಯಾಣ ಭವನ­ಗಳ ನಿರ್ಮಾಣದ ಹೆಸರಿನಲ್ಲಿ ವ್ಯಯ ಮಾಡಲಾಗುತ್ತಿದೆ. ಕಮಿಷನ್‌ ಆಸೆ­ಗಾಗಿ ಕೋಟ್ಯಂತರ ರೂಪಾಯಿ  ದುರ್ಬ­ಳಕೆ ಮಾಡುವ ಮೂಲಕ ಕಾರ್ಮಿಕ ವರ್ಗದವರಿಗೆ ನ್ಯಾಯ ಯುತವಾಗಿ ಸಿಗಬೇಕಾದ ಸವಲತ್ತು ಗಳ ವಂಚನೆಗಾಗಿ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.
ಇದೇ 25ರಿಂದ ಉಡುಪಿಯ ಜಿಲ್ಲಾ­ಧಿಕಾರಿಗಳ ಕಚೇರಿಯ ಆವರಣದಲ್ಲಿ ಇರುವ ಕಾರ್ಮಿಕ ಇಲಾಖೆಯ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು.

ಹಿರಿಯ ಕಾರ್ಮಿಕ ಮುಖಂಡ ಯು.ದಾಸು ಭಂಡಾರಿ ಅಧ್ಯಕ್ಷತೆ ವಹಿಸಿ ದ್ದರು. ಉಡುಪಿ ಜಿಲ್ಲಾ ಸಿಐಟಿಯು ಅಧ್ಯಕ್ಷ ಕೆ ಶಂಕರ, ಕಾರ್ಮಿಕ ಸಂಘಟನೆ ಯಗಳ ಪ್ರಮುಖರಾದ ಸುರೇಶ್ ಕಲ್ಲಾಗರ, ಜಗದೀಶ್ ಆಚಾರ್ ಹೆಮ್ಮಾಡಿ, ಶ್ರೀನಿವಾಸ ಪೂಜಾರಿ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ಗಣೇಶ್ ತೊಂಡೆಮಕ್ಕಿ, ಗಣೇಶ್ ಮೊಗವೀರ, ಚಂದ್ರ ಅಂಪಾರ್, ಸುಧಾಕರ ಕುಂಭಾಶಿ, ಸತೀಶ್ ತೆಕ್ಕಟ್ಟೆ, ಸುರೇಶ್ ದೇವ ಲ್ಕುಂದ, ಜಿತೇಂದ್ರ ಕೊಣಿ, ಶ್ರೀಧರ ಉಪ್ಪುಂದ ಮತ್ತಿತರರು ಉಪ ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.